Advertisement

ಅಂತಿಮ ಪಂದ್ಯ ಗೆದ್ದ ಆಂಗ್ಲರು: ಸರಣಿ ಸಮಬಲ; ಆಶಸ್‌ ಉಳಿಸಿಕೊಂಡ ಆಸೀಸ್‌

10:56 AM Sep 17, 2019 | Team Udayavani |

ಲಂಡನ್: ಆಶಸ್‌ ಸರಣಿಯ ಅಂತಿಮ ಪಂದ್ಯವನ್ನು ಇಂಗ್ಲೆಂಡ್‌ 135 ರನ್‌ ಗಳ ಅಂತರದಿಂದ ಗೆದ್ದು ಕೊಂಡಿದೆ . 2-2 ಅಂತರದಿಂದ ಸರಣಿಸಮಬಲವಾದ ಕಾರನ ಟ್ರೋಫಿಯನ್ನು ಆಸ್ಟ್ರೇಲಿಯಾ ತನ್ನಲ್ಲಿಯೇ ಉಳಿಸಿಕೊಂಡಿದೆ.

Advertisement

ಓವಲ್‌ ಮೈದಾನದಲ್ಲಿ ಗೆಲುವಿಗೆ 399 ರನ್‌ ಗಲ ಕಠಿಣ ಗುರಿ ಪಡೆದ ಆಸ್ಟ್ರೇಲಿಯಾ ಆರಂಭದಲ್ಲಿ ಯಾವುದೇ ಉತ್ತಮ ಜೊತೆಯಾಟ ದೊರೆಯದೆ ಸಂಕಷ್ಟ ಅನುಭವಿಸಿತು. ಸರಣಿಯ ಸ್ಟಾರ್‌ ಆಟಗಾರ ಸ್ಟೀವ್‌ ಸ್ಮಿತ್‌ ಕೂಡಾ 24 ರನ್‌ ಗೆ ವಿಕೆಟ್‌ ಒಪ್ಪಿಸಿದ್ದು ತಂಡಕ್ಕೆ ಮುಳುವಾಯಿತು. ಆದರೆ ಮ್ಯಾಥ್ಯೂ ವೇಡ್‌ 116 ರನ್‌ ಗಳಿಸಿ ತಮ್ಮ ಹೋರಾಟ ಜಾರಿಯಲ್ಲಿರಿಸಿದರೂ ಇತರರಿಂದ ಬೆಂಬಲ ಸಿಗಲಿಲ್ಲ.

ಇಂಗ್ಲೆಂಡ್‌ ಪರ ಸ್ಟುವರ್ಟ್‌ ಬ್ರಾಡ್‌ ಮತ್ತು ಜ್ಯಾಕ್‌ ಲೀಚ್‌ ತಲಾ ನಾಲ್ಕು ವಿಕೆಟ್‌ ಪಡೆದು ಮಿಂಚಿದರೆ ನಾಯಕ ಜೋ ರೂಟ್‌ ಎರಡು ವಿಕೆಟ್‌ ಪಡೆದರು.

ಮೊದಲ ಇನ್ನಿಂಗ್ಸ್‌ ನಲ್ಲಿ ಆರು ವಿಕೆಟ್‌ ಪಡೆದಿದ್ದ ಜೋಫ್ರಾ ಆರ್ಚರ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಆಸೀಸ್‌ ಪರ ಸ್ಟೀವ್‌ ಸ್ಮಿತ್‌ ಸರಣಿ ಶ್ರೇಷ್ಠ ಪಡೆದರೆ, ಇಂಗ್ಲೆಂಡ್‌ ಪರ ಬೆನ್‌ ಸ್ಟೊಕ್ಸ್‌ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

ಮೊದಲ ಇನ್ನಿಂಗ್ಸ್‌
ಇಂಗ್ಲೆಂಡ್‌: 294
ಆಸ್ಟ್ರೇಲಿಯಾ: 225
ದ್ವಿತೀಯ ಇನ್ನಿಂಗ್ಸ್‌
ಇಂಗ್ಲೆಂಡ್‌: 329
ಆಸ್ಟ್ರೇಲಿಯಾ: 263

Advertisement
Advertisement

Udayavani is now on Telegram. Click here to join our channel and stay updated with the latest news.

Next