Advertisement

4 ಗ್ರ್ಯಾನ್‌ಸ್ಲಾಮ್‌ ವಿಜೇತ ಆ್ಯಶ್ಲೆ ಕೂಪರ್‌ ನಿಧನ

02:27 AM May 23, 2020 | Sriram |

ಮೆಲ್ಬರ್ನ್: ನಾಲ್ಕು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ಒಡೆಯ, ಆಸ್ಟ್ರೇಲಿಯದ ಚಾಂಪಿಯನ್‌ ಟೆನಿಸಿಗ ಆ್ಯಶ್ಲೆ ಕೂಪರ್‌ ಶುಕ್ರವಾದ ನಿಧನ ಹೊಂದಿದರು. 83 ವರ್ಷದ ಅವರು ವಯೋಸಹಜ ಸಮಸ್ಯೆಗಳಿಂದ ನರಳುತ್ತಿದ್ದರು ಎಂಬುದಾಗಿ “ಟೆನಿಸ್‌ ಆಸ್ಟ್ರೇಲಿಯ’ ತಿಳಿಸಿದೆ.

Advertisement

ವಿಶ್ವದ ಮಾಜಿ ನಂಬರ್‌ ವನ್‌ ಆಟಗಾರನಾಗಿದ್ದ ಆ್ಯಶ್ಲೆ ಕೂಪರ್‌ 1958ರಲ್ಲಿ ಆಸ್ಟ್ರೇಲಿಯನ್‌ ಓಪನ್‌, ವಿಂಬಲ್ಡನ್‌ ಮತ್ತು ಯುಎಸ್‌ ಓಪನ್‌ ಚಾಂಪಿಯನ್‌ ಆಗಿದ್ದರು. ಆ ವರ್ಷ ಅವರ ಏಕೈಕ ಗ್ರ್ಯಾನ್‌ಸ್ಲಾಮ್‌ ಸೋಲು ಫ್ರೆಂಚ್‌ ಓಪನ್‌ ಸೆಮಿಫೈನಲ್‌ನಲ್ಲಿ ಎದುರಾಗಿತ್ತು. 1957ರಲ್ಲಿ ಆಸ್ಟ್ರೇಲಿಯದ ಡೇವಿಸ್‌ ಕಪ್‌ ತಂಡವನ್ನು ಮುನ್ನಡೆಸಿದ ಅವರು, ಬೆನ್ನು ನೋವಿನ ಸಮಸ್ಯೆಯಿಂದ 1959ರಲ್ಲಿ ಸ್ಪರ್ಧಾತ್ಮಕ ಟೆನಿಸ್‌ನಿಂದ ದೂರ ಸರಿದಿದ್ದರು.

“ಆ್ಯಶ್ಲೆ ಕೂಪರ್‌ ಆಸ್ಟ್ರೇಲಿಯನ್‌ ಟೆನಿಸ್‌ ದೈತ್ಯ. ಓರ್ವ ಆಟಗಾರನಾಗಿ ಹಾಗೂ ಟೆನಿಸ್‌ ಆಡಳಿತಗಾರನಾಗಿ ಅವರು ನಿರ್ವಹಿಸಿದ ಸೇವೆ ಅನುಪಮ. ಅವರನ್ನು ಕಳೆದುಕೊಂಡ ಆಸೀಸ್‌ ಟೆನಿಸ್‌ ಬಡವಾಗಿದೆ. ಟೆನಿಸ್‌ ಗೆಳೆಯನಿಗೆ ವಿದಾಯ…’ ಎಂದು ಕಾಂಗರೂ ನಾಡಿನ ಟೆನಿಸ್‌ ಗ್ರೇಟ್‌ ರಾಡ್‌ ಲೆವರ್‌ ದುಃಖ ವ್ಯಕ್ತಪಡಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next