Advertisement

ಪಿಡಿಒಗಳ ಹೆಗಲಿಗೆ ಆಯುಷ್ಮಾನ್‌

10:46 AM Dec 25, 2019 | Suhan S |

ಕಲಘಟಗಿ: ಜನವರಿಯಲ್ಲಿ ಗ್ರಾಪಂ ಕಾರ್ಯಾಲಯ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಗ್ರಾಮಿಣ ಜನರಿಗೆ ಆಯುಷ್ಮಾನ್‌ ಭಾರತ-ಆರೋಗ್ಯ ಕರ್ನಾಟಕ ಕಾರ್ಡ್‌ ತಲುಪಿಸುವ ಗುರುತರ ಕಾರ್ಯವನ್ನು ಆಯಾ ಭಾಗದ ಪಿಡಿಒಗಳು ನಿರ್ವಹಿಸಬೇಕೆಂದು ಯೋಜನೆಯ ಜಿಲ್ಲಾ ನೋಡಲ್‌ ಅ ಧಿಕಾರಿ ಡಾ| ಶಶಿ ಪಾಟೀಲ ಕರೆ ನೀಡಿದರು.

Advertisement

ಪಟ್ಟಣದ ತಾಪಂ ಭವನದಲ್ಲಿ ತಾಲೂಕಿನ ಎಲ್ಲ ಪಿಡಿಒಗಳಿಗೆ ಮತ್ತು ಗಣಕಯಂತ್ರ ಕಾರ್ಯನಿರ್ವಾಹಕ ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಭಾಗಗಳಲ್ಲಿರುವ ಎಲ್ಲ ವರ್ಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ದೃಷ್ಟಿಯಿಂದ ಸರಕಾರ ಮಹತ್ವಾಕಾಂಕ್ಷಿ ಆಯುಷ್ಮಾನ್‌ ಯೋಜನೆ ಜಾರಿಗೆ ತಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಆಯುಷ್ಮಾನ್‌ ಕಾರ್ಡ್ ಗಳನ್ನು ಮಾಡಿಸುವಲ್ಲಿ ಪಿಡಿಒಗಳು ಗ್ರಾಮಿಣ ಜನರಲ್ಲಿ ಅರಿವು ಮೂಡಿಸಲು ಮುಂದಾಗಬೇಕೆಂದು ತಿಳಿಸಿದರು.

ಆಯುಷ್ಮಾನ ಭಾರತ-ಆರೋಗ್ಯ ಕರ್ನಾಟಕ ಜಿಲ್ಲಾ ಸಂಯೋಜಕ ಬಿ.ಜಿ. ಮಕಾಂದಾರ ಮಾತನಾಡಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಭರತ ಬಹುರೂಪಿ, ರವಿರಾಜ ಹಿರೇಗೌಡರ, ನಾಗರಾಜ ಗಿರೆಪ್ಪನ್ನವರ, ಜಯಶ್ರೀ, ಮಂಜುನಾಥ ಹಿರೇಮಠ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next