Advertisement

ಅತ್ತೂರು ಸಂತ ಲಾರೆನ್ಸ್‌  ಬಸಿಲಿಕಾ: ವಾರ್ಷಿಕ ಮಹೋತ್ಸವಕ್ಕೆ ಚಾಲನೆ

11:23 AM Jan 22, 2018 | Team Udayavani |

ಕಾರ್ಕಳ: ಅತ್ತೂರು ಸಂತ ಲಾರೆನ್ಸ್‌ ಬಸಿಲಿಕಾದ ವಾರ್ಷಿಕ ಮಹೋತ್ಸವಕ್ಕೆ ರವಿವಾರ ಸಂಭ್ರಮದ ಚಾಲನೆ ದೊರೆಯಿತು. ಐದು ದಿನಗಳ ಕಾಲ ನಡೆಯಲಿರುವ ಜಾತ್ರೆಯ ಪ್ರಾರಂಭೋತ್ಸವದಲ್ಲಿ ರವಿವಾರ ಬೆಳಗ್ಗೆ ಬಸಿಲಿಕಾ ಘೋಷಣೆಯಾದ ಹಿನ್ನೆಲೆ ಯಲ್ಲಿ ನಿರ್ಮಿಸಿದ ಮಾನಸ್ತಂಭವನ್ನು ಉದ್ಘಾಟಿಸಲಾಯಿತು. ಅನಂತರ ದಿವ್ಯ ಬಲಿಪೂಜೆ ಯೊಂದಿಗೆ ಭಾತೃತ್ವದ ರವಿವಾರ ಆಚರಿಸ ಲಾಯಿತು. ಅಪರಾಹ್ನ ಮಕ್ಕಳಿಗಾಗಿ ದಿವ್ಯ ಬಲಿಪೂಜೆ ಹಾಗೂ ವಿಶೇಷ ಪ್ರಾರ್ಥನೆ ನಡೆಯಿತು. ಬಳಿಕ ಚರ್ಚ್‌ನಿಂದ ಪರಮ
ಪ್ರಸಾದದ ಮೆರವಣಿಗೆ ಅತ್ತೂರು ಯುವಕ ಮಂಡಲದ ಮೈದಾನದ ವರೆಗೆ ತೆರಳಿ ಪ್ರಾರ್ಥನೆ ಸಲ್ಲಿಸಲಾಯಿತು.

Advertisement

ಸಂತ ಲಾರೆನ್ಸ್‌ ಬಸಿಲಿಕಾದ ನಿರ್ದೇಶಕ, ಧರ್ಮಗುರು ಫಾ| ಜಾರ್ಜ್‌ ಡಿ’ಸೋಜಾ ಧ್ವಜಾರೋಹಣದ ಮೂಲಕ ವಾರ್ಷಿಕ ಮಹೋತ್ಸವಕ್ಕೆ ಚಾಲನೆ ನೀಡಿದರು. ಸಹಾಯಕ ಧರ್ಮಗುರು ಜೆನ್ಸಿಲ್‌ ಆಳ್ವ ಪೂಜೆ ನೆರವೇರಿಸಿದರು. ವಲೇರಿಯನ್‌ ಪಾಯಸ್‌, ಫಾ| ವೀರೇಶ್‌ ಮೊರಾಸ್‌ ಮೊದಲಾದವರು ಉಪಸ್ಥಿತರಿದ್ದರು. ಬಸಿಲಿಕಾದ ವಠಾರದಲ್ಲಿರುವ ಅಧಿಕೃತ ಸ್ಟಾಲ್‌ನಲ್ಲಿ ಮೊಂಬತ್ತಿ ಮಾರಾಟ ಮಾಡಲಾಗುತ್ತಿದೆ. 

ಪೂರ್ಣ ಪ್ರಮಾಣದ ಭದ್ರತಾ ವ್ಯವಸ್ಥೆ 
ಯಾತ್ರಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ರವಿವಾರ ಬೆಳಗ್ಗಿನಿಂದಲೇ ನೂರಾರು ಪೊಲೀಸರು ಸ್ಥಳ ದಲ್ಲಿ ಬೀಡು ಬಿಟ್ಟಿ ದ್ದಾರೆ. ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿ ಕಾರಿ ಲಕ್ಷ್ಮಣ್‌ ನಿಂಬರ್ಗಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಳೆಯ ಮತ್ತು ಹೊಸ ಇಗರ್ಜಿಗಳ ಒಳಗಡೆ, ಬಸಿಲಿಕಾದ ವಠಾರದಲ್ಲಿ ಈಗಾಗಲೇ 64 ಸಿ.ಸಿ. ಕೆಮರಾಗಳನ್ನು ಅಳವಡಿಸಲಾಗಿದೆ. ಇತರೆಡೆಯೂ 32 ಸಿ.ಸಿ. ಕೆಮರಾ ಹಾಕಲಾಗಿದೆ. ಹರಕೆಯ ವಸ್ತು ಹಾಕುವಲ್ಲಿ ಮತ್ತು ಮೋಂಬತ್ತಿ ಉರಿಸುವಲ್ಲಿ ಭಕ್ತರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಕುಡಿಯಲು ಶುದ್ಧ ನೀರಿನ ವ್ಯವಸ್ಥೆ ಮಾಡ ಲಾಗಿದೆ. ಕಳೆದ ಬಾರಿಯ ವಾರ್ಷಿಕ ಮಹೋತ್ಸವಕ್ಕಿಂತ ಈ ಬಾರಿ ಮೊದಲ ದಿನವೇ ಭಕ್ತರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ವಾರ್ಷಿಕ ಮಹೋತ್ಸವಕ್ಕೆ ಆಗಮಿಸು ವವರಿಗೆ ಯಾವುದೇ ರೀತಿಯ ತೊಂದರೆಯಾಗಂತೆ ಎಲ್ಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ.

ಪ್ರಮುಖರ ಭೇಟಿ
ಅತ್ತೂರು ಸಂತ ಬಸಿಲಿಕಾದ ವಾರ್ಷಿಕ ಮಹೋತ್ಸವಕ್ಕೆ ಪ್ರತೀ ವರ್ಷ ವಿವಿಧ ಭಾಗದಿಂದ ಗಣ್ಯರು ಆಗಮಿಸುತ್ತಾರೆ. ಈ ಬಾರಿಯೂ ಮೊದಲ ದಿನವೇ ರಾಜ್ಯಸಭಾ ಸದಸ್ಯ ಆಸ್ಕರ್‌ ಫೆರ್ನಾಂಡಿಸ್‌, ಮಾಜಿ ಶಾಸಕ ಗೋಪಾಲ ಭಂಡಾರಿ, ಎಂ.ಎ. ಗಫ‌ೂರ್‌ ಭೇಟಿ ನೀಡಿದ್ದಾರೆ.

ಇಂದಿನ ಕಾರ್ಯಕ್ರಮಗಳು
ಜ. 22ರಂದು ಬೆಳಗ್ಗೆ 10 ಗಂಟೆಗೆ ಹಾಗೂ ಮಧ್ಯಾಹ್ನ 3.30ಕ್ಕೆ ವ್ಯಾಧಿಷ್ಠರಿಗಾಗಿ ದಿವ್ಯ ಬಲಿಪೂಜೆ ಮತ್ತು ವಿಶೇಷ ಪ್ರಾರ್ಥನೆ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next