Advertisement

Audio Contraversy: ಶರಣ್‌ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲು

01:56 AM Sep 18, 2024 | Team Udayavani |

ಬಂಟ್ವಾಳ: ಮಿಲಾದ್‌ ರ್‍ಯಾಲಿಯ ವಿಷಯಕ್ಕೆ ಸಂಬಂಧಿಸಿ ಬಿ.ಸಿ.ರೋಡಿನಲ್ಲಿ ಉಂಟಾಗಿದ್ದ ಬಿಗುವಿನ ವಾತಾವರಣ ತಿಳಿಯಾಗಿದ್ದು, ಮಂಗಳವಾರ ಸಹಜ ಸ್ಥಿತಿ ಕಂಡು ಬಂತು.

Advertisement

ಇದೇ ವಿಚಾರದಲ್ಲಿ ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರುಗಳ ಆಧಾರದಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮುಸ್ಲಿಂ ಧರ್ಮವನ್ನು ನಿಂದಿಸಿ ಕೋಮು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಬಂಟ್ವಾಳ ನಿವಾಸಿ ಮಹಮ್ಮದ್‌ ರಫೀಕ್‌ ಕೆಳಗಿನಪೇಟೆ ನೀಡಿದ ದೂರಿನ ಆಧಾರದಲ್ಲಿ ಶರಣ್‌ ಪಂಪುವೆಲ್‌ ಹಾಗೂ ಭರತ್‌ ಕುಮ್ಡೇಲ್‌ ವಿರುದ್ಧ ಪ್ರಕರಣ ದಾಖಲಾಗಿದೆ.

ಮುಸ್ಲಿಂ ಧರ್ಮವನ್ನು ನಿಂದಿಸಿ, ಪುರಸಭಾ ಸದಸ್ಯ ಮಹಮ್ಮದ್‌ ಶರೀಫ್‌ ಅವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಬಂಟ್ವಾಳದ ಮಹಮ್ಮದ್‌ ಸಪ್ನಾಜ್‌ ನವಾಜ್‌ ನೀಡಿದ ದೂರಿನಂತೆ ಯಶೋಧರ ಕರ್ಬೆಟ್ಟು ವಿರುದ್ಧ ಪ್ರಕರಣ ದಾಖಲಾಗಿದೆ. ಬಿ.ಸಿ.ರೋಡಿನಲ್ಲಿ ಮಂಗಳವಾರವೂ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮುಂದುವರಿದಿದ್ದು, ದ.ಕ.ಜಿಲ್ಲಾ ಪೊಲೀಸರ ಜತೆಗೆ ಆಯಕಟ್ಟಿನ ಸ್ಥಳಗಳಲ್ಲಿ ಕೆಎಸ್‌ಆರ್‌ಪಿ ಪೊಲೀಸರನ್ನೂ ನಿಯೋಜಿಸಲಾಗಿತ್ತು. ಸಹಜ ಸ್ಥಿತಿಯ ವಾತಾವರಣವಿದ್ದು, ಯಾವುದೇ ಅಹಿತಕರ ಘಟನೆಗಳು ನಡೆದ ಕುರಿತು ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ದ.ಕ.ಜಿಲ್ಲೆಯಲ್ಲಿನ ಸ್ಥಿತಿ: ಕಾಸರಗೋಡು ಜಿಲ್ಲೆಯಲ್ಲಿ ತೀವ್ರ ನಿಗಾ
ಕಾಸರಗೋಡು: ದ.ಕನ್ನಡ ಜಿಲ್ಲೆಯ ಕೆಲವೆಡೆ ಕೋಮು ಸಾಮರಸ್ಯ ಹದಗೆಡುವಂತೆ ಮಾಡುವ ಕೆಲವೊಂದು ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಬಿಗು ಪೊಲೀಸ್‌ ನಿಯಂತ್ರಣ ಏರ್ಪಡಿಸಲಾಗಿದೆ.

ಇದರಂತೆ ತಲಪಾಡಿ, ಪೆರ್ಲ, ಆದೂರು, ಪಾಣತ್ತೂರು, ಕೆದುಂಬಾಡಿ, ಆನೆಕಲ್ಲು ಮೊದಲಾದ ಕೇರಳ- ಕರ್ನಾಟಕ ಗಡಿ ಪ್ರದೇಶದ ತಪಾಸಣೆ ಕೇಂದ್ರಗಳಲ್ಲಿ ಪೊಲೀಸ್‌ ಬಿಗು ನಿಯಂತ್ರಣ ಏರ್ಪಡಿಸಲಾಗಿದೆ. ಎಲ್ಲ ವಾಹನಗಳನ್ನು ತಪಾಸಣೆಗೆ ಒಳಪಡಿಸ ಲಾಗುತ್ತಿದೆ. ವಾಹನದಲ್ಲಿ ಸಂಚರಿಸುವ ಎಲ್ಲರ ಮಾಹಿತಿ ಪಡೆಯಲಾಗುತ್ತಿದೆ. ಶಂಕಿತರಿದ್ದಲ್ಲಿ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next