Advertisement
ಬಿಜೆಪಿ ರಾಜ್ಯ ಅಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರ ಧ್ವನಿ ಇದೆ ಎಂದು ಹೇಳಲಾಗಿರುವ ಆಡಿಯೋದ ಕುರಿತು ಚರ್ಚೆಗಳು ನಡೆಯುತ್ತಿರುವ ಹಾಗೆಯೇ, ” ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ಯಡಿಯೂರಪ್ಪ ಆಮಿಷ ಒಡ್ಡಿರುವ ಆಡಿಯೋ ಅವರದ್ದು ಅಲ್ಲ ಎಂದಾದರೆ ನಾನು ರಾಜೀನಾಮೆ ನೀಡುತ್ತೇನೆ,” ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸವಾಲೆಸೆದಿದ್ದಾರೆ. ಅವರು ಈ ಸವಾಲನ್ನು ಧರ್ಮಸ್ಥಳದಲ್ಲಿ ಹಾಕುವ ಮೂಲಕ ಇಡೀ ಪ್ರಕರಣಕ್ಕೆ ಮತ್ತೂಂದು ಆಯಾಮವನ್ನು ನೀಡಿದ್ದಾರೆ.
Related Articles
Advertisement
”ಬಿಜೆಪಿಯ ನಾಯಕರೊಬ್ಬರನ್ನು ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ಮಾಡಲು 25 ಕೋಟಿ ಲಂಚ ಕೇಳಿದ ಧ್ವನಿ ಮತ್ತು ದೃಶ್ಯಾವಳಿ ನಮ್ಮಲ್ಲಿದ್ದು, ಸೋಮವಾರ ಸದನದಲ್ಲಿ ಇದನ್ನು ಪ್ರಸ್ತಾಪಿಸಲಿದ್ದೇವೆ” ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೊಸ ಬಾಂಬ್ ಹಾಕಿದ್ದಾರೆ. ಈ ಸಿ.ಡಿಯನ್ನು ಸೋಮವಾರ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್‌ಗೆ ನೀಡಲಿದ್ದೇವೆ. ಈ ಆಡಿಯೋ ಸತ್ಯಾಸತ್ಯತೆಯನ್ನು ಅರಿಯಲು ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ತಮ್ಮ ಕೊಠಡಿಗೆ ಕರೆಸಿ ವಿಚಾರಣೆ ನಡೆಸುವಂತೆ ಮನವಿ ಮಾಡಲಿದ್ದೇವೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಹಿಂದೆ ಜೆಡಿಎಸ್‌ನಲ್ಲಿದ್ದ ಪ್ರಸ್ತುತ ಬಿಜೆಪಿಯಲ್ಲಿರುವ ವಿಜುಗೌಡ ಅವರು ಪರಿಷತ್‌ಗೆ ಸೀಟು ಕೇಳಿದಾಗ ಅವರ ಬಳಿ ದುಡ್ಡಿನ ಕುರಿತು ಪ್ರಸಾಪಿಸಿದ್ದು ನಿಜ. ಆದರೆ ಅದು ವ್ಯವಸ್ಥೆಯ ಕುರಿತು ಮಾತನಾಡಿದ್ದೇ ವಿನಾ ಹಣಕ್ಕೆ ಬೇಡಿಕೆ ಇರಿಸಿದ್ದಲ್ಲ. ಅಂತಹ ವಿಡಿಯೋ ದಾಖಲೆಗಳಿದ್ದರೆ ಬಿಜೆಪಿಯವರು ಬಿಡುಗಡೆ ಮಾಡಲು ಸರ್ವ ಸ್ವತಂತ್ರರಿದ್ದಾರೆ ಎಂದು ಹೇಳಿದ್ದಾರೆ.
ಸದನದಲ್ಲಿ ಸೋಮವಾರ ಬಿಜೆಪಿಯವರು ವಿಡಿಯೋ ರಿಲೀಸ್ ಮಾಡುವ ಬಗ್ಗೆ ಮುಖ್ಯಮಂತ್ರಿ ಹೇಳಿದ್ದಾರೆ. ನಾನು ಯಾವುದನ್ನೂ ಮುಚ್ಚಿಡುವುದಿಲ್ಲ. ಬಿಡುಗಡೆ ಮಾಡಲಿ ಎಂದು ಹೇಳಿದ್ದಾರೆ. ನೋಡೋಣ. ● ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ
ಕುಮಾರಸ್ವಾಮಿ ತನ್ನ ವೈಫಲ್ಯ ಮುಚ್ಚಿಡಲು ಯಡಿಯೂರಪ್ಪ ವಿರುದ್ಧ ಆರೋಪ ಮಾಡಿದ್ದಾರೆ. ಜೆಡಿಎಸ್‌ನವರಿಗೆ ನಕಲಿ ಆಡಿಯೋ ಬಿಡುಗಡೆ ಅಭ್ಯಾಸವಾಗಿಬಿಟ್ಟಿದೆ. ಸಂಸದ ಉಗ್ರಪ್ಪ ಕೂಡ ಆಡಿಯೋ ಬಿಡುಗಡೆ ಮಾಡಿದ್ದರು. • ಡಾ.ಅಶ್ವತ್ಥ ನಾರಾಯಣ, ಬಿಜೆಪಿ ಶಾಸಕ