Advertisement

ಮಾಸ್ಕ್ ಧರಿಸದಿದ್ದರೆ ದಂಡ: ಪಿಎಸ್‌ಐ

01:38 PM Jun 29, 2020 | Naveen |

ಔರಾದ: ಪಟ್ಟಣದ ವ್ಯಾಪಾರಿಗಳು, ವಾಹನ ಚಾಲಕರು, ಸವಾರರು, ಪಾದಚಾರಿಗಳು, ಪ್ರಯಾಣಿಕರು ಸೇರಿ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇಲ್ಲದಿದ್ದರೆ ಅಂಥವರಿಗೆ ದಂಡ ವಿಧಿಸಲಾಗುವುದು ಎಂದು ಪಿಎಸ್‌ಐ ಜಗದೀಶ ನಾಯಕ ತಿಳಿಸಿದ್ದಾರೆ.

Advertisement

ಮೂರು ರಾಜ್ಯಗಳಿಗೆ ಕೊಂಡಿಯಾಗಿರುವ ಗಡಿ ತಾಲೂಕಿನಲ್ಲಿ ರಾಜ್ಯ ಸೇರಿದಂತೆ ಅಂತಾರಾಜ್ಯದಿಂದ ಪ್ರಯಾಣಿಕರು ಬರುತ್ತಿದ್ದಾರೆ. ಗ್ರಾಹಕರು, ವ್ಯಾಪಾರಸ್ಥರು ಮಾಸ್ಕ್ ಹಾಕಿಕೊಂಡು, ಸುರಕ್ಷಿತ ಅಂತರ ಪಾಲಿಸಿ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕು. ಎಲೆ ಅಡಿಕೆ ಮತ್ತು ಗುಟಕಾ ತಿಂದು ರಸ್ತೆಯಲ್ಲಿ ಉಗುಳುವವರಿಗೂ ದಂಡ ವಿಧಿಸಲಾಗುವುದು. ಸರ್ಕಾರ ಹಾಗೂ ಸರ್ಕಾರಿ ನೌಕರರು ಮಹಾಮಾರಿ ಕೋವಿಡ್  ಓಡಿಸಲು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಈ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ವಿನಂತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next