ಶಿವಮೊಗ್ಗ: ಶಿವಮೊಗ್ಗದಿಂದ ನಾಗರಿಕ ವಿಮಾನಯಾನ ಸೇವೆ ಯಾವಾಗ ಎಂಬ ಪ್ರಶ್ನೆಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ. ಆಗಸ್ಟ್ 31ರಂದು ಮೊದಲ ನಾಗರಿಕ ವಿಮಾನ ಶಿವಮೊಗ್ಗ-ಬೆಂಗಳೂರು ನಡುವೆ ಸಂಚರಿಸಲಿದೆ.
ಆ.11ರಅದು ವಿಮಾನ ಯಾನ ಸೇವೆ ಆರಂಭವಾಗುತ್ತದೆ ಎಂದು ಈವರೆಗೂ ಹೇಳಲಾಗಿತ್ತಾದರೂ ವಿಮಾನಗಣಳ ಲಭ್ಯತೆ ಕಾರಣದಿಂದ ಆ.31ರಂದು ಮೊದಲ ವಿಮಾನ ಹಾರಾಟ ನಡೆಸಲಿದೆ. ಈ ಮೂಲಕ ಶಿವಮೊಗ್ಗ ವಿಮಾನ ನಿಲ್ದಾಣ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.
ಬುಧವಾರ ಸಂಜೆ 4 ಗಂಟೆಯಿಅದ ಬುಕ್ಕಿಂಗ್ ಅವಕಾಶ ಕಲ್ಪಿಸಲಾಗಿದೆ. ಆ.31ರ ಬೆಳಗ್ಗೆ 9.50ಕ್ಕೆ ಮೊದಲ ವಿಮಾನ ಬೆಂಗಳೂರಿನಿಂದ ಹೊರಡಲಿದ್ದು ಶಿವಮೊಗ್ಗಕ್ಕೆ 11.05ಕ್ಕೆ ಆಗಮಿಸಿದೆ. ಆ ದಿನ ಪ್ರತಿ ಟಿಕೆಟ್ ದರ 6227 ರೂ. ನಿಗದಿ ಮಾಡಲಾಗಿದೆ. ಅದೇ ದಿನ ಬೆಳಗ್ಗೆ 11.25ಕ್ಕೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 12.25ಕ್ಕೆ ಬೆಂಗಳೂರು ತಲುಪಲಿದೆ. ಸೆ.1ರ ಬುಕ್ಕಿಂಗ್ ದರ ಕಡಿತ ಮಾಡಲಾಗಿದ್ದು ಪ್ರತಿ ಟಿಕೆಟ್‌ಗೆ 4 ಸಾವಿರ ರೂ. ನಿಗದಿ ಮಾಡಲಾಗಿದೆ. ಪ್ರತಿ ದಿನ ಅದೇ ಸಮಯದಲ್ಲಿ ವಿಮಾನ ಸಂಚರಿಸಲಿದೆ.
“ಟಿಕೆಟ್ ಬುಕ್ಕಿಂಗ್ ಆರಂಭಗೊಅಡಿದೆ. ಆ.31ರಂದು ಮೊದಲ ವಿಮಾನ ಬೆಂಗಳೂರಿನಿಂದ ಸಂಚರಿಸಲಿದೆ. ಇನ್ನೆರಡು ದಿನದಲ್ಲಿ ಶಿವಮೊಗ್ಗ-ಬೆಂಗಳೂರು ದೆಹಲಿ ಸೇರಿ ಇತರೆ ಮಾರ್ಗಗಳಿಗೆ ಬುಕ್ಕಿಂಗ್ ಆರಂಭಗೊಳ್ಳಲಿದೆ. ಬುಕ್ಕಿಂಗ್ ಶುರುವಾಗಿ ಕೆಲವೇ ಗಂಟೆಗಳಾಗಿದ್ದು ಟಿಕೆಟ್ ದರ, ಕನೆಕ್ಟಿಂಗ್ ಮಾರ್ಗಗಳ ಕುರಿತ ಬದಲಾವಣೆಗಳಿದ್ದರೆ ಒಂದೆರಡು ದಿನದಲ್ಲಿ ಅಪ್ಡೇಟ್ ಆಗಲಿದೆ ಎನ್ನುತ್ತಾರೆ ಇಂಡಿಗೋ ಏರ್‌ಲೈನ್ಸ್ ಅಧಿಕಾರಿಗಳು. ಚುನಾವಣೆ ಸಮಯದಲ್ಲಿ 10ಕ್ಕೂ ವಿಮಾನಗಳು ಶಿವಮೊಗ್ಗಕ್ಕೆ ಬಂದಿದ್ದವು.