Advertisement

ಹೈದರಾಬಾದ್‌ನಲ್ಲಿ ಆಸೀಸ್‌ ಕ್ರಿಕೆಟಿಗರ ಅಭ್ಯಾಸ

12:30 AM Feb 21, 2019 | Team Udayavani |

ಹೈದರಾಬಾದ್‌: ಟಿ20 ಹಾಗೂ ಏಕದಿನ ಸರಣಿಗಾಗಿ ಈಗಾಗಲೇ ಭಾರತಕ್ಕೆ ಆಗಮಿಸಿರುವ ಆಸ್ಟ್ರೇಲಿಯ ತಂಡ ಅಭ್ಯಾಸ ಆರಂಭಿಸಿದೆ. ಆದರೆ ಪ್ರಥಮ ಟಿ20 ಪಂದ್ಯದ ತಾಣವಾದ ವಿಶಾಖಪಟ್ಟಣ ಬಿಟ್ಟು ಹೈದರಾಬಾದ್‌ನ “ರಾಜೀವ್‌ ಗಾಂಧಿ ಇಂಟರ್‌ನ್ಯಾಶನಲ್‌ ಸ್ಟೇಡಿಯಂ’ನಲ್ಲಿ ಅಭ್ಯಾಸ ನಡೆಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

Advertisement

ಭಾರತದ ವಾತಾವರಣ ಹಾಗೂ ಇಲ್ಲಿನ ಪಿಚ್‌ಗಳಿಗೆ ಸೀಮಿತ ಅವಧಿಯಲ್ಲಿ ಹೊಂದಿಕೊಳ್ಳಬೇಕಾದ್ದರಿಂದ ಆಸ್ಟ್ರೇಲಿಯ ಆಟಗಾರರು ವಿಶಾಖಪಟ್ಟಣದ ಪ್ರಧಾನ ಪಿಚ್‌ನಲ್ಲಿ ಅಭ್ಯಾಸ ನಡೆಸುವ ಯೋಜನೆ ಹಾಕಿಕೊಂಡಿತ್ತು. ಆದರೆ ಇದು ಲಭಿಸದ ಕಾರಣ ತನ್ನ ಅಭ್ಯಾಸ ತಾಣವನ್ನು ಹೈದರಾಬಾದ್‌ಗೆ ವರ್ಗಾಯಿಸಿತು.

“ಆಸ್ಟ್ರೇಲಿಯ ಕ್ರಿಕೆಟಿಗರು ಸಂಜೆ 4ರಿಂದ 7 ಗಂಟೆ ತನಕ ಇಲ್ಲಿನ ಪ್ರಧಾನ ಟ್ರ್ಯಾಕ್‌ನಲ್ಲಿ ಅಭ್ಯಾಸ ನಡೆಸಲಿದ್ದಾರೆ. ಭಾರತದ ಪರಿಸ್ಥಿತಿಗೆ ಸಾಧ್ಯವಾದಷ್ಟು ಬೇಗ ಒಗ್ಗಿಕೊಳ್ಳಬೇಕಾದ್ದರಿಂದ ಹಾಗೂ ವಿಶಾಖಪಟ್ಟಣದ ಎಚಿಎ-ವಿಡಿಸಿಎ ಪಿಚ್‌ಗೆ ಹಾನಿಯಾಗಬಹುದೆಂಬ ಕಾರಣಕ್ಕಾಗಿ ಆಸೀಸ್‌ ಆಟಗಾರರು ಹೈದರಾಬಾದ್‌ಗೆ ಆಗಮಿಸಿದ್ದಾರೆ’ ಎಂದು ವರದಿಯೊಂದು ತಿಳಿಸಿದೆ.

ಹೈದರಾಬಾದ್‌ನಲ್ಲಿ 3 ದಿನಗಳ ಕಾಲ ಅಭ್ಯಾಸ ನಡೆಸಿದ ಬಳಿಕ ಆಸ್ಟ್ರೇಲಿಯ ಕ್ರಿಕೆಟಿಗರು ವಿಶಾಖಪಟ್ಟಣಕ್ಕೆ ಆಗಮಿಸಲಿದ್ದಾರೆ. ಇಲ್ಲಿ ರವಿವಾರ ಮೊದಲ ಟಿ20 ಪಂದ್ಯ ನಡೆಯಲಿದೆ. ದ್ವಿತೀಯ ಪಂದ್ಯದ ತಾಣ ಬೆಂಗಳೂರು (ಫೆ. 27).

Advertisement

Udayavani is now on Telegram. Click here to join our channel and stay updated with the latest news.

Next