Advertisement

ದೇಗುಲ ಅಭಿವೃದ್ಧಿಗೆ ಗ್ರಾಪಂ ಸದಸ್ಯ ಸ್ಥಾನ ಹರಾಜು!

07:20 PM Dec 11, 2020 | Suhan S |

ಚಳ್ಳಕೆರೆ: ದೇವಾಲಯದ ಜೀರ್ಣೋದ್ಧಾರಕ್ಕೆ ಗ್ರಾಪಂ ಸದಸ್ಯ ಸ್ಥಾನಗಳನ್ನು ಹರಾಜು ಹಾಕಿ ಹಣ ಸಂಗ್ರಹಿಸಿ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಿದ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಯಾದಲಗಟ್ಟೆ ಗ್ರಾಮದಲ್ಲಿ ನಡೆದಿದೆ.

Advertisement

ಯಾದಲಗಟ್ಟೆ ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು ನಾಲ್ಕು ಸ್ಥಾನಗಳಿವೆ. ಅದರಲ್ಲಿ ಎರಡುಸಾಮಾನ್ಯ ಮಹಿಳೆ, ಒಂದು ಸಾಮಾನ್ಯ ಪುರುಷ ಹಾಗೂ ಒಂದು ಪರಿಶಿಷ್ಟ ಪಂಗಡದ ಪುರುಷ ಮೀಸಲಾತಿ ಇದೆ. ಗ್ರಾಮದ ಮಾರಮ್ಮನ ದೇವಸ್ಥಾನದ ಆವರಣದಲ್ಲಿ ಗ್ರಾಮಸ್ಥರು ಸಭೆ ಸೇರಿ ಚುನಾವಣೆ ಮೂಲಕ ಆಯ್ಕೆ ಮಾಡುವುದುಬೇಡ, ಚುನಾವಣೆಯಾದರೆ ಅನಗತ್ಯವಾಗಿ ಗ್ರಾಮದಲ್ಲಿ ಅಶಾಂತಿಗೆ ಕಾರಣವಾಗುತ್ತದೆ ಎಂಬ ಉದ್ದೇಶದಿಂದ ದೇವಸ್ಥಾನ ಅಭಿವೃದ್ಧಿಗೆ ಇಂತಿಷ್ಟುಹಣ ನೀಡುವಂತೆ ಆಕಾಂಕ್ಷಿಗಳ ಮನವೊಲಿಸಿ ಒಟ್ಟು ನಾಲ್ಕು ಜನ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.

ಸಾಮಾನ್ಯ ವರ್ಗದ ಪುರುಷ ಸ್ಥಾನಕ್ಕೆ ಭೀಮಣ್ಣ, ಪರಿಶಿಷ್ಟ ಪಂಗಡ ಸ್ಥಾನಕ್ಕೆ ಬೊಮ್ಮಜ್ಜ, ಸಾಮಾನ್ಯ ಮಹಿಳೆ ಎರಡು ಸ್ಥಾನಗಳಿಗೆ ಲಕ್ಷ್ಮಿದೇವಿ ತಿಪ್ಪೇಸ್ವಾಮಿ, ಶಾಂತಮ್ಮ ಭೀಮಣ್ಣ ಅವರನ್ನು ಆಯ್ಕೆಮಾಡಲಾಗಿದೆ. ಪ್ರತಿಯೊಬ್ಬರೂ ದೇವಸ್ಥಾನದ ಅಭಿವೃದ್ಧಿಗೆ 3.50 ಲಕ್ಷ ರೂ. ನೀಡಬೇಕೆಂದುಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ. ಆಯ್ಕೆಯಾದ ನಾಲ್ವರು 50 ಸಾವಿರ ರೂ.ಗಳನ್ನು ಮುಂಗಡವಾಗಿ ನೀಡಿದ್ದಾರೆ.

ವರದಿ ನೀಡಲು ಸೂಚನೆ: ಯಾದಲಗಟ್ಟೆ ಗ್ರಾಮದ ನಾಲ್ಕು ಸ್ಥಾನಗಳಿಗೆ ನಿಯಮಬಾಹಿರವಾಗಿಗ್ರಾಮಸ್ಥರು ನಾಲ್ಕು ಜನ ಸದಸ್ಯರನ್ನು ಆಯ್ಕೆಮಾಡಿದ ಬಗ್ಗೆ ಮಾಹಿತಿ ಪಡೆದ ತಹಶೀಲ್ದಾರ್‌ ಎಂ. ಮಲ್ಲಿಕಾರ್ಜುನ್‌, ಗ್ರಾಮಕ್ಕೆ ತೆರಳಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ತಳಕು ವಿಭಾಗದ ಕಂದಾಯಾಧಿಕಾರಿ ರಫಿ ಅವರಿಗೆ ಸೂಚಿಸಿದ್ದಾರೆ. ತಹಶೀಲ್ದಾರ್‌ ಸೂಚನೆ ಮೇರೆಗೆ ಯಾದಲಗಟ್ಟೆ ಗ್ರಾಮಕ್ಕೆ ಕಂದಾಯಾಧಿಕಾರಿ ರಫಿ ಮತ್ತು ಗ್ರಾಮ ಲೆಕ್ಕಿಗ ಜಯಣ್ಣ ಭೇಟಿ ನೀಡಿದ್ದರು. ನಿಯಮ ಮೀರಿ ಗ್ರಾಪಂ ಸದಸ್ಯರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಕಾನೂನು ಬಾಹಿರ. ಹಾಗಾಗಿ ನಿಮ್ಮೆಲ್ಲರ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next