Advertisement
‘ಸುದಿನ’ ವರದಿ ಗಮನಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಸುಂದರ ಪೂಜಾರಿ, ಇಲಾಖೆ ಅಧಿಕಾರಿ ಶೋಭಾ, ಲೋಕೋಪಯೋಗಿ ಹಾಗೂ ಇತರ ಇಲಾಖೆ ಅಧಿಕಾರಿಗಳು ಮಂಗಳವಾರ ಬೆಳಗ್ಗೆಯೇ ಅಂಗನವಾಡಿ ಕಟ್ಟಡವನ್ನು ಪರಿಶೀಲಿಸಿದರು. ಕೂಡಲೇ ತುರ್ತು ಕಾಮಗಾರಿ ನಡೆಸಬೇಕೆಂಬ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಸುಂದರ ಪೂಜಾರಿ ಅವರು ಅಂಗನವಾಡಿಗೆ ಭೇಟಿ ನೀಡಿ, ಕಾಮಗಾರಿ ವೇಳೆಯಲ್ಲಿ ಮಕ್ಕಳನ್ನು ಹತ್ತಿರದ ಆಶಾ ಕಾರ್ಯಕರ್ತೆಯರ ಕಟ್ಟಡಕ್ಕೆ ಸ್ಥಳಾಂತರಗೊಳಿಸಿ ಎಂದು ಸೂಚನೆ ನೀಡಿದ್ದಾರೆ. ಆದರೆ, ಈಗಿನ ಕಟ್ಟಡ ದೊಡ್ಡದಾಗಿದೆ. ಇಲ್ಲಿಯೇ ಪಾಠ ಮಾಡಿ, ಮಕ್ಕಳನ್ನು ಸ್ಥಳಾಂತರಿಸಬೇಡಿ ಎಂದು ಪೋಷಕರು ಹೇಳುತ್ತಿದ್ದಾರೆಂದು ಅಂಗನವಾಡಿಯ ಕಾರ್ಯಕರ್ತೆಯರು ತಿಳಿಸಿದ್ದಾರೆ.
Related Articles
ಈವರೆಗಿನ ಎಲ್ಲ ಕಾಮಗಾರಿ ವೆಚ್ಚವನ್ನು ಪ್ರಗತಿ ಮಹಿಳಾ ಮಂಡಲ ಸದಸ್ಯರೇ ಭರಿಸಿದ್ದಾರೆ. ಅಂಗನವಾಡಿ ಕೇಂದ್ರ ಪೂರ್ಣವಾಗಿ ಸರಕಾರದ ಸುಪರ್ದಿಗೆ ಬಾರದ ಕಾರಣದಿಂದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅನುದಾನ ಬಿಡುಗಡೆಗೊಳ್ಳುವುದಿಲ್ಲ. ಈ ಕಟ್ಟಡದ ಎಲ್ಲ ಕಾಮಗಾರಿಗೆ ಮಹಿಳಾ ಮಂಡಳದ ಸದಸ್ಯರೇ ಹಣ ವಿನಿಯೋಗಿಸಬೇಕು. ಕಾರ್ಯಕರ್ತರ ಪ್ರಕಾರ, ಈವರೆಗಿನ ಕಾಮಗಾರಿಗೆ 30 ಸಾವಿರ ರೂ. ಬಳಕೆಯಾಗಿದೆ.
Advertisement
ಅರಣ್ಯ ಇಲಾಖೆಗೆ ಪತ್ರಅಂಗನವಾಡಿ ಕಟ್ಟಡದ ಪಕ್ಕದಲ್ಲಿಯೇ ದೊಡ್ಡದಾದ ಮರವಿದ್ದು, ಇದರ ರೆಂಬೆಗಳು ಬಿದ್ದು ಅಂಗನವಾಡಿ ಕಟ್ಟಡದ ಕೆಲವು ಶೀಟ್‌ಗಳು ತುಂಡಾಗಿವೆ. ಈ ಬಗ್ಗೆ ಮಹಿಳಾ ಮಂಡಳಿ ಕಾರ್ಯಕರ್ತೆಯರು ಅರಣ್ಯ ಇಲಾಖೆಗೆ ಪತ್ರ ಬರೆದು, ರೆಂಬೆಗಳನ್ನು ಕತ್ತರಿಸುವಂತೆ ಮನವಿ ಸಲ್ಲಿಸಿದ್ದಾರೆ. ಕಾರ್ಯಕರ್ತೆಯರಿಗೆ ಸೂಚನೆ
ಹೊಸದಾಗಿ ಅಂಗನವಾಡಿ ತೆರೆಯಲು ನಗರ ವ್ಯಾಪ್ತಿಯಲ್ಲಿ ಸ್ಥಳಾವಕಾಶದ ಕೊರತೆ ಇದೆ. ಆದರೂ ಎಲ್ಲೆಲ್ಲಿ ಸ್ಥಳಾವಕಾಶ ಲಭ್ಯವಿದೆ ಎಂದು ಗುರುತಿಸಲು ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚನೆ ನೀಡಿದ್ದೇನೆ. ಸದ್ಯ ಕಟ್ಟಡದ ತುರ್ತು ಕಾಮಗಾರಿ ನಡೆಸಲಾಗಿದೆ.
– ಶೋಭಾ,
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ, ಮಂಗಳೂರು ಕಟ್ಟಡಕ್ಕೆ ಸುಣ್ಣ ಬಳಿಯುತ್ತೇವೆ
ಪ್ರೇರಣಾ ಮಹಿಳಾ ಮಂಡಳಿ ಸದಸ್ಯೆ ಪುಷ್ಪಾವತಿ ಪ್ರತಿಕ್ರಿಯಿಸಿ, ಮಳೆ ಬಂದ ಕಾರಣ ಸುಣ್ಣ ಬಳಿಯಲು ಸಮಯ ತೆಗೆದುಕೊಳ್ಳುತ್ತದೆ. ಇನ್ನೆರಡು ದಿನಗಳನ್ನು ಪೂರ್ತಿ ಕಟ್ಟಡಕ್ಕೆ ಸುಣ್ಣ ಬಳಿಯುತ್ತೇವೆ. ಹೊಸದಾಗಿ 7 ಶೀಟ್‌ಗಳನ್ನು ಅಳವಡಿಸಿದ್ದೇವೆ. ಬಿರುಕು ಬಿಟ್ಟ ಗೋಡೆಗಳಿಗೆ ಸಿಮೆಂಟ್ ಹಾಕಿದ್ದೇವೆ ಎಂದರು.