Advertisement
ಎರಡೂ ತಂಡಗಳಿಗೆ ಇದು ಮಹತ್ವದ ಪಂದ್ಯ. ಕೂಟದ ನೆಚ್ಚಿನ ತಂಡವಾಗಿರುವ ಆಸ್ಟ್ರೇಲಿಯ ತನ್ನ ಕಳೆದ ಪಂದ್ಯದಲ್ಲಿ ಭಾರತದ ವಿರುದ್ಧ ದಿಟ್ಟ ಹೋರಾಟ ನೀಡಿಯೂ ಶರಣಾಗಿತ್ತು. ಇದು ಈ ಕೂಟದಲ್ಲಿ ಆಡಿದ 3 ಪಂದ್ಯಗಳಲ್ಲಿ ಆಸ್ಟ್ರೇಲಿಯ ಅನುಭವಿಸಿದ ಮೊದಲ ಸೋಲು. ಇದಕ್ಕೂ ಮೊದಲು ಅಫ್ಘಾನಿಸ್ಥಾನ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಆಸೀಸ್ ಜಯ ಸಾಧಿಸಿತ್ತು. ಸದ್ಯ ಕಾಂಗರೂ ಪಡೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.
Related Articles
ಪಾಕಿಸ್ಥಾನ ಒಂದು ಅನಿಶ್ಚಿತ ತಂಡ. ಆಸ್ಟ್ರೇಲಿಯ ವಿರುದ್ಧ ಆಡಿದ ಕಳೆದ 14 ಪಂದ್ಯಗಳಲ್ಲಿ ಒಂದನ್ನಷ್ಟೇ ಗೆದ್ದಿದೆ. ಇದು 2017ರ ಮೆಲ್ಬರ್ನ್ ಮುಖಾಮುಖೀಯಲ್ಲಿ ಒಲಿದಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಪಾಕಿಸ್ಥಾನ ತಂಡದ ನಾಯಕ ಸಫರ್ರಾಜ್ ಅಹ್ಮದ್, ‘ನಾವು ಆಸ್ಟ್ರೇಲಿಯ ವಿರುದ್ಧ ಹೆಚ್ಚು ಪಂದ್ಯಗಳನ್ನು ಗೆಲ್ಲದೇ ಇರಬಹುದು, ಆದರೆ ಇಂಗ್ಲೆಂಡ್ ವಿರುದ್ಧವೂ ನಾವು ಇದೇ ಸ್ಥಿತಿಯಲ್ಲಿದ್ದು ಗೆದ್ದು ಬಂದುದನ್ನು ಮರೆಯಬಾರದು’ ಎಂದು ಎಚ್ಚರಿಸಿದ್ದಾರೆ.
Advertisement
ಆಸೀಸ್ ಸಂತುಲಿತ ತಂಡಬಲಾಬಲದ ಲೆಕ್ಕಾಚಾರದಲ್ಲಿ ಆಸ್ಟ್ರೇಲಿಯ ಹೆಚ್ಚು ಸಂತುಲಿತ ತಂಡ. 50 ಓವರ್‌ಗಳ ಪಂದ್ಯವನ್ನು ಹೇಗೆ ಆಡಬೇಕು, ಒತ್ತಡವನ್ನು ಹೇಗೆ ನಿಭಾಯಿಸಬೇಕು ಎಂಬುದೆಲ್ಲ ಕಾಂಗರೂ ಪಡೆಗೆ ಕರಗತ. ಭಾರತದೆದುರು 350ರಷ್ಟು ಅಗಾಧ ಗುರಿ ಇದ್ದರೂ ಫಿಂಚ್ ಪಡೆ ದಿಟ್ಟ ಹೋರಾಟ ನಡೆಸಿತ್ತು. ವಿಂಡೀಸ್ ಎದುರು ತೀವ್ರ ಕುಸಿತ ಅನುಭವಿಸಿದರೂ ಸವಾಲಿನ ಮೊತ್ತ ಪೇರಿಸಿತ್ತು. ಸಂಭಾವ್ಯ ತಂಡಗಳು
ಪಾಕಿಸ್ಥಾನ
ಇಮಾಮ್ ಉಲ್ ಹಕ್, ಫಕಾರ್ ಜಮಾನ್, ಬಾಬರ್ ಆಜಂ, ಮೊಹಮ್ಮದ್ ಹಫೀಜ್, ಶೋಯಿಬ್ ಮಲಿಕ್, ಸಫìರಾಜ್ ಅಹ್ಮದ್ (ನಾಯಕ), ಆಸಿಫ್ ಅಲಿ, ಶಾದಾಬ್ ಖಾನ್, ಹಸನ್ ಅಲಿ, ವಹಾಬ್ ರಿಯಾಜ್, ಮೊಹಮ್ಮದ್ ಆಮಿರ್. ಆಸ್ಟ್ರೇಲಿಯ
ಆರನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಉಸ್ಮಾನ್ ಖ್ವಾಜಾ, ಗ್ಲೆನ್ ಮ್ಯಾಕ್ಸ್ ವೆಲ್, ಶಾನ್ ಮಾರ್ಷ್ ಅಲೆಕ್ಸ್ ಕ್ಯಾರಿ, ಜಾಸನ್ ಬೆಹೆಡಾಫ್ì /ನಥನ್ ಕೋಲ್ಟರ್ ನೈಲ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆ್ಯಡಂ ಝಂಪ.