Advertisement

ODI World Cup; 18 ಜನರ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ: ಪ್ರಮುಖ ಬ್ಯಾಟರ್ ಗಿಲ್ಲ ಜಾಗ

11:44 AM Aug 07, 2023 | Team Udayavani |

ಸಿಡ್ನಿ: ಐಸಿಸಿ ಏಕದಿನ ವಿಶ್ವಕಪ್ ಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇರುವಂತೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ವಿಶ್ವಕಪ್ ಗೆ 18 ಜನರ ಸಂಭಾವ್ಯ ತಂಡವನ್ನು ಕಟ್ಟಿದೆ. ವೇಗಿ ಪ್ಯಾಟ್ ಕಮಿನ್ಸ್ ಅವರು ನಾಯಕರಾಗಿ ಮುಂದುವರಿದಿದ್ದು, ಮಧ್ಯಮ ಕ್ರಮಾಂಕದ ಬ್ಯಾಟರ್ ಮಾರ್ನಸ್ ಲಬುಶೇನ್ ಅವರನ್ನು ಕೈಬಿಡಲಾಗಿದೆ.

Advertisement

ಈ ತಂಡವು ವಿಶ್ವಕಪ್ ಗಿಂತ ಮೊದಲು ನಡೆಯಲಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತದ ವಿರುದ್ಧದ ಏಕದಿನ ಸರಣಿ ಆಡಲಿದೆ. ಆದರೆ ಇತ್ತೀಚೆಗೆ ಅಂತ್ಯವಾದ ಆ್ಯಶಸ್ ಸರಣಿಯಲ್ಲಿ ಗಾಯ ಮಾಡಿಕೊಂಡಿದ್ದ ಕಮಿನ್ಸ್ ಅವರಿಗೆ ಆರು ವಾರಗಳ ವಿಶ್ರಾಂತಿ ಬೇಕಾಗಿದೆ. ಹೀಗಾಗಿ ದ.ಆಫ್ರಿಕಾ ಸರಣಿಯಲ್ಲಿ ಅವರು ಆಡುವುದು ಅನುಮಾನ. ಅಲ್ಲದೆ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಗ್ಲೆನ್ ಮ್ಯಾಕ್ಸವೆಲ್ ಅವರು ಕೂಡಾ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಆಡುವುದಿಲ್ಲ.

ಕೆಲವು ಡೈನಾಮಿಕ್ ಬ್ಯಾಟರ್‌ ಗಳಾದ ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಅನುಭವಿ ಆಟಗಾರರಾದ ಮಿಚೆಲ್ ಮಾರ್ಷ್, ಮಾರ್ಕಸ್ ಸ್ಟೊಯಿನಿಸ್, ಆಶ್ಟನ್ ಅಗರ್ ಮತ್ತು ಕ್ಯಾಮರೂನ್ ಗ್ರೀನ್‌ ರನ್ನು ನೇಮಿಸಲಾಗಿದೆ. ಭರವಸೆಯ ಸ್ಪಿನ್ ಬೌಲರ್ ತನ್ವೀರ್ ಸಂಘ ಜೊತೆಗೆ ವೆಸ್ಟರ್ನ್ ಆಸ್ಟ್ರೇಲಿಯಾದ ಯುವ ಆಲ್ ರೌಂಡರ್ ಆರನ್ ಹಾರ್ಡಿ ಕೂಡ ಸೇರ್ಪಡೆಗೊಂಡಿದ್ದಾರೆ.

ಇದನ್ನೂ ಓದಿ:ರಾಹುಲ್ ಅನರ್ಹತೆ ವಾಪಸ್ ಪಡೆದ ಲೋಕಸಭೆ ಸ್ಪೀಕರ್‌… ಇಂದಿನ ಕಲಾಪದಲ್ಲಿ ಭಾಗಿ

ವೇಗಿಗಳ ವಿಭಾಗದಲ್ಲಿ ನಾಯಕ ಪ್ಯಾಟ್ ಕಮಿನ್ಸ್ ಜತೆಗೆ ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್ ವುಡ್, ನಥನ್ ಎಲ್ಲಿಸ್ ಮತ್ತು ಸೀನ್ ಅಬೋಟ್ ಇರಲಿದ್ದಾರೆ.

Advertisement

ಆಸೀಸ್ ತಂಡ: ಪ್ಯಾಟ್ ಕಮಿನ್ಸ್ (ನಾ), ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸವೆಲ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿ.ಕೀ), ಜೋಶ್ ಇಂಗ್ಲಿಸ್ (ವಿ.ಕೀ), ಕ್ಯಾಮರೂನ್ ಗ್ರೀನ್, ಆರನ್ ಹಾರ್ಡಿ, ಆಶ್ಟನ್ ಅಗರ್, ಮಾರ್ಕಸ್ ಸ್ಟೊಯಿನಿಸ್, ಸೀನ್ ಅಬಾಟ್, ಜೋಶ್ ಹ್ಯಾಜಲ್‌ವುಡ್ , ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ತನ್ವೀರ್ ಸಂಘ, ನಥನ್ ಎಲ್ಲಿಸ್.

Advertisement

Udayavani is now on Telegram. Click here to join our channel and stay updated with the latest news.

Next