ನವದೆಹಲಿ: ಪತ್ನಿ ಕಿರುಕುಳ ನೀಡಿದಳು ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಅತುಲ್ ಸುಭಾಷ್ ಬರೆದಿದ್ದ ಡೆತ್‌ನೋಟ್‌ನಲ್ಲಿರುವುದು ಸುಳ್ಳು ಎಂದು ಅತುಲ್ ಪತ್ನಿಯ ಚಿಕ್ಕಪ್ಪ ಸುಶೀಲ್ ಹೇಳಿದ್ದಾರೆ.
ಮೊದಲ ಬಾರಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ಈ ಪ್ರಕರಣದಲ್ಲಿ ನನ್ನನ್ನು ಆರೋಪಿಯಾಗಿಸಲಾಗಿದೆ. ಆದರೆ ಈ ಪ್ರಕರಣದಲ್ಲಿ ನನ್ನ ಪಾತ್ರವೇನೂ ಇಲ್ಲ. ಈ ಆತ್ಮಹತ್ಯೆಗೆ ಸಂಬಂಧಿಸಿದಂತೆ ಎಲ್ಲಾ ವಿವರಗಳು ನಿಖೀತಾಗಳಿಗೆ ಗೊತ್ತಿದೆ. 3 ವರ್ಷಗಳಿಂದ ನಡೆಯುತ್ತಿದ್ದ ವಿಚ್ಛೇದನ ಪ್ರಕರಣದಲ್ಲಿ ಈ ರೀತಿಯಾಗಿದೆ. ಸುಭಾಷ್ ಮಾಡಿರುವ ಎಲ್ಲಾ ಆರೋಪಗಳು ಸುಳ್ಳು. ನಿಖಿತಾ ಊರಿಗೆ ಮರಳಿದ ಬಳಿಕ ಆಕೆ ಎಲ್ಲಕ್ಕೂ ಉತ್ತರಿಸಲಿದ್ದಾಳೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Atul Subhash Case: ಟೆಕಿ ಅತುಲ್ ಸುಭಾಷ್ ವಿಡಿಯೋ ವೈರಲ್
ಅತುಲ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಅವರ ಸೋದರ ಬೆಂಗಳೂರಿನಲ್ಲಿ ಪ್ರಕರಣ ದಾಖಲಿಸಿದ್ದು, ನಿಖಿತಾ ಸೇರಿದಂತೆ ಅವರ ಕುಟುಂಬದ ಹಲವರನ್ನು ಈ ಪ್ರಕಣದಲ್ಲಿ ಆರೋಪಿಗಳನ್ನಾಗಿಸಲಾಗಿದೆ.
ನಮಗೆ ಮಾಹಿತಿ ಸಿಕ್ಕಿಲ್ಲ: ಅತುಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ನಮ್ಮನ್ನು ಸಂಪರ್ಕಿಸಿಲ್ಲ ಎಂದು ಉತ್ತರ ಪ್ರದೇಶದ ಜಾನುಪುರದ ಪೊಲೀಸರು ಹೇಳಿದ್ದಾರೆ. ಆದರೆ ಬೆಂಗಳೂರು ಪೊಲೀಸರ ತಂಡ ಈಗಾಗಲೇ ಉತ್ತರ ಪ್ರದೇಶಕ್ಕೆ ಪ್ರಯಾಣಿಸಿದೆ ಎನ್ನಲಾಗಿದೆ.