Advertisement

ಆಸೀಸ್ ವೇಗಿ ಕೇನ್ ರೀಚರ್ಡ್ ಸನ್ ಗೂ ಕೊರೊನಾ ಸೋಂಕು ಶಂಕೆ: ಪಂದ್ಯ ಆಡದಂತೆ ಸೂಚನೆ

09:57 AM Mar 14, 2020 | Mithun PG |

ಸಿಡ್ನಿ: ಆಸ್ಟ್ರೇಲಿಯಾದ ವೇಗದ ಬೌಲರ್ ಕೇನ್ ರೀಚರ್ಡ್ ಸನ್ ಅವರಿಗೆ ಕೊರೊನಾ ಸೋಂಕು ತಗುಲಿರುವ ಅನುಮಾನ ವ್ಯಕ್ತವಾಗಿದೆ.  ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ್ದ ಕೇನ್ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಪಂದ್ಯಕ್ಕೂ ಆಯ್ಕೆಯಾಗಿದ್ದರು. ಆದರೆ ತೀವ್ರ ಗಂಟಲು ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

Advertisement

ಕೇನ್ ಅವರಿಗೆ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಅದರ ಜೊತೆಗೆ ಆಸ್ಟ್ರೇಲಿಯಾ ಸರ್ಕಾರದ ಸೂಚನೆಗಳನ್ನು ಕೂಡ ಪಾಲಿಸಲಾಗುತ್ತಿದ್ದು , ಸೋಂಕು ತಗುಲಿರುವುದು ಖಚಿತವಾದರೆ ಇತರ ಕ್ರಿಕೆಟಿಗರಿಗೆ ಹರಡದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುವುದು ಎಂದು ಆಸ್ಟ್ರೇಲಿಯಾ ಕ್ರಿಕೆಟ್ ವಕ್ತಾರ ತಿಳಿಸಿದ್ದಾರೆ.

ಇದರ ಪರಿಣಾಮ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಿಂದ ಕೇನ್ ರಿಚರ್ಡ್ಸನ್ ಹೊರಗುಳಿದಿದ್ದಾರೆ. ಮಾರ್ಚ್‌ 29 ರಿಂದ ಆರಂಭವಾಗುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ರಾಯಲ್‌ ಚಾಂಲೆಂಜರ್ಸ್ ಬೆಂಗಳೂರು ಪರ ಕೇನ್ ರಿಚರ್ಡ್‌ಸನ್ ಆಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next