Advertisement

Australia: ಕೆಲಸದ ಅವಧಿ ಬಳಿಕ ಬಾಸ್‌ ನೌಕರರ ಮಧ್ಯೆ ಸಂಪರ್ಕ ಇಲ್ಲ

01:32 AM Aug 24, 2024 | Team Udayavani |

ಹೊಸದಿಲ್ಲಿ: ಕೆಲಸದ ಅವಧಿ ಮುಗಿದ ಬಳಿಕ ತಮ್ಮ ಬಾಸ್‌ಗಳನ್ನು ಅಲಕ್ಷ್ಯ ಮಾಡಬಹುದಾದ ಕಾನೂನನ್ನು ಆಸ್ಟ್ರೇಲಿಯಾದಲ್ಲಿ ಜಾರಿ ಮಾಡಲಾ ಗಿದೆ. ನೌಕರರ ಮಾನಸಿಕ ಆರೋಗ್ಯ ಕಾಪಾಡಲು ಈ ಕಾನೂನನ್ನು ಜಾರಿ ಮಾಡಲಾಗಿದೆ.

Advertisement

“ರೈಟ್‌ ಟು ಡಿಸ್‌ಕನೆಕ್ಟ್’ ಎಂದು ಕರೆ ಯಲ್ಪಡುವ ಈ ಕಾನೂನಿಗೆ ಸಂಸತ್ತು ಒಪ್ಪಿಗೆ ನೀಡಿತ್ತು. ಇದೀಗ ಆ.26ರಿಂದ ಇದು ಜಾರಿಯಾಗಲಿದೆ. ಇದರಿಂದಾಗಿ ಕೆಲಸದ ಅವಧಿ ಮುಕ್ತಾಯವಾದ ಬಳಿಕವೂ ನೌಕಕರನ್ನು ಗಮನಿಸು ವುದು, ಕೆಲಸ ಮಾಡಿಸುವುದು ಇಂತಹ ವುಗಳಿಗೆ ಅವಕಾಶ ಇರುವುದಿಲ್ಲ.

ಈ ಕಾನೂನಿಗೆ ಹಲವು ಕಂಪೆನಿಗಳು ವಿರೋಧ ವ್ಯಕ್ತಪಡಿಸಿದ್ದು, ಅನಿವಾರ್ಯ ಕೆಲಸ ಮಾಡುವ ನೌಕರರಿಗೆ ಇಂತಹ ಅವಕಾಶ ನೀಡುವುದರಿಂದ ತೊಂದರೆಗ ಳಾಗಬಹುದು ಎಂದು ವಾದಿಸಿದ್ದವು. ಅಲ್ಲದೇ ಹೆಚ್ಚಿನ ಅಧ್ಯಯನ ನಡೆಸದೇ ಆತುರವಾಗಿ ಸರಕಾರ‌ ಈ ನಿರ್ಧಾರ ವನ್ನು ಕೈಗೊಂಡಿದೆ ಎಂದಿದ್ದವು.

ಕಚೇರಿ ಅವಧಿಯ ಬಳಿಕ ಮೊಬೈಲ್‌ ಫೋನ್‌ಗಳನ್ನು ಸ್ವಿಚ್‌ ಆಫ್ ಮಾಡ ಬಹುದಾದಂತಹ ಅವಕಾಶಗಳು ಈಗಾಗಲೇ ಫ್ರಾನ್ಸ್‌, ಜರ್ಮನಿ ಮತ್ತು ಯುರೋಪಿಯನ್‌ ಯೂನಿಯನ್‌ನ ಇತರ ದೇಶಗಳಲ್ಲಿ ಜಾರಿಯಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next