Advertisement

ದೇವರ ನಿರಂತರ ಸ್ಮರಣೆಯಿಂದ ಸಂಯಮ: ಸುಬ್ರಹ್ಮಣ್ಯಶ್ರೀ

03:45 AM Jan 17, 2017 | |

ಉಡುಪಿ: ಅಯ್ಯಪ್ಪವ್ರತಧಾರಿಗಳು ಮುಂಜಾನೆ ಎದ್ದು ನಿತ್ಯವಿಧಿ ಪೂರೈಸಿ ದೇವರ ಸ್ಮರಣೆ ಮಾಡುವ ಮೂಲಕ ಸಂಯಮ ಪಾಲಿಸುತ್ತಾರೆ. ಅದೇ ನಿಷ್ಠೆಯನ್ನು ನಿರಂತರ ಪಾಲಿಸಿದರೆ ಜೀವನ ಪಾವನವಾಗುವುದು ಎಂದು ಸಂಪುಟ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.

Advertisement

ಹಾವಂಜೆ ಬಾಣಬೆಟ್ಟುವಿನ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ದಶಮಾನೋತ್ಸವದ ಅಂಗವಾಗಿ ಶನಿವಾರ ನಡೆದ ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಸೂರ್ಯೋದಯ ಮತ್ತು ಸೂರ್ಯಾಸ್ತ ಸಮಯದಲ್ಲಿ ಮನೆಮನೆಗಳಲ್ಲಿ ದೀಪ ಹಚ್ಚಿ ರಂಗೋಲಿ ಬರೆದು ಭಜನೆ ಮಾಡಬೇಕು. ಪರಮಾತ್ಮನು ನಮಗೆ ನಾಲಗೆ ನೀಡಿರುವುದು ದೇವರ ಸ್ಮರಣೆ ಮಾಡಲು ವಿನಃ ಜಗಳವಾಡುವುದಕ್ಕಲ್ಲ. ಹಾಗೆಯೇ ಮಹಿಳೆಯರು ಬೆಳಗ್ಗೆ ಹೊಸ್ತಿಲು ಬರೆಯುವುದು, ರಂಗೋಲಿ ಇಡುವುದು, ಗೋವುಗಳಿಗೆ ಆಹಾರ ನೀಡುವುದು,
ದೇವರಿಗೆ ದೀಪ ಇಡುವುದು ನಮ್ಮ ಸಂಸ್ಕೃತಿ  ಬೆಳಗಿಸಿದಂತೆ. ಉದರ ನಿಮಿತ್ತ ಪರ ಊರಿನಲ್ಲಿ ವ್ಯವಹಾರ ಮಾಡುತ್ತಿರುವವರು ಹುಟ್ಟೂರ ದೇವ- ದೈವಗಳ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದು ಬದುಕಿನ ಪುಣ್ಯದ ಕೆಲಸ ಎಂದರು.

ಗೌರವಾಧ್ಯಕ್ಷ ಅಜಿತ್‌ ಎಸ್‌. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ, ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಕೆ. ರಘಪತಿ ಭಟ್‌, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ, ಉಡುಪಿ, ಮಂಗಳೂರು, ಕೊಡಗು ವಿಭಾಗದ ಉಸ್ತುವಾರಿ ಕೆ. ಉದಯಕುಮಾರ್‌ ಶೆಟ್ಟಿ, ಉದ್ಯಮಿ ತನಿಷ್ಕ ಸದಾಶಿವ ಹೆಗ್ಡೆ, ಹಾವಂಜೆ ಶ್ರೀ ಮಹಾಲಿಂಗೇಶ್ವರ ದೇಗುಲದ ಮೊಕ್ತೇಸರ ಸುರೇಶ್‌ ಬಿ. ಶೆಟ್ಟಿ, ಗ್ರಾ.ಪಂ. ಅಧ್ಯಕ್ಷೆ ವಸಂತಿ ಶೆಟ್ಟಿ ಹಾವಂಜೆ, ಬಾಕೂìರು ಶ್ರೀ ಕಾಳಿಕಾಂಬಾ ದೇಗುಲದ ಮೊಕ್ತೇಸರ ಶ್ರೀಧರ ಆಚಾರ್ಯ, ಗುಜರಾತ್‌ ಅಂಕಲೇಶ್ವರ ಉದ್ಯಮಿಗಳಾದ ಶಂಕರ್‌ ಕೆ. ಶೆಟ್ಟಿ, ರವಿನಾಥ ಶೆಟ್ಟಿ, ಉದಯ ಸಿ. ಶೆಟ್ಟಿ ಶಿವಪುರ, ಗುಜರಾತ್‌ನ ಬರೋಡ ತುಳು ಸಂಘದ ಅಧ್ಯಕ್ಷ ಉದ್ಯಮಿ ಶಶಿಧರ ಶೆಟ್ಟಿ, ಗುಜರಾತ್‌ನ ಸೂರತ್‌ ಉದ್ಯಮಿ ರಾಧಾಕೃಷ್ಣ ಶೆಟ್ಟಿ, ಹಾವಂಜೆ ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಉದಯ ಕೋಟ್ಯಾನ್‌ ಬಾಣಬೆಟ್ಟು, ಉದ್ಯಮಿ ಬಿ.ಡಿ. ಶೆಟ್ಟಿ ಉಪಸ್ಥಿತರಿದ್ದರು.

ಸಮ್ಮಾನ: ಪೂರ್ವಾಹ್ನ ವಿಶ್ವನಾಥ ಗುರುಸ್ವಾಮಿ ಮೂಳೂರು, ಪ್ರಸಾದ್‌ ಗುರುಸ್ವಾಮಿ ಮತ್ತು ಶಿಷ್ಯ ವೃಂದವರಿಂದ ಭಕ್ತರಿಗೆ ಇರುಮುಡಿ ಕಟ್ಟುವ ಪ್ರಕ್ರಿಯೆ ನಡೆಯಿತು. ಶಿಬಿರದಲ್ಲಿ ವಿಶೇಷ ಪೂಜೆ, ಮಧ್ಯಾಹ್ನ ಮಹಾಪೂಜೆ ಅನಂತರ ಮಹಾ ಅನ್ನಸಂತರ್ಪಣೆ ಜರಗಿತು. ದಾನಿಗಳಾದ ದಿ| ಗೋಪಾಲ ಶೆಟ್ಟಿ ಬಾಣಬೆಟ್ಟು ಅವರ ಪತ್ನಿ ಕಿಟ್ಟಿ ಶೆಡ್ತಿ, ವಿಶು ಶೆಟ್ಟಿ ಅಂಬಲಪಾಡಿ (ಸಮಾಜ ಸೇವೆ), ಗುರುರಾಜ್‌ ಸನಿಲ್‌ (ಉರಗತಜ್ಞ) ಅವರನ್ನು ಸಮ್ಮಾನಿಸಲಾಯಿತು.

Advertisement

ಸಮಿತಿಯ ಅಧ್ಯಕ್ಷ ಸತೀಶ್‌ ಶೆಟ್ಟಿ ಬಾಣಬೆಟ್ಟು, ಕಾರ್ಯದರ್ಶಿ ಉದಯ ಕೋಟ್ಯಾನ್‌ ಬಾಣಬೆಟ್ಟು, ಕೋಶಾಧಿಕಾರಿ ಜಗದೀಶ್‌ ಶೆಟ್ಟಿ ಕೀಳಂಜೆ, ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು. ಸಮಿತಿಯ ಸುಂದರ ಕೋಟ್ಯಾನ್‌ ಸ್ವಾಗತಿಸಿ, ಪ್ರಶಾಂತ್‌ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next