Advertisement

ಪಾಕಿಸ್ಥಾನಕ್ಕೆ ಇನ್ನಿಂಗ್ಸ್‌ ಸೋಲುಣಿಸಿದ ಆಸ್ಟ್ರೇಲಿಯ

09:54 AM Nov 25, 2019 | Team Udayavani |

ಬ್ರಿಸ್ಬೇನ್‌: “ಗಾಬಾ’ ಟೆಸ್ಟ್‌ನಲ್ಲಿ ಪ್ರವಾಸಿ ಪಾಕಿಸ್ಥಾನವನ್ನು ಆಸ್ಟ್ರೇಲಿಯ ಇನ್ನಿಂಗ್ಸ್‌ ಸೋಲಿಗೆ ಗುರಿಪಡಿಸಿದೆ. ಇನ್ನಿಂಗ್ಸ್‌ ಮತ್ತು 5 ರನ್‌ ಜಯಭೇರಿಯೊಂದಿಗೆ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

Advertisement

ಪಾಕಿಸ್ಥಾನದ 240 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಉತ್ತರವಾಗಿ ಆಸ್ಟ್ರೇಲಿಯ 580 ರನ್‌ ಪೇರಿಸಿತು. 340 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಪಾಕಿಸ್ಥಾನ ದ್ವಿತೀಯ ಸರದಿಯಲ್ಲಿ 335 ರನ್ನಿಗೆ ಆಲೌಟ್‌ ಆಯಿತು.

3ನೇ ದಿನದಾಟದಲ್ಲಿ ಪಾಕಿಸ್ಥಾನ 64ಕ್ಕೆ 3 ವಿಕೆಟ್‌ ಉರುಳಿಸಿಕೊಂಡು ಸಂಕಟಕ್ಕೆ ಸಿಲುಕಿತ್ತು. ರವಿವಾರ ಬಾಬರ್‌ ಆಜಂ-ಮೊಹಮ್ಮದ್‌ ರಿಜ್ವಾನ್‌ ಜತೆಯಾಟದ ಮೂಲಕ ಹೋರಾಟ ವನ್ನು ಜಾರಿಯಲ್ಲಿರಿಸಿತು. ಆಗ ಪಾಕ್‌ ಇನ್ನಿಂಗ್ಸ್‌ ಸೋಲಿನಿಂದ ಪಾರಾಗಬಹುದು ಎಂಬ ಸೂಚನೆ ಲಭಿಸಿತು. ಆದರೆ ಆಸೀಸ್‌ ವೇಗಿಗಳು ಇದಕ್ಕೆ ಅವಕಾಶ ನೀಡಲಿಲ್ಲ.

ಅಮೋಘ ಬ್ಯಾಟಿಂಗ್‌ ನಡೆಸಿದ ಬಾಬರ್‌ ಆಜಂ 104 ರನ್‌ ಬಾರಿಸಿದರು (173 ಎಸೆತ, 13 ಬೌಂಡರಿ). ಇದು ಅವರ 2ನೇ ಟೆಸ್ಟ್‌ ಶತಕ. ಕೀಪರ್‌ ರಿಜ್ವಾನ್‌ ಗಳಿಕೆ 95 ರನ್‌ (145 ಎಸೆತ, 10 ಬೌಂಡರಿ). ಇದು ಅವರ ಮೊದಲ ಅರ್ಧ ಶತಕ.

ರಿಜ್ವಾನ್‌ ಶತಕದ ಕನಸಿಗೆ ಹ್ಯಾಝಲ್‌ವುಡ್‌ ತಣ್ಣೀರೆರಚಿದರು. ಯಾಸಿರ್‌ ಶಾ 42 ರನ್‌ ಬಾರಿಸಿದರು. ಬಾಬರ್‌-ರಿಜ್ವಾನ್‌ 6ನೇ ವಿಕೆಟ್‌ ಜತೆಯಾಟದಲ್ಲಿ 132 ರನ್‌ ಒಟ್ಟುಗೂಡಿತು.

Advertisement

ಆಸೀಸ್‌ ಘಾತಕ ದಾಳಿ
ಆಸ್ಟ್ರೇಲಿಯದ ತ್ರಿವಳಿ ವೇಗಿಗಳಾದ ಮಿಚೆಲ್‌ ಸ್ಟಾರ್ಕ್‌, ಜೋಶ್‌ ಹ್ಯಾಝಲ್‌ವುಡ್‌ ಮತ್ತು ಪ್ಯಾಟ್‌ ಕಮಿನ್ಸ್‌ ಪಾಕ್‌ ಪಾಲಿಗೆ ಮತ್ತೂಮ್ಮೆ ಕಂಟಕವಾಗಿ ಪರಿಣಮಿಸಿದರು. ಮೂವರು ಸೇರಿ 9 ವಿಕೆಟ್‌ ಉಡಾಯಿಸಿದರು.
ಪಂದ್ಯದಲ್ಲಿ ಸ್ಟಾರ್ಕ್‌ 7, ಹ್ಯಾಝಲ್‌ವುಡ್‌ 6, ಕಮಿನ್ಸ್‌ 5 ವಿಕೆಟ್‌ ಉರುಳಿಸಿ ಮಿಂಚಿದರು. ಉಳಿದೆರಡು ವಿಕೆಟ್‌ ಸ್ಪಿನ್ನರ್‌ ನಥನ್‌ ಲಿಯೋನ್‌ ಪಾಲಾಯಿತು. ಅಮೋಘ 185 ರನ್‌ ಬಾರಿಸಿದ ಮಾರ್ನಸ್‌ ಲಬುಶೇನ್‌ ಅವರಿಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ಥಾನ-240 ಮತ್ತು 335 (ಬಾಬರ್‌ 104, ರಿಜ್ವಾನ್‌ 95, ಮಸೂದ್‌ 42, ಶಾ 42, ಹ್ಯಾಝಲ್‌ವುಡ್‌ 63ಕ್ಕೆ 4, ಸ್ಟಾರ್ಕ್‌ 73ಕ್ಕೆ 3, ಕಮಿನ್ಸ್‌ 69ಕ್ಕೆ 2).

ಪಂದ್ಯಶ್ರೇಷ್ಠ: ಮಾರ್ನಸ್‌ ಲಬುಶೇನ್‌

Advertisement

Udayavani is now on Telegram. Click here to join our channel and stay updated with the latest news.

Next