Advertisement

ಸ್ಮಿತ್‌ಗೆ ಲೇವಡಿ, ಆಸೀಸ್‌ ಪ್ರಧಾನಿ ಕಿಡಿ

11:11 PM Aug 19, 2019 | Sriram |

ಕ್ಯಾನ್‌ಬೆರಾ: ಮುಖಕ್ಕೆ ಗಂಭೀರವಾದ ಏಟು ಬಿದ್ದಿರುವ ಹೊರತಾಗಿಯೂ ಮರಳಿ ಬಂದು ದಿಟ್ಟ ಬ್ಯಾಟಿಂಗ್‌ ಪ್ರದರ್ಶಿಸಿದ ಸ್ಟೀವ್‌ ಸ್ಮಿತ್‌ ಅವರನ್ನು ಲೇವಡಿ ಮಾಡಿರುವ ಇಂಗ್ಲೆಂಡ್‌ ಕ್ರಿಕೆಟ್‌ ಅಭಿಮಾನಿಗಳ ವಿರುದ್ಧ ಆಸ್ಟ್ರೇಲಿಯದ ಪ್ರಧಾನಿ ಸ್ಕಾಟ್‌ ಮಾರಿಸನ್‌ ಕಿಡಿಕಾರಿದ್ದಾರೆ.

Advertisement

“ಸ್ಮಿತ್‌ ನಿಜವಾದ ಚಾಂಪಿಯನ್‌. ಇಷ್ಟು ವರ್ಷಗಳಲ್ಲಿ ವಿನೀತರಾಗಿಯೇ ಪರಿಸ್ಥಿತಿಯನ್ನು ನಿಭಾಯಿಸಿಕೊಂಡು ಬಂದಿದ್ದಾರೆ. ಸ್ಮಿತ್‌ ಬಗ್ಗೆ ನನಗೆ ಹೆಮ್ಮೆಯಿದೆ. ಪ್ರೇಕ್ಷಕರು ಸ್ಮಿತ್‌ ಅವರಿಂದ ಕಲಿತುಕೊಳ್ಳುವುದು ಬೇಕಾದಷ್ಟಿದೆ. ಸ್ಮಿತ್‌ ಬ್ಯಾಟ್‌ ಮತ್ತು ಚೆಂಡಿನಿಂದಲೇ ತನ್ನನ್ನು ಕುಹಕವಾಡಿದವರಿಗೆ ಉತ್ತರಿಸಿ ಆ್ಯಶಸ್‌ ಕಪ್‌ ತರುವುದನ್ನು ನೋಡ ಲಿಚ್ಛಿಸುತ್ತೇನೆ’ ಎಂದು ಮಾರಿಸನ್‌ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next