Advertisement
ಒಟ್ಟು 20 ವಾರ್ಡ್‌ಗಳಿರುವ ಪಟ್ಟಣ ಪಂಚಾಯತನಲ್ಲಿ 12 ಸ್ಥಾನ ಬಿಜೆಪಿ, 6 ಸ್ಥಾನ ಕಾಂಗ್ರೆಸ್, 2 ಸ್ಥಾನಗಳಲ್ಲಿ ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿ ಪಪಂ ಚುನಾವಣೆಯಲ್ಲಿ ಕೆಜೆಪಿ ಹಾಗೂ ಬಿಜೆಪಿ ಸಮಬಲದ ಗೆಲುವು ಸಾಧಿಸಿದ್ದವು. ಕೆಜೆಪಿ ಮೂಲಕ ಏಳು ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಅರದರಂತೆ ಬಿಜೆಪಿಯ ಅಂದಿನ ಸದಸ್ಯ ರಾಜಕುಮಾರ ನಿರ್ಮಳೆ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಪಟ್ಟಣ ಪಂಚಾಯತ ಅಧಿಕಾರನ್ನು ಕಾಂಗ್ರೆಸ್ ಪಕ್ಷ ಹಿಡಿದಿತ್ತು.
Related Articles
Advertisement
ಮೂರು ಅಧ್ಯಕ್ಷರ ಗೆಲುವು: ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಒಂದು ಸಲ ಗೆದ್ದು ಇನ್ನೊಂದು ಸಲ ಗೆಲ್ಲುವುದೇ ಕಠಿಣವಾಗಿದೆ. ಆದರೆ ಔರಾದ ಪಟ್ಟಣದಲ್ಲಿ ಮೂವರು ಪಪಂ ಮಾಜಿ ಅಧ್ಯಕ್ಷರು ಸತತವಾಗಿ ಆಯ್ಕೆಯಾಗುವ ಮೂಲಕ ಜನರ ಮೆಚ್ಚುಗೆ ಪಡೆದಿದ್ದಾರೆ. ಪಪಂ ಮಾಜಿ ಅಧ್ಯಕ್ಷ ಧೋಂಡಿಬಾರಾವ್ ನರೋಟೆ ಮೂರನೇ ಬಾರಿಯೂ ಸಹ ಕಾಂಗ್ರೆಸ್ ಪಕ್ಷದಿಂದಲೆ ಆಯ್ಕೆಯಾಗಿದ್ದಾರೆ. ಸರಸ್ವತಿ ವೈಜಿನಾಥ ಘೂಳೆ ಕೆಜೆಪಿಯಿಂದ ಒಂದು ಸಲ, ಕಾಂಗ್ರೆಸ್ ಪಕ್ಷದಿಂದ ಎರಡು ಸಲ ಆಯ್ಕೆಯಾಗಿದ್ದಾರೆ. ಅದರಂತೆ ಸುನೀಲಕುಮಾರ ದೇಶಮುಖ ಎರಡನೆ ಬಾರಿಯೂ ಸಹ ಬಿಜೆಪಿಯಿಂದಲೆ ಆಯ್ಕೆಯಾಗಿದ್ದಾರೆ. ಪಟ್ಟಣದಲ್ಲಿ ಉತ್ತಮ ಕೆಲಸ ಮಾಡುವ ವ್ಯಕ್ತಿಯನ್ನು ಇಲ್ಲಿನ ಮತದಾರರು ಎಂದಿಗೂ ಕೈ ಬಿಡುವುದಿಲ್ಲ ಎಂಬುದು ಫಲಿತಾಂಶದ ತಿಳಿಯುತ್ತದೆ.
ತಾಯಿ-ಮಗ ಗೆಲುವು: ಸರಸ್ವತಿ ವೈಜಿನಾಥ ಘೂಳೆ 19ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದರೆ, ಪುತ್ರ ದಯಾನಂದ ಘೂಳೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದಿರುವುದರಿಂದ ಪಕ್ಷೇತರ ಅಭ್ಯರ್ಥಿಯಾಗಿ 8ನೇ ವಾರ್ಡ್‌ನಲ್ಲಿ ಗೆಲುವು ಸಾಧಿಸಿದ್ದಾರೆ.
ಮಾವ-ಸೊಸೆ ಗೆಲುವು: ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷ ಹಾಗೂ ಹ್ಯಾಟ್ರಿಕ್ ಗೆಲುವು ಸಾಧಿಸಿದ 9ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ ಧೋಂಡಿಬಾರಾವ್ ನರೋಟೆ ಹಾಗೂ 1ನೇ ವಾರ್ಡ್‌ನಲ್ಲಿ ರಾಧಾ ಕೃಷ್ಣಾ ನರೋಟೆ, ಒಂದೇ ಕುಟುಂಬದ ಇಬ್ಬರು (ಮಾವ-ಸೊಸೆ) ಗೆಲುವು ಸಾಧಿಸಿದ್ದಾರೆ.