Advertisement

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

01:12 AM Apr 30, 2024 | Team Udayavani |

ಮಂಗಳೂರು: ಶೋರ್ನೂರು ಜಂಕ್ಷನ್‌ ಹಾಗೂ ವಲ್ಲತೋಲ್‌ ನಗರ ಸ್ಟೇಷನ್‌ ಮಧ್ಯೆ ಬ್ರಿಜ್‌ ನಂ. 2ರಲ್ಲಿನ ರಿಗರ್ಡರಿಂಗ್‌ ಕೆಲಸಕ್ಕಾಗಿ ಕೆಲವೊಂದು ರೈಲು ಸೇವೆಗಳು ವ್ಯತ್ಯಯವಾಗಲಿವೆ.

Advertisement

ನಂ. 12618 ಹಜರತ್‌ ನಿಜಾಮುದ್ದೀನ್‌ ಎರ್ನಾಕುಳಂ ಜಂಕ್ಷನ್‌ ಮಂಗಳಾ ಲಕ್ಷದ್ವೀಪ್‌ ರೈಲು ಎ. 29, ಮೇ 1ರಂದು ನಿಜಾಮುದ್ದೀನ್‌ ಜಂಕ್ಷನ್‌ನಿಂದ ಹೊರಟು ದಾರಿಯಲ್ಲಿ 3.30 ಗಂಟೆ ಕಾಲ ನಿಯಂತ್ರಿಸಲ್ಪಡಲಿದೆ.

ನಂ. 22660 ಯೋಗ ನಗರಿ ಹೃಷಿಕೇಶ ಕೊಚ್ಚುವೇಲಿ ರೈಲು ಎ. 29ರಂದು ಹೃಷಿಕೇಶದಿಂದ ಹೊರಟು 3.55 ಗಂಟೆ ಕಾಲ ನಿಯಂತ್ರಿಸಲ್ಪಡುವುದು. ನಂ. 22655 ಎರ್ನಾಕುಳಂ ಹಜರತ್‌ ನಿಜಾ ಮುದ್ದೀನ್‌ ಜಂಕ್ಷನ್‌ ರೈಲನ್ನು ಮೇ 1ರಂದು ತಿರುವನಂತಪುರದಿಂದ ಹೊರಡಲಿದ್ದು 1.10 ಗಂಟೆ ಕಾಲ ತಡೆಹಿಡಿಯಲಾಗುವುದು.

ಮೇ 1ರಂದು ಚಂಡೀಗಢದಿಂದ ಹೊರಡಲಿರುವ ನಂ. 12218 ಚಂಡೀಗಢ ಕೊಚ್ಚುವೇಲಿ ರೈಲನ್ನು 3.35 ಗಂಟೆ ಕಾಲ, ಮೇ 3ರಂದು ಹೊರಡುವ ನಂ. 22149 ಎರ್ನಾಕುಳಂ ಜಂಕ್ಷನ್‌-ಪೂನಾ ಜಂಕ್ಷನ್‌ ರೈಲನ್ನು 1.10 ಗಂಟೆ ಕಾಲ ನಿಯಂತ್ರಿಸಲಾಗುವುದು.

ನಂ. 12618 ಹಜರತ್‌ ಎರ್ನಾಕುಳಂ ರೈಲು ಮೇ 2, 3ರಂದು ಹಜರತ್‌ ಜಂಕ್ಷನ್‌ನಿಂದ ಹೊರಟು ದಾರಿಯಲ್ಲಿ 1.40 ಗಂಟೆ ಕಾಲನಿಯಂತ್ರಿಸಲ್ಪಡುವುದು. ನ. 12218 ಚಂಡೀಗಢ -ಕೊಚ್ಚುವೇಲಿ ರೈಲು ಮೇ 3ರಂದು ಚಂಡೀಗಢದಿಂದ ಹೊರಟು ದಾರಿಯಲ್ಲಿ 1.20 ಗಂಟೆ ಕಾಲ ನಿಯಂತ್ರಣಕ್ಕೊಳಗಾಗುವುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next