Advertisement

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

07:48 PM Sep 20, 2024 | Team Udayavani |

ಕೊಟ್ಟಿಗೆಹಾರ: ಇಲ್ಲಿನ ಅತ್ತಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದ ಒಳಗೆ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿ ಜನರು ಭಯಭೀತರಾದರು. ಶುಕ್ರವಾರ ಸಂಜೆ ಶಾಲೆ ಬಿಟ್ಟ ನಂತರ ಕಾಳಿಂಗ ಸರ್ಪ ಶಾಲೆಯ ಶೌಚಾಲಯ ಬಳಿ ಅಡಗಿದ್ದನ್ನು ಸಾರ್ವಜನಿಕರು ನೋಡಿ ಉರಗ ಪ್ರೇಮಿ ಬಣಕಲ್ ಮೊಹಮ್ಮದ್ ಆರೀಫ್ ಅವರಿಗೆ ಸುದ್ದಿ ಮುಟ್ಟಿಸಿದ್ದಾರೆ.

Advertisement

ಕೂಡಲೇ ಬಂದ ಸ್ನೇಕ್ ಆರೀಫ್ ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿದ ಬಳಿಕ 15 ಅಡಿ ಉದ್ದ ಕಾಳಿಂಗ ಸರ್ಪ ಸೆರೆ ಹಿಡಿದರು.

ಶಾಲೆಯ ಮಕ್ಕಳಿದ್ದ ಸಮಯದಲ್ಲಿ ಕಾಳಿಂಗ ಸರ್ಪ ಯಾರಿಗೂ ಕಾಣಿಸದ ಕಾರಣ ದೊಡ್ಡ ಅಪಾಯ ಸಂಭವಿಸುವುದು ತಪ್ಪಿದಂತಾಗಿದೆ. ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿ ಚಾರ್ಮಾಡಿ ಅರಣ್ಯಕ್ಕೆ ಬಿಡಲಾಯಿತು.

ಕಾರ್ಯಾಚರಣೆ ವೇಳೆ ನೂರಾರು ಮಂದಿ ಜಮಾಯಿಸಿ ಕಾಳಿಂಗ ಸರ್ಪವನ್ನು ವೀಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next