Advertisement

ಮೆಲ್ಬರ್ನ್: ಸರಣಿ ಕ್ಲೀನ್ ಸ್ವೀಪ್ ಮಾಡಿದ ಆಸ್ಟ್ರೇಲಿಯ; ಇಂಗ್ಲೆಂಡ್​ಗೆ ಹೀನಾಯ ಸೋಲು!

10:41 PM Nov 22, 2022 | Team Udayavani |

ಮೆಲ್ಬರ್ನ್: ಅಂತಿಮ ಏಕದಿನ ಪಂದ್ಯದಲ್ಲಿ ವಿಶ್ವ ಚಾಂಪಿಯನ್‌ ಇಂಗ್ಲೆಂಡನ್ನು 221 ರನ್ನುಗಳಿಂದ ಬಗ್ಗು ಬಡಿಯುವ ಮೂಲಕ ಆಸ್ಟ್ರೇಲಿಯ ಮಹಾ ವಿಜಯವೊಂದನ್ನು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿ ಯನ್ನು 3-0 ಅಂತರದಿಂದ ಕ್ಲೀನ್‌ ಸ್ವೀಪ್‌ ಆಗಿ ವಶಪಡಿಸಿಕೊಂಡಿದೆ.

Advertisement

ಟ್ರ್ಯಾವಿಸ್‌ ಹೆಡ್‌ ಮತ್ತು ಡೇವಿಡ್‌ ವಾರ್ನರ್‌ ಅವರ ಶತಕ, ಇವರು ಆರಂಭಿಕ ವಿಕೆಟಿಗೆ ಪೇರಿಸಿದ 269 ರನ್‌ ಸಾಹಸದಿಂದ ಆಸ್ಟ್ರೇಲಿಯ 48 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 355 ರನ್‌ ರಾಶಿ ಹಾಕಿತು. ಇದು ಮೆಲ್ಬರ್ನ್ನಲ್ಲಿ ದಾಖಲಾದ ಹಾಗೂ ಇಂಗ್ಲೆಂಡ್‌ ವಿರುದ್ಧ ಆಸೀಸ್‌ ಪೇರಿಸಿದ ಅತ್ಯಧಿಕ ಮೊತ್ತ. ಮಳೆಯಿಂದಾಗಿ ಇಂಗ್ಲೆಂಡ್‌ಗೆ
364 ರನ್‌ ಟಾರ್ಗೆಟ್‌ ಲಭಿಸಿತು. ಕಾಂಗರೂ ದಾಳಿಗೆ ಚೆಲ್ಲಾಪಿಲ್ಲಿಯಾಗಿ 31.4 ಓವರ್‌ಗಳಲ್ಲಿ 142ಕ್ಕೆ ಕುಸಿಯಿತು. ಮೊದಲೆರಡು ಪಂದ್ಯಗಳಲ್ಲಿ ಆಸ್ಟ್ರೇಲಿಯ 6 ವಿಕೆಟ್‌ ಮತ್ತು 72 ರನ್‌ ಗೆಲುವು ಸಾಧಿಸಿತ್ತು.

ಹೆಡ್‌ 130 ಎಸೆತಗಳಿಂದ 152 ರನ್‌ ಸೂರೆಗೈದರು. 16 ಬೌಂಡರಿ ಹಾಗೂ 4 ಸಿಕ್ಸರ್‌ಗಳನ್ನು ಇದು ಒಳಗೊಂಡಿತ್ತು. ವಾರ್ನರ್‌ 102 ಎಸೆತ ನಿಭಾಯಿಸಿ 106 ರನ್‌ ಹೊಡೆದರು (8 ಬೌಂಡರಿ, 2 ಸಿಕ್ಸರ್‌).

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ-48 ಓವರ್‌ಗಳಲ್ಲಿ 5 ವಿಕೆಟಿಗೆ 355 (ಹೆಡ್‌ 152, ವಾರ್ನರ್‌ 106, ಮಾರ್ಷ್‌ 30, ಸ್ಟೋನ್‌ 85ಕ್ಕೆ 4). ಇಂಗ್ಲೆಂಡ್‌-31.4 ಓವರ್‌ಗಳಲ್ಲಿ 142 (ರಾಯ್‌ 33, ವಿನ್ಸ್‌ 22, ಡಾಸನ್‌ 18, ಝಂಪ 31ಕ್ಕೆ 4, ಕಮಿನ್ಸ್‌ 25ಕ್ಕೆ 2, ಅಬೋಟ್‌ 45ಕ್ಕೆ 2).

ಪಂದ್ಯಶ್ರೇಷ್ಠ: ಟ್ರ್ಯಾವಿಸ್‌ ಹೆಡ್‌.
ಸರಣಿಶ್ರೇಷ್ಠ: ಡೇವಿಡ್‌ ವಾರ್ನರ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next