Advertisement

ಸಿಡ್ನಿ ಟೆಸ್ಟ್ ನಲ್ಲಿ ಒತ್ತಡಕ್ಕೆ ಸಿಲುಕಿದ ಟೀಂ ಇಂಡಿಯಾ: ಮ್ಯಾಜಿಕ್ ನಡೆದರಷ್ಟೇ ಸಿಗಲಿದೆ ಜಯ

12:49 PM Jan 09, 2021 | Team Udayavani |

ಸಿಡ್ನಿ: ಮೊದಲ ಇನ್ನಿಂಗ್ಸ್ ನಲ್ಲಿ ಕಡಿಮೆ ಮೊತ್ತಕ್ಕೆ ತನ್ನಲ್ಲಾ ವಿಕೆಟ್ ಕಳೆದುಕೊಂಡು ಟೀಂ ಇಂಡಿಯಾ ಆಸೀಸ್ ವಿರುದ್ಧದ ಸಿಡ್ನಿ ಟೆಸ್ಟ್ ನಲ್ಲಿ ಒತ್ತಡಕ್ಕೆ ಸಿಲುಕಿದೆ. ದ್ವಿತೀಯ ಇನ್ನಿಂಗ್ಸ್ ಆಸೀಸ್ ಉತ್ತಮವಾಗಿ ಆಡುತ್ತಿದ್ದು, ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.

Advertisement

ಮೊದಲ ಇನ್ನಿಂಗ್ಸ್ ನಲ್ಲಿ 244 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡ ಭಾರತ ತಂಡ ಆಸೀಸ್ ಗೆ 94 ರನ್ ಗಳ ಮುನ್ನಡೆ ಬಿಟ್ಟುಕೊಟ್ಟಿತು. ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಆಸೀಸ್ ದಿನದ ಅಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿದೆ. ಇದರೊಂದಿಗೆ 197 ರನ್ ಗಳ ಮುನ್ನಡೆ ಹೊಂದಿದೆ.

ಆಸೀಸ್ ನ ಆರಂಭಿಕರಾದ ವಾರ್ನರ್ ( 13 ರನ್) ಮತ್ತು ಪುಕೋವ್ಸ್ಕಿ (10 ರನ್) ಅಗ್ಗಕ್ಕೆ ಔಟಾದರು. ನಂತರ ಜೊತೆಗೂಡಿದ ಲಬುಶೇನ್ ( 47 ರನ್) ಮತ್ತು ಸ್ಮಿತ್ ( 29) ಅಜೇಯ ಜೊತೆಯಾಟವಾಡಿದರು.

ಇದನ್ನೂ ಓದಿ:ರನ್ ಔಟ್.. ರನ್ ಔಟ್.. ರನ್ ಔಟ್..: 244ಕ್ಕೆ ಟೀಂ ಇಂಡಿಯಾ ಆಲ್ ಔಟ್

ಇದಕ್ಕೂ ಮೊದಲು ಎರಡು ವಿಕೆಟ್ ಗೆ 96 ರನ್ ಗಳಿಸಿದ್ದಲ್ಲಿಂದ ಬ್ಯಾಟಿಂಗ್ ಮುಂದುವರಿಸಿದ ಭಾರತ ತಂಡ ನಾಯಕ ಅಜಿಂಕ್ಯ ರಹಾನೆ ವಿಕೆಟ್ ಬೇಗನೇ ಕಳೆದುಕೊಂಡಿತು. ನಂತರ ಪೂಜಾರ- ಪಂತ್ ಅರ್ಧಶತಕದ ಜೊತೆಯಾಟ ನಡೆಸಿದರು. ಆದರೆ ಅವರಿಬ್ಬರೂ ಸತತ ಎಸೆತಗಳಲ್ಲಿ ಔಟಾದರು.

Advertisement

ಟೀಂ ಇಂಡಿಯಾ ಪರ ತಲಾ 50 ರನ್ ಬಾರಿಸಿದ ಗಿಲ್ ಮತ್ತು ಪೂಜಾರ ಸರ್ವಾಧಿಕ ಗಳಿಕೆ. ರಿಷಭ್ ಪಂತ್ 36 ರನ್ ಮತ್ತು ಜಡೇಜಾ 28 ಉಪಯುಕ್ತ ರನ್ ಕಲೆಹಾಕಿದರು. ಭಾರತ 244 ರನ್ ಆಲ್ ಔಟ್ ಆಯಿತು. ಆಸೀಸ್ ಪರ ಬಿಗು ದಾಳಿ ಸಂಘಟಿಸಿದ ಪ್ಯಾಟ್ ಕಮಿನ್ಸ್ ನಾಲ್ಕು ವಿಕೆಟ್ ಪಡೆದರೆ, ಹ್ಯಾಜಲ್ ವುಡ್ ಎರಡು ವಿಕೆಟ್, ಸ್ಟಾರ್ಕ್ ಒಂದು ವಿಕೆಟ್ ಪಡೆದರು.

ರನ್ ಔಟ್ ಸಂಕಷ್ಟ: ಭಾರತ ಇನ್ನಿಂಗ್ಸ್ ನಲ್ಲಿ ಮೂವರು ರನ್ ಔಟ್ ಆಗಿ ತಂಡವನ್ನು ಸಂಕಷ್ಟಕ್ಕೆ ದೂಡಿದರು. ಹನುಮ ವಿಹಾರಿ, ರವಿಚಂದ್ರನ್ ಅಶ್ವಿನ್ ಮತ್ತು ಜಸ್ಪ್ರೀತ್ ಬುಮ್ರಾ ರನ್ ಔಟ್ ಗೆ ಬಲಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next