Advertisement

ಅಗಸ್ಟಾ ಮಧ್ಯವರ್ತಿ ಮೈಕಲ್‌ ಮತ್ತೆ ಐದು ದಿನ ಸಿಬಿಐ ಕಸ್ಟಡಿಗೆ

05:05 PM Dec 10, 2018 | Team Udayavani |

ಹೊಸದಿಲ್ಲಿ : ಅಗಸ್ಟಾ ವೆಸ್ಟ್‌ಲ್ಯಾಂಡ್‌ ವಿವಿಐಪಿ ಹೆಲಿಕಾಪ್ಟರ್‌ ಡೀಲ್‌ ಪ್ರಕರಣದ ಮಧ್ಯವರ್ತಿ ಕ್ರಿಶ್ಚಿಯನ್‌ ಮೈಕಲ್‌ ನನ್ನು ದಿಲ್ಲಿ ನ್ಯಾಯಾಲಯವೊಂದು  ಐದು ದಿನಗಳ ಸಿಬಿಐ ಕಸ್ಟಡಿಗೆ ಒಪ್ಪಿಸಿದ್ದು ಆ ಮೂಲಕ ಆತನ ಕಸ್ಟಡಿ ತನಿಖಾ ಅವಧಿಯನ್ನು ವಿಸ್ತರಿಸಿದೆ. 

Advertisement

ಈ ಮೊದಲಿನ ಐದು ದಿನಗಳ ಸಿಬಿಐ ರಿಮಾಂಡ್‌ ಅವಧಿ ಇಂದು ಮುಗಿದ ಹಿನ್ನೆಲೆಯಲ್ಲಿ ಮೈಕಲ್‌ ನನ್ನು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅರವಿಂದ ಕುಮಾರ್‌ ಅವರ ಮುಂದೆ ಹಾಜರುಪಡಿಸಲಾಯಿತು. 

ಮೈಕಲ್‌ ತನಿಖೆಗೆ ಸಹಕರಿಸುತ್ತಿಲ್ಲವಾದ್ದರಿಂದ ಆತನನ್ನು ಇನ್ನೂ 9 ದಿನಗಳ ಕಸ್ಟಡಿಗೆ ಕೊಡಬೇಕೆಂದು ಸಿಬಿಐ ಕೋರಿತ್ತು. ಆದರೆ ನ್ಯಾಯಾಧೀಶರು ಆತನನ್ನು ಐದು ದಿನಗಳ ಕಸ್ಟಡಿಗೆ ಒಪ್ಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next