Advertisement

ಅತ್ತೂರು ಬಸಿಲಿಕಾ: ಇಂದಿನಿಂದ ಜಾತ್ರೆ

02:45 AM Jan 18, 2021 | Team Udayavani |

ಕಾರ್ಕಳ: ಅತ್ತೂರು ಸಂತ ಲಾರೆನ್ಸರ ಬಸಿಲಿಕಾದ ಪ್ರಸಿದ್ಧ ಸಾಂತ್‌ಮಾರಿ ಜಾತ್ರೆಯು ಜ. 18ರಿಂದ 28ರ ತನಕ ಸರಕಾರದ ಕೋವಿಡ್‌ ಮಾರ್ಗಸೂಚಿಯನ್ವಯ ಸರಳವಾಗಿ ನಡೆಯಲಿದೆ.

Advertisement

ಪ್ರತೀ ವರ್ಷ 5 ದಿನಗಳಲ್ಲಿ 50 ಬಲಿ ಪೂಜೆಗಳು ನಡೆಯುತ್ತಿದ್ದವು. ಲಕ್ಷಾಂತರ ಮಂದಿ ಸೇರುತ್ತಿದ್ದರು. ಆದರೆ ಈಬಾರಿ ಜನಸಂದಣಿ ತಪ್ಪಿಸುವ ನಿಟ್ಟಿನಲ್ಲಿ 11 ದಿನಗಳಲ್ಲಿ 55 ಬಲಿ ಪೂಜೆ ನಡೆಸಲು ನಿರ್ಧರಿಸಲಾಗಿದೆ.

ಜ. 17ರಂದು ಬೆಳಗ್ಗೆ ಸಂತ ಲಾರೆನ್ಸರ ನವೇನಾ ಪ್ರಾರ್ಥನೆ ನಡೆಯಿತು. ಶಾಸಕ ವಿ. ಸುನಿಲ್‌ ಕುಮಾರ್‌ಉದ್ಘಾಟಿಸಿದರು. ಧಮಗುರು ವಂ| ಜಾಜ್‌ ಡಿ’ಸೋಜಾ ಪ್ರಾರ್ಥನೆ ನೆರವೇರಿಸಿದರು. ಜಿ.ಪಂ. ಸದಸ್ಯ ರೇಷ್ಮಾ ಶೆಟ್ಟಿ, ತಾ.ಪಂ. ಸದಸ್ಯ ಹರಿಶ್ಚಂದ್ರ ಮುಖ್ಯ ಅತಿಥಿಗಳಾಗಿದ್ದರು.

ಉಪಾಧ್ಯಕ್ಷ ಸಂತೋಷ್‌ ಡಿ’ಸಿಲ್ವ ಸ್ವಾಗತಿಸಿ, ಕಾರ್ಯದರ್ಶಿ ಬೆನೆಡಿಕ್ಟಾ ನೊರೊನ್ಹಾ ವಂದಿಸಿದರು.ಜ. 18ರಿಂದ 24ರ ತನಕ ಕೊಂಕಣಿ ಯಲ್ಲಿ ಬಲಿಪೂಜೆಗಳು ನಡೆಯಲಿವೆ. ಜ. 25ರಿಂದ 28ರ ತನಕ ಕೊಂಕಣಿ, ಕನ್ನಡ ಉಭಯ ಭಾಷೆಗಳಲ್ಲಿ ಬಲಿಪೂಜೆಗಳು ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next