Advertisement

ಭಾರತದಲ್ಲಿ Audi Q3 Bold Editon ಮಾರುಕಟ್ಟೆಗೆ ಬಿಡುಗಡೆ; ಹೊಸ ಡಿಸೈನ್‌, ಫೀಚರ್ಸ್

04:18 PM May 13, 2024 | Team Udayavani |

ನವದೆಹಲಿ: ಐಶಾರಾಮಿ ಕಾರು ತಯಾರಿಕಾ ಕಂಪನಿಯಾದ Audi ಭಾರತದಲ್ಲಿ ನೂತನ ಶ್ರೇಣಿಯ ಆಡಿ ಕ್ಯೂ3 ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವುದಾಗಿ ತಿಳಿಸಿದೆ. ಹೊಸ ಶ್ರೇಣಿಯಲ್ಲಿ ಸ್ಟ್ಯಾಂಡರ್ಡ್‌ ಕ್ಯೂ3 ಮತ್ತು ಸ್ಫೋರ್ಟಿಯರ್‌ ವೆರಿಯಂಟ್‌, ಕ್ಯೂ3 ಸ್ಫೋರ್ಟ್‌ ಬ್ಯಾಕ್ ನಲ್ಲಿ ಲಭ್ಯವಿದೆ ಎಂದು ತಿಳಿಸಿದೆ.‌

Advertisement

ಇದನ್ನೂ ಓದಿ:T20 ಕ್ರಿಕೆಟ್ ನಿಂದ ರೋಹಿತ್ ನಿವೃತ್ತಿ? ಹಾರ್ದಿಕ್ ತಂಡ ಸೇರ್ಪಡೆಗೆ ಹಿಟ್ ಮ್ಯಾನ್ ಕಾರಣ?

ಆಡಿ Q3 Bold edition ಬೆಲೆ (ಎಕ್ಸ್‌ ಶೋರೂಂ) 54.65 ಲಕ್ಷ ರೂಪಾಯಿ, Q3 Sportback bold edition ಬೆಲೆ 55.71 ಲಕ್ಷ ರೂಪಾಯಿಯಾಗಿದೆ. ಆಡಿ ಕ್ಯೂ3 ಬೋಲ್ಡ್‌ ಆವೃತ್ತಿಯು ವಿಶಿಷ್ಟವಾದ ಬ್ಲ್ಯಾಕ್‌ ಸ್ಟೈಲಿಂಗ್‌ ಪ್ಯಾಕೇಜ್‌ ಫೀಚರ್‌ ಅನ್ನು ಒಳಗೊಂಡಿದೆ.

ಆಡಿ ಕಾರಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಆಡಿ ಲೋಗೋ ಹೊಂದಿದ್ದು, ಆಡಿ ಕ್ಯೂ3ರಲ್ಲಿ 10.1 ಇಂಚಿನ ಟಚ್‌ ಸ್ಕ್ರೀನ್‌ ಮಾಹಿತಿ ವ್ಯವಸ್ಥೆ, ಡಿಜಿಟಲ್‌ ಡ್ರೈವರ್ಸ್‌ ಡಿಸ್‌ ಪ್ಲೇ, ಡ್ಯುಯೆಲ್‌ ಝೋನ್‌ ಕ್ಲೈಮೇಟ್‌ ಕಂಟ್ರೋಲ್‌, ವಯರ್‌ ಲೆಸ್‌ ಫೋನ್‌ ಚಾರ್ಜಿಂಗ್‌ ವ್ಯವಸ್ಥೆ ಹೊಂದಿದೆ.

Advertisement

ಆಡಿ ಕ್ಯೂ3 ಬೋಲ್ಡ್‌ ಎಡಿಷನ್‌ ನಲ್ಲಿ ಆರು ಏರ್‌ ಬ್ಯಾಗ್‌ ಗಳಿದ್ದು, ರಿವರ್ಸಿಂಗ್‌ ಕ್ಯಾಮೆರಾ, ಪಾರ್ಕ್‌ ಅಸಿಸ್ಟ್‌, 2 ಲೀಟರ್‌ ಟರ್ಬೋ ಪೆಟ್ರೋಲ್‌ ಎಂಜಿನ್‌, 7 ಸ್ಪೀಡ್‌ ಡಿಸಿಟಿ (Dual Clutch transmission) ಗೇರ್‌ ಬಾಕ್ಸ್‌ ಒಳಗೊಂಡಿರುವುದಾಗಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next