ತುಮಕೂರು: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಮೈತ್ರಿ ಸರ್ಕಾರ ತುಮಕೂರು ಜಿಲ್ಲೆಗೆ ಮತ್ತೆ ಮಲ ತಾಯಿ ಧೋರಣೆ ಅನುಸರಿಸಲು ಮುಂದಾಗಿದೆ. ಬೇರೆ ಬೇರೆ ಜಲಾಶಯಗಳ ಸ್ವಚ್ಛತಾ ಕಾರ್ಯಕ್ಕೆ ಹಣ ಬಿಡುಗಡೆ ಮಾಡಿದೆ. ತುಮಕೂರು ಹೇಮಾವತಿ ನಾಲಾ ಸ್ವಚ್ಛತೆಗೆ ಹಣ ಬಿಡುಗಡೆ ಮಾಡದೇ ಮಲ ತಾಯಿ ಧೋರಣೆ ಮಾಡುತ್ತಿದ್ದು, ಜೂನ್ 10ರೊಳಗೆ ಹಣ ಬಿಡುಗಡೆ ಮಾಡಿ, ನಾಲೆ ಸ್ವಚ್ಛಗೊಳಿಸಲು ಮುಂದಾಗದಿದ್ದರೆ. ನಾಲೆಯೊಳಗೆ ಕುಳಿತು ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಚಿವ ಮತ್ತು ಬಿಜೆಪಿ ಹಿರಿಯ ಮುಖಂಡ ಸೊಗಡು ಎಸ್.ಶಿವಣ್ಣ ಎಚ್ಚರಿಸಿದರು.
ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಬರಗಾಲ ಪರಿಸ್ಥಿತಿ ಮುಂದುವರಿದಿದೆ. ತುಮಕೂರಿಗೆ ಹೇಮಾವತಿ ನಾಲೆಯಿಂದ ಬರಬೇಕಾಗಿ ರುವಷ್ಟು ನೀರು ಬಂದಿಲ್ಲ, ಲೆಕ್ಕಕ್ಕೆ ಮಾತ್ರ ನೀರು ಹರಿ ಸಲಾಗಿದೆ. ಜಿಲ್ಲೆಗೆ ನೀರು ಹರಿದಿದ್ದರೆ ಏಕೆ ಕೆರೆ ಕಟ್ಟೆಗಳು ತುಂಬಲಿಲ್ಲ ಎಂದು ಪ್ರಶ್ನಿಸಿದ ಅವರು, ನೀರು ಹರಿ ಯಲು ಹೇಮಾವತಿ ನಾಲೆಯಲ್ಲಿ ಇರುವ ಹೂಳು, ಗಿಡ ಗೆಂಟೆಗಳು ಮರಗಳು ತಡೆಯುತ್ತವೆ ಎಂದು ಹೇಳುತ್ತಾರೆ. ಆದರೆ, ಸ್ವಚ್ಛತೆಗೆ ಹಣ ಬಿಡುಗಡೆ ಮಾಡಲು ಸರ್ಕಾರ ಮುಂದಾಗಿಲ್ಲ ಎಂದು ಕಿಡಿಕಾಡಿದರು.
ಯಾವುದೇ ಹಣ ಬಿಡುಗಡೆ ಮಾಡಿಲ್ಲ: ಬೇರೆ ಬೇರೆ ನಾಲೆಗಳ ಸ್ವಚ್ಛತೆಗೆ ಕ್ಯಾಬಿನೆಟ್‌ನಲ್ಲಿ ಸರ್ಕಾರ 500 ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ಆದರೆ, ತುಮಕೂರು ಹೇಮಾವತಿ ನಾಲೆ ಸ್ವಚ್ಛತೆಗೆ ಹಣ ಬಿಡುಗಡೆ ಮಾಡಬೇಕೆಂದು ಒತ್ತಡದ ಮೇಲೆ ಒತ್ತಡ ಹಾಕಿದರು. ಯಾವುದೇ ಹಣ ಬಿಡುಗಡೆ ಮಾಡಿಲ್ಲ, ಇದನ್ನು ನೋಡಿದರೆ ತುಮಕೂರು ಜಿಲ್ಲೆಗೆ ಮತ್ತೆ ಮುಖ್ಯಮಂತ್ರಿ ಕುಮಾರಸ್ವಾಮಿ ತಾರತಮ್ಯ ನೀತಿ ಅನುಸರಿಸುತ್ತಿರುವುದು ಬಹಿರಂಗ ಗೊಂಡಿದೆ ಎಂದರು.
ವಾಸ್ತವಿಕ ಪರಿಸ್ಥಿತಿಯೇ ಬೇರೆ ಇದೆ: ಹಾಸನ ಜಿಲ್ಲೆಯ ನಾಲೆಗಳಿಗೆ ಮತ್ತು ಕೆಆರ್‌ಎಸ್‌ಗೆ ಹಣ ಬಿಡುಗಡೆ ಮಾಡಿರುವಂತೆ ತುಮಕೂರು ನಾಲೆ ಸ್ವಚ್ಛತೆ ಕಾರ್ಯ ಮಾಡಲು ಕನಿಷ್ಠ 20 ಕೋಟಿ ರೂ. ಹಣ ಬಿಡುಗಡೆ ಮಾಡಿ, ಜೂನ್ 10ರೊಳಗೆ ನಾಲೆಯ ಶುದ್ಧೀಕರಣ ಕಾರ್ಯವನ್ನು ಆರಂಭಿಸದಿದ್ದರೆ ಹೇಮಾವತಿ ನಾಲೆ ಯೊಳಗೆ ಕುಳಿತು ಪ್ರತಿಭಟನೆ ನಡೆಸಲು ತೀರ್ಮಾ ನಿಸಲಾಗುವುದು. ಕಳೆದ ವರ್ಷ ಜಿಲ್ಲೆಗೆ ನೀರು ಬಿಟ್ಟಿರು ವುದಾಗಿ ಅಧಿಕಾರಿಗಳು ಅಂಕಿಅಂಶ ನೀಡುತ್ತಾರೆ. ಆದರೆ, ಅದರ ವಾಸ್ತವಿಕ ಪರಿಸ್ಥಿತಿಯೇ ಬೇರೆ ಇದೆ. ಸಿರಾ, ಕಳ್ಳಂಬೆಳ್ಳ, ಮಧುಗಿರಿ, ಕೊರಟಗೆರೆ, ತುಮಕೂರು ಕುಡಿಯುವ ನೀರಿನ ಯೋಜನೆಗೆ ನೀರು ಬಂದಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ಮುಂದಾಗಿ ನಮ್ಮಗೆ ಬರಬೇಕಾಗದ ನೀರನ್ನು ನ್ಯಾಯ ಸಮತಾಗಿ ಬಿಡಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಜನ ಬುದ್ಧಕಲಿಸಿರುವುದನ್ನು ಹರಿತುಕೊಳ್ಳಿ: ಕೆಲವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸೋತಿ ರುವ ಹಿನ್ನೆಲೆಯಲ್ಲಿ ಹೇಮಾವತಿ ನೀರಿಗೆ ಅವರ ಕುಟುಂಬ ತೊಂದರೆ ನೀಡುಬಹುದು ಎಂದು ನೀಡು ತ್ತಿರುವ ಹೇಳಿಕೆಗೆ ನೀರು ಯಾರಪ್ಪನ ಆಸ್ತಿಯಲ್ಲ, ಅದು ಸಾರ್ವಜನಿಕರ ಸ್ವತ್ತು. ಈಗಾಗಲೇ ನೀರಿನ ವಿಷಯವಾಗಿ ಮಾಡಿರುವ ಅನ್ಯಾಯಕ್ಕೆ ಜನ ಬುದ್ಧಿ ಕಲಿಸಿದ್ದಾರೆ. ಅದನ್ನು ಹರಿತುಕೊಳ್ಳಬೇಕು ಎಂದು ಹೇಳಿದರು.
ಒಗ್ಗಟ್ಟಾಗಿ ಕೆಲಸ ಮಾಡಿದ್ದೇವೆ: ಕೇಂದ್ರದಲ್ಲಿ ನರೇಂದ್ರ ಮೋದಿಯವರ ಜನಪ್ರಿಯತೆಯನ್ನು ಮೆಚ್ಚಿ ಜನ ಮತ ನೀಡಿದ್ದಾರೆ. ನಮ್ಮ ಪಕ್ಷದ ಸಣ್ಣ ಕಾರ್ಯ ಕರ್ತರಿಂದ ಹಿಡಿದು ದೊಡ್ಡ ಕಾರ್ಯಕರ್ತರವರೆಗೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದ ಪರಿಣಾಮ ಜಿಲ್ಲೆಯಲ್ಲಿಯೂ ಬಿಜೆಪಿ ಗೆಲ್ಲಲ್ಲು ಸಹಕಾರಿಯಾಗಿದೆ. ಕಳೆದ ವರ್ಷ ಬಿದ್ದ ಮಳೆಯಿಂದ 30-40ಟಿಎಂಸಿ ನೀರು ಸಮುದ್ರ ಪಾಲಾಯಿತು, ಈಗ ಕುಡಿಯಲು ನೀರಿಲ್ಲ, ಮಳೆ ಬಂದ ತಕ್ಷಣ ನಮ್ಮಗೆ ನೀರು ಹರಿಸ ಬೇಕು, ನಮ್ಮಗೆ ನೀರು ಹರಿಸುವ ಮೊದಲು ನಾಲೆ ಯನ್ನು ಸ್ವಚ್ಛ ಮಾಡಬೇಕು ಎಂದು ನುಡಿದರು. ಪ್ರತಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎಂ.ಬಿ.ನಂದೀಶ್, ಜಯಸಿಂಹರಾವ್, ಕೆ.ಪಿ. ಮಹೇಶ್, ಬನಶಂಕರಿ ಬಾಬು, ನಂಜುಡಪ್ಪ, ಬಸವ ರಾಜ್, ಮಂದನ್ ಸಿಂಗ್, ಚಂದ್ರಣ್ಣ ಇತರರಿದ್ದರು.