Advertisement

ಮೆಲ್ಬರ್ನ್ ನಲ್ಲಿ ಮೆರೆದಾಡಿದ ಆಸ್ಟ್ರೇಲಿಯ

11:40 PM May 26, 2019 | Sriram |

ಹ್ಯಾಟ್ರಿಕ್‌ ಸಾಧನೆಗೈದು ಮತ್ತೂ ಮುನ್ನು ಗ್ಗುವ ಯೋಜನೆಯಲ್ಲಿದ್ದ ಆಸ್ಟ್ರೇಲಿಯ 2011ರಲ್ಲಿ ಮುಗ್ಗರಿಸಿತ್ತು. ಆದರೆ ನಾಲ್ಕೇ ವರ್ಷಗಳಲ್ಲಿ ಚಿಗುರಿ ನಿಂತು 5ನೇ ವಿಶ್ವಕಪ್‌ ಎತ್ತುವ ಮೂಲಕ ಇತಿಹಾಸ ಬರೆಯಿತು. ಅಲನ್‌ ಬೋರ್ಡರ್‌, ಸ್ಟೀವ್‌ ವೋ, ರಿಕಿ ಪಾಂಟಿಂಗ್‌ ಸಾಲಿನಲ್ಲಿ ಮೈಕಲ್‌ ಕ್ಲಾರ್ಕ್‌ ಕೂಡ ಸೇರಿಕೊಂಡರು.

Advertisement

ವಿಪರ್ಯಾಸವೆಂದರೆ, ಈ ಫೈನಲ್‌ ಮೈಕಲ್‌ ಕ್ಲಾರ್ಕ್‌ ಅವರ ಕಟ್ಟಕಡೆಯ ಏಕದಿನವಾಗಿ ದಾಖಲಾದದ್ದು. ತಂಡದ ಸಹ ಆಟಗಾರರೆಲ್ಲ ಸೇರಿ ಅವರಿಗೆ ಸ್ಮರಣೀಯ ಉಡುಗೊರೆಯನ್ನೇ ನೀಡಿದರು. ವಿಶ್ವಕಪ್‌ ಎತ್ತಿದ ಬೆನ್ನಲ್ಲೇ ಏಕದಿನಕ್ಕೆ ವಿದಾಯ ಹೇಳಿದ ಮತ್ತೂಬ್ಬ ಕಪ್ತಾನನನ್ನು ಕ್ರಿಕೆಟ್‌ ಜಗತ್ತು ಕಂಡಿಲ್ಲ. ಈ ಕಾರಣಕ್ಕಾಗಿ ಕ್ಲಾರ್ಕ್‌ ಮಾದರಿ ಕ್ರಿಕೆಟಿಗನಾಗಿ ಅಚ್ಚಳಿಯದೇ ಉಳಿಯುತ್ತಾರೆ.

ಫೈನಲ್‌ ಪ್ರವೇಶಿಸಿದ ನ್ಯೂಜಿಲ್ಯಾಂಡ್‌
ಈ ಪಂದ್ಯಾವಳಿಯ ವಿಶೇಷವೆಂದರೆ, ಸಹ ಆತಿಥೇಯ ರಾಷ್ಟ್ರವಾದ ನ್ಯೂಜಿಲ್ಯಾಂಡ್‌ ಮೊದಲ ಸಲ ಫೈನಲ್‌ಗೆ ಲಗ್ಗೆ ಇರಿಸಿದ್ದು. ಎದುರಾಳಿ, ಮತ್ತೂಂದು ಆತಿಥೇಯ ರಾಷ್ಟ್ರ ವಾದ ಆಸ್ಟ್ರೇಲಿಯ. “ಮೆಲ್ಬರ್ನ್ ಗ್ರೌಂಡ್‌’ನಲ್ಲಿ ಬ್ರೆಂಡನ್‌ ಮೆಕಲಮ್‌ ಪಡೆಯ ಮೆರೆ ದಾಟಕ್ಕೆ ಧಾರಾಳ ಅವಕಾಶವಿತ್ತು. ಆದರೆ ಇಲ್ಲಿ ಅದು ಫೈನಲ್‌ ಜೋಶ್‌ ತೋರಲೇ ಇಲ್ಲ. ಎಂದೂ ಸೆಮಿಫೈನಲ್‌ ಗಡಿ ದಾಟದ ಕಿವೀಸ್‌ನ ಈ ಓಟ ಆಕಸ್ಮಿಕ ಎಂದೇ ಬಿಂಬಿಸಲ್ಪಟ್ಟಿತು. ಆಸೀಸ್‌ಗೆ ಕಿವೀಸ್‌ ಸುಲಭದ ತುತ್ತಾಯಿತು.

ಮೊದಲು ಬ್ಯಾಟಿಂಗ್‌ ನಡೆಸಿದ ನ್ಯೂಜಿ ಲ್ಯಾಂಡ್‌ 183 ರನ್ನುಗಳಿಗೆ ನೆಲ ಕಚ್ಚಿತ್ತು. ಇದು 1983ರ ಫೈನಲ್‌ನಲ್ಲಿ ಭಾರತ ದಾಖಲಿಸಿದ ಸ್ಕೋರ್‌ ಆಗಿತ್ತು. ಈ ಸಣ್ಣ ಮೊತ್ತವನ್ನೇ ಇರಿಸಿಕೊಂಡ ಕಪಿಲ್‌ ಪಡೆ ಅಂದಿನ ದೈತ್ಯ ತಂಡವಾದ ವೆಸ್ಟ್‌ ಇಂಡೀಸನ್ನು ದಿಂಡುರುಳಿಸಿದ ದೃಶ್ಯಾವಳಿ ಕಣ್ಮುಂದೆ ಹಾದು ಹೋಯಿತು. ಆದರೆ ಇದೇ 183 ರನ್‌ ನ್ಯೂಜಿಲ್ಯಾಂಡಿಗೆ ಲಕ್‌ ತರಲೇ ಇಲ್ಲ.

ಆಸ್ಟ್ರೇಲಿಯ ಇದನ್ನು ಮೂರೇ ವಿಕೆಟ್‌ ಕಳೆದುಕೊಂಡು ಹಿಂದಿಕ್ಕಿತು. ಸ್ಮಿತ್‌ 56 ರನ್‌ ಹೊಡೆದರೆ, ನಾಯಕ ಕ್ಲಾರ್ಕ್‌ 74 ರನ್‌ ಬಾರಿಸಿ ಮೆರೆದರು.

Advertisement

“ಆಸ್ಟ್ರೇಲಿಯ ಈಗ ಏಶ್ಯ, ಯುರೋಪ್‌, ಆಫ್ರಿಕಾ, ಉತ್ತರ ಅಮೆರಿಕ ಮತ್ತು ಆಸ್ಟ್ರೇಲಿಯ ಖಂಡಗಳಲ್ಲಿ ಕಪ್‌ ಎತ್ತಿದಂತಾಯಿತು. ಕೇವಲ ದಕ್ಷಿಣ ಅಮೆರಿಕ ಮತ್ತು ಅಂಟಾರ್ಕಟಿಕಾ ಖಂಡಗಳಲ್ಲಷ್ಟೇ ಗೆಲ್ಲುವುದು ಬಾಕಿ ಇದೆ’ ಎಂಬ ಟ್ವೀಟ್‌ ಅಂದು ಬಹಳ ಜನಪ್ರಿಯಗೊಂಡಿತ್ತು.

23 ವರ್ಷಗಳ ಬಳಿಕ ಆಸೀಸ್‌-ಕಿವೀಸ್‌ ಆತಿಥ್ಯ
1992ರ ಬಳಿಕ ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್‌ ಜಂಟಿ ಆತಿಥ್ಯದಲ್ಲಿ ವಿಶ್ವಕಪ್‌ ನಡೆಸಿಕೊಟ್ಟವು. ಬಹುತೇಕ ಯಶಸ್ವಿಯೂ ಆಯಿತು.

ಈ 2 ಆತಿಥೇಯ ತಂಡಗಳೇ ಫೈನಲ್‌ನಲ್ಲಿ ಸೆಣಸಾಡಿದ್ದು ವಿಶೇಷ. 2011ರಲ್ಲೂ ಹೀಗೆಯೇ ಆಗಿತ್ತು. ಭಾರತ-ಶ್ರೀಲಂಕಾ ಪ್ರಶಸ್ತಿ ಸುತ್ತಿಗೆ ನೆಗೆದಿದ್ದವು.

ಮೆಲ್ಬರ್ನ್ ಫೈನಲ್‌ನಲ್ಲಿ ನ್ಯೂಜಿಲ್ಯಾಂಡಿನಿಂದ ಪವಾಡ ಸಾಧ್ಯವಾಗಲಿಲ್ಲ. ಹಾಲಿ ಚಾಂಪಿಯನ್‌ ಭಾರತ ಸೆಮಿಫೈನಲ್‌ ತನಕ ಓಟ ಬೆಳೆಸಿತು. ಇಲ್ಲಿ ಆಸ್ಟ್ರೇಲಿಯಕ್ಕೆ ಸೋತು ಮಾಜಿ ಆಯಿತು. ಮೈಕಲ್‌ ಕ್ಲಾರ್ಕ್‌ ನೇತೃತ್ವದ ಕಾಂಗರೂ ಪಡೆ ತವರಿನಲ್ಲೇ ಕಪ್‌ ಎತ್ತಿದ ವಿಶ್ವದ ದ್ವಿತೀಯ ತಂಡವಾಗಿ ಹೊರಹೊಮ್ಮಿತು.

ಈ ಕೂಟದಲ್ಲಿ ಒಟ್ಟು 14 ತಂಡಗಳು ಭಾಗವಹಿಸಿದವು. ಗ್ರೂಪ್‌ ಹಂತದಲ್ಲಿ ಲೀಗ್‌ ಪಂದ್ಯಗಳನ್ನು ಆಡಲಾಯಿತು. ಬಳಿಕ ಕ್ವಾರ್ಟರ್‌ ಫೈನಲ್‌ ಹಣಾಹಣಿ.

ಪಂದ್ಯ ಟೈ ಆದರೆ ಎಂಬ ಕಾರಣಕ್ಕೆ ಮೊದಲ ಸಲ ವಿಶ್ವಕಪ್‌ ಫೈನಲ್‌ನಲ್ಲಿ ಸೂಪರ್‌ ಓವರ್‌ ಅಳವಡಿಸಲಾಗಿತ್ತು.ಅಫ್ಘಾನಿಸ್ಥಾನ ಮೊದಲ ಸಲ ವಿಶ್ವಕಪ್‌ ಆಡುವ ಅವಕಾಶ ಪಡೆಯಿತು.

2015ರ ಸಾಧಕರ ಇಲೆವೆನ್‌
2015ರ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಅಮೋಘ ನಿರ್ವಹಣೆ ತೋರಿದ ಆಧಾರದಲ್ಲಿ ರಚಿಸಲಾದ 11 ಸದಸ್ಯರ ತಂಡವಿದು.
ಮಾರ್ಟಿನ್‌ ಗಪ್ಟಿಲ್‌, ಶಿಖರ್‌ ಧವನ್‌, ಸ್ಟೀವನ್‌ ಸ್ಮಿತ್‌, ಎಬಿ ಡಿ ವಿಲಿಯರ್ (ನಾಯಕ), ಕುಮಾರ ಸಂಗಕ್ಕರ, ಮಹಮದುಲ್ಲ, ಡೇನಿಯಲ್‌ ವೆಟರಿ, ಮಿಚೆಲ್‌ ಸ್ಟಾರ್ಕ್‌, ಮೊಹಮ್ಮದ್‌ ಶಮಿ, ಟ್ರೆಂಟ್‌ ಬೌಲ್ಟ್, ಇಮ್ರಾನ್‌ ತಾಹಿರ್‌.
ಕೋಚ್‌: ಡ್ಯಾರನ್‌ ಲೇಹ್ಮನ್‌.

ವಿಶ್ವಕಪ್‌ ಹ್ಯಾಟ್ರಿಕ್‌ ಹೀರೋಸ್‌
2015
ಸ್ಟೀವನ್‌ ಫಿನ್‌ (ಇಂ.)
ವಿರುದ್ಧ: ಆಸ್ಟ್ರೇಲಿಯ
ಅಂಗಳ: ಮೆಲ್ಬರ್ನ್

2015
ಜೆಪಿ ಡ್ಯುಮಿನಿ (ದ.ಆ.)
ವಿರುದ್ಧ: ಶ್ರೀಲಂಕಾ
ಅಂಗಳ: ಸಿಡ್ನಿ

ವಿಶ್ವಕಪ್‌ ದ್ವಿಶತಕ ವೀರರು
237 ರನ್‌
ಮಾರ್ಟಿನ್‌ ಗಪ್ಟಿಲ್‌
ವಿರುದ್ಧ: ವೆಸ್ಟ್‌ ಇಂಡೀಸ್‌

215 ರನ್‌
ಕ್ರಿಸ್‌ ಗೇಲ್‌
ವಿರುದ್ಧ: ಜಿಂಬಾಬ್ವೆ

ಕ್ವಾರ್ಟರ್‌ ಫೈನಲ್‌ ತಂಡಗಳು
ಗ್ರೂಪ್‌ “ಎ’

ನ್ಯೂಜಿಲ್ಯಾಂಡ್‌, ಆಸ್ಟ್ರೇಲಿಯ, ಶ್ರೀಲಂಕಾ, ಬಾಂಗ್ಲಾದೇಶ

ಗ್ರೂಪ್‌ “ಬಿ’
ಭಾರತ, ದಕ್ಷಿಣ ಆಫ್ರಿಕಾ, ಪಾಕಿಸ್ಥಾನ, ವೆಸ್ಟ್‌ ಇಂಡೀಸ್‌

ಸೆಮಿಫೈನಲ್‌-1
ದಕ್ಷಿಣ ಆಫ್ರಿಕಾ-ನ್ಯೂಜಿಲ್ಯಾಂಡ್‌
ನ್ಯೂಜಿಲ್ಯಾಂಡಿಗೆ 4 ವಿಕೆಟ್‌ ಜಯ
ಸೆಮಿಫೈನಲ್‌-2
ಭಾರತ-ಆಸ್ಟ್ರೇಲಿಯ
ಆಸ್ಟ್ರೇಲಿಯಕ್ಕೆ 95 ರನ್‌ ಜಯ

ಭಾರತ ತಂಡ
ಎಂ. ಎಸ್‌. ಧೋನಿ (ನಾಯಕ), ಕೊಹ್ಲಿ (ಉಪನಾಯಕ), ಧವನ್‌, ರೋಹಿತ್‌ , ರೈನಾ, ರಹಾನೆ, ರಾಯುಡು, ಆರ್‌. ಅಶ್ವಿ‌ನ್‌, ಬಿನ್ನಿ, ಜಡೇಜ, ಭುವನೇಶ್ವರ್‌ , ಅಕ್ಷರ್‌ , ಶಮಿ, ಇಶಾಂತ್‌ , ಮೋಹಿತ್‌ ಶರ್ಮ, ಉಮೇಶ್‌ ಯಾದವ್‌.ಇಶಾಂತ್‌ ಗಾಯಾಳಾಗಿ ನಿರ್ಗಮಿಸಿದ್ದರಿಂದ ಮೋಹಿತ್‌ ಶರ್ಮ ಅವರನ್ನು ಸೇರಿಸಿಕೊಳ್ಳಲಾಯಿತು

ಡಬಲ್‌ ಸೆಂಚುರಿಯ ಅಬ್ಬರ
ಈ ವಿಶ್ವಕಪ್‌ ದ್ವಿಶತಕದ ಅಬ್ಬರಕ್ಕೆ ಸಾಕ್ಷಿಯಾಯಿತು. ಈವರೆಗೆ 188ಕ್ಕೆ ನಿಂತಿದ್ದ ಸರ್ವಾಧಿಕ ವೈಯಕ್ತಿಕ ಗಳಿಕೆ ಇಲ್ಲಿ ಕ್ರಿಸ್‌ ಗೇಲ್‌ ಮತ್ತು ಮಾರ್ಟಿನ್‌ ಗಪ್ಟಿಲ್‌ ಅವರಿಂದ ಇನ್ನೂರರ ಗಡಿ ದಾಟಿ ಮುನ್ನುಗ್ಗಿತು.
ಮೊದಲು ಕ್ರಿಸ್‌ ಗೇಲ್‌ ಜಿಂಬಾಬ್ವೆ ವಿರುದ್ಧ ಕ್ಯಾನ್‌ಬೆರಾದಲ್ಲಿ 215 ರನ್‌ ಬಾರಿಸಿ ಮೆರೆದರು. ಬಳಿಕ ವೆಲ್ಲಿಂಗ್ಟನ್‌ನಲ್ಲಿ ಮಾರ್ಟಿನ್‌ ಗಪ್ಟಿಲ್‌ ವೆಸ್ಟ್‌ ಇಂಡೀಸ್‌ ವಿರುದ್ಧವೇ ಅಜೇಯ 237 ರನ್‌ ಬಾರಿಸಿ ಗೇಲ್‌ ದಾಖಲೆಯನ್ನು ಪುಡಿಗುಟ್ಟಿದರು!

2015 ವಿಶ್ವಕಪ್‌ ಫೈನಲ್‌
ಮೆಲ್ಬರ್ನ್, ಮಾ. 29

ನ್ಯೂಜಿಲ್ಯಾಂಡ್‌
ಮಾರ್ಟಿನ್‌ ಗಪ್ಟಿಲ್‌ ಬಿ ಮ್ಯಾಕ್ಸ್‌ವೆಲ್‌ 15
ಬ್ರೆಂಡನ್‌ ಮೆಕಲಮ್‌ ಬಿ ಸ್ಟಾರ್ಕ್‌ 0
ಕೇನ್‌ ವಿಲಿಯಮ್ಸನ್‌ ಸಿ ಮತ್ತು ಬಿ ಜಾನ್ಸನ್‌ 12
ರಾಸ್‌ ಟೇಲರ್‌ ಸಿ ಹ್ಯಾಡಿನ್‌ ಬಿ ಫಾಕ್ನರ್‌ 40
ಗ್ರ್ಯಾಂಟ್‌ ಈಲಿಯಟ್‌ ಸಿ ಹ್ಯಾಡಿನ್‌ ಬಿ ಫಾಕ್ನರ್‌ 83
ಕೋರಿ ಆ್ಯಂಡರ್ಸನ್‌ ಬಿ ಫಾಕ್ನರ್‌ 0
ಲ್ಯೂಕ್‌ ರಾಂಚಿ ಸಿ ಕ್ಲಾರ್ಕ್‌ ಬಿ ಸ್ಟಾರ್ಕ್‌ 0
ಡೇನಿಯಲ್‌ ವೆಟರಿ ಬಿ ಜಾನ್ಸನ್‌ 9
ಟಿಮ್‌ ಸೌಥಿ ರನೌಟ್‌ 11
ಮ್ಯಾಟ್‌ ಹೆನ್ರಿ ಸಿ ಸ್ಟಾರ್ಕ್‌ ಬಿ ಜಾನ್ಸನ್‌ 0
ಟ್ರೆಂಟ್‌ ಬೌಲ್ಟ್ ಔಟಾಗದೆ 0
ಇತರ 13
ಒಟ್ಟು (45 ಓವರ್‌ಗಳಲ್ಲಿ ಆಲೌಟ್‌) 183
ವಿಕೆಟ್‌ ಪತನ: 1-1, 2-33, 3-39, 4-150, 5-150, 6-151, 7-167, 8-171, 9-182.
ಬೌಲಿಂಗ್‌: ಮಿಚೆಲ್‌ ಸ್ಟಾರ್ಕ್‌ 8-0-30-2
ಜೋಶ್‌ ಹ್ಯಾಝಲ್‌ವುಡ್‌ 8-2-30-0
ಮಿಚೆಲ್‌ ಜಾನ್ಸನ್‌ 9-0-30-3
ಗ್ಲೆನ್‌ ಮ್ಯಾಕ್ಸ್‌ವೆಲ್‌ 7-0-37-1
ಜೇಮ್ಸ್‌ ಫಾಕ್ನರ್‌ 9-1-36-3
ಶೇನ್‌ ವಾಟ್ಸನ್‌ 4-0-23-0
ಆಸ್ಟ್ರೇಲಿಯ
ಡೇವಿಡ್‌ ವಾರ್ನರ್‌ ಸಿ ಈಲಿಯಟ್‌ ಬಿ ಹೆನ್ರಿ 45
ಆರನ್‌ ಫಿಂಚ್‌ ಸಿ ಮತ್ತು ಬಿ ಬೌಲ್ಟ್ 0
ಸ್ಟೀವನ್‌ ಸ್ಮಿತ್‌ ಔಟಾಗದೆ 56
ಮೈಕಲ್‌ ಕ್ಲಾರ್ಕ್‌ ಬಿ ಹೆನ್ರಿ 74
ಶೇನ್‌ ವಾಟ್ಸನ್‌ ಔಟಾಗದೆ 2
ಇತರ 9
ಒಟ್ಟು (33.1 ಓವರ್‌ಗಳಲ್ಲಿ 3 ವಿಕೆಟಿಗೆ) 186
ವಿಕೆಟ್‌ ಪತನ: 1-2, 2-63, 3-175.
ಬೌಲಿಂಗ್‌: ಟಿಮ್‌ ಸೌಥಿ 8-0-65-0
ಟ್ರೆಂಟ್‌ ಬೌಲ್ಟ್ 10-0-40-1
ಡೇನಿಯಲ್‌ ವೆಟರಿ 5-0-25-0
ಮ್ಯಾಟ್‌ ಹೆನ್ರಿ 9.1-0-46-2
ಕೋರಿ ಆ್ಯಂಡರ್ಸನ್‌ 1-0-7-0
ಪಂದ್ಯಶ್ರೇಷ್ಠ: ಜೇಮ್ಸ್‌ ಫಾಕ್ನರ್‌
ಸರಣಿಶ್ರೇಷ್ಠ: ಮೈಕಲ್‌ ಕ್ಲಾರ್ಕ್‌

Advertisement

Udayavani is now on Telegram. Click here to join our channel and stay updated with the latest news.

Next