Advertisement
ನಗರದ ತಾಲೂಕು ಕಚೇರಿ ಆವರಣದಲ್ಲಿ ತಹಶೀಲ್ದಾರ್ ವರ್ಷಾ ಅವರ ಅಧ್ಯಕ್ಷತೆಯಲ್ಲಿ ನಡೆದ ಎಸ್ಸಿ,ಎಸ್ಟಿ ಗಳ ಕುಂದುಕೊರತೆ ಸಭೆಯಲ್ಲಿ ಪರಿಶಿಷ್ಟಜಾತಿ ಪಂಗಡದ ಮುಖಂಡರು ವಿವಿಧ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಗತ್ಯದಾಖಲೆಗಳಿಲ್ಲದೆ ಸಭೆಗೆ ಹಾಜರಾದ ಅಧಿಕಾರಿಗಳಿಗೆ ಮತ್ತು ಇಲಾಖಾ ಯೋಜನೆಗಳ ಬಗ್ಗೆ ಮಾಹಿತಿ
Related Articles
Advertisement
ದಮ್ಮ ದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ಗಣಿಗಾರಿಕೆ ಕ್ರಷರ್ ಮರಳುಗಾರಿಕೆಉದ್ಯಮಗಳಲ್ಲಿ ನಮ್ಮ ಸಮುದಾಯಕ್ಕೆ ಆದ್ಯತೆ ನೀಡಿಲ್ಲ ಸಣ್ಣಪುಟ್ಟ ಉದ್ಯಮಗಳಿಗೆ ಮಾತ್ರ ಸೀಮಿತಗೊಳಿಸಿದ್ದಾರೆ ಎಂದ ಅವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪೂರೈಸುವ ಗರ್ಭಿಣಿ, ಬಾಣಂತಿಯರ ಆಹಾರ ಸಾಮಗ್ರಿಗಳನ್ನು ದಲಿತ ಸಮುದಾಯದ ಮಹಿಳಾ ಸಂಘಗಳು ಪೂರೈಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಆಧಿಕಾರಿಗಳ ಎತ್ತಂಗಡಿಗೆ ಒತ್ತಾಯ: ಬಳಿಕ ಮೀನುಗಾರಿಕೆ ಇಲಾಖೆ ಮುನಿವೆಂಕಟಪ್ಪ ಇಲಾಖೆಯ ಮಾಹಿತಿ ನೀಡಿ 50 ಲಕ್ಷ ರೂ. ಕಾಮಗಾರಿ ಕೈಗೊಳ್ಳದೆ ಸರ್ಕಾರಕ್ಕೆ ವಾಪಸ್ಸಾಗಿದೆ ಎಂದು ಮಾಹಿತಿ ನೀಡುತ್ತಿದ್ದಂತೆ ಗೋಪಿ ಮಲ್ಲಿಕಾರ್ಜುನ್ ನಾಗೇಶ್ ಶಿವಲಿಂಗಯ್ಯ ಸೇರಿದಂತೆ ಅನೇಕ ದಲಿತ ಮುಖಂಡರು ಧ್ವನಿಗೂಡಿಸಿ, ಕೃಷಿ ಇಲಾಖೆ ಮತ್ತು ಮೀನುಗಾರಿಕೆ ಇಲಾಖೆ ಯಾವುದೇ ಸವಲತ್ತು ಜನರಿಗೆ ಸರಿಯಾಗಿ ಸೇರುತ್ತಿಲ್ಲ. ಕೃಷಿ ಇಲಾಖೆ ರಾಧಾಕೃಷ್ಣ ಮತ್ತು ಮೀನುಗಾರಿಕೆ ಇಲಾಖೆ ಮುನಿವೆಂಕಟಪ್ಪ ಇಬ್ಬರು ಅಧಿಕಾರಿಗಳನ್ನು ಕೂಡಲೇ ಎತ್ತಂಗಡಿ ಮಾಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ವರ್ಷ ಒಡೆಯರ್, ಎಲ್ಲರೂ ಸೇರಿ ಮನವಿ ಪತ್ರ ಕೊಡಿ ಮೇಲಧಿಕಾರಿಗಳಿಗೆ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದರು.
ಸ್ಥಳಾವಕಾಶ ಕಲ್ಪಿಸಿ: ಗುರುಮೂರ್ತಿ ಮಾತನಾಡಿ, 50 ವರ್ಷಗಳಿಂದಲೂ ಜಿಲ್ಲಾಡಳಿತದಿಂದ ಅನುಮತಿ ಪಡೆದು ಚಮ್ಮಾರಿಕೆ ಮಾಡುತ್ತಿದ್ದ ವೃದ್ಧರನ್ನು ನಗರಸಭೆ ಅಧಿಕಾರಿಗಳು ಮತ್ತು ಅಧ್ಯಕ್ಷರು ಏಕಾಏಕಿ ತೆರವುಗೊಳಿಸಿ ಅವರ ಬದುಕನ್ನು ಬೀದಿಗೆ ತಳ್ಳಿದ್ದಾರೆ.ಕೂಡಲೇ ಅವರಿಗೆ ಸ್ಥಳಾವಕಾಶ ಕಲ್ಪಿಸಬೇಕು ಎಂದು ಎಚ್ಚರಿಸಿದರು.
ರಾಂಪುರ ನಾಗೇಶ್ ಮಾತನಾಡಿ. ಸಭೆಯಲ್ಲಿ ನಮಗೆ ಪೂರ್ಣ ಪ್ರಮಾಣದ ಮಾಹಿತಿ ನೀಡಿಲ್ಲ ಹಾಗಾಗಿಸಭೆಯನ್ನು ಮುಂದೂಡಿ ಮುಂದಿನ ಸಭೆಯ ವೇಳೆಗೆ ಇಲಾಖಾವಾರು ಅಗತ್ಯ ದಾಖಲೆಗ ಳೊಂದಿಗೆ ಹಾಜರಿರಬೇಕು ಎಂದು ಮನವಿ ಮಾಡಿದರು. ತಹಶಿಲ್ದಾರ್ ವರ್ಷ ಒಡೆಯರ್ ಮಾತನಾಡಿ,ಇನ್ನು 15 ದಿನಗಳ ಒಳಗಾಗಿ ಎಲ್ಲ ಇಲಾಖೆಯ ಅಧಿಕಾರಿಗಳು ಅಗತ್ಯ ದಾಖಲಾತಿಗಳನ್ನುಕ್ರೋಢೀಕರಿಸಿ ಸಮುದಾಯದ ಮುಖಂಡರಿಗೆತಲುಪಿಸಬೇಕು ನಂತರ ನಡೆಯುವ ಸಭೆಯಲ್ಲಿ ಎಲ್ಲರೂ ಹಾಜರಿರಬೇಕು ಎಂದರು.
ಶಿರಸ್ತೇದಾರ ರಘು, ಇಒ ಮೋಹನ್ ಬಾಬುಸಮಾಜ ಕಲ್ಯಾಣ ಇಲಾಖೆಯ ಸಹಾಯಕನಿರ್ದೇಶಕ ಜಯಪ್ರಕಾಶ್, ಮಹಿಳಾ ಮತ್ತು ಮಕ್ಕಳಕಲ್ಯಾಣ ಇಲಾಖೆಯ ಮಂಜುನಾಥ್, ಮೀನುಗಾರಿಕೆಇಲಾಖೆಯ ಮುನಿವೆಂಕಟಪ್ಪ, ರೇಷ್ಮೆ ಇಲಾಖೆಯಮುತ್ತುರಾಜ್, ಕೃಷಿ ಇಲಾಖೆಯ ರಾಧಾಕೃಷ್ಣ ಹಾಗು ಸರ್ಕಾರಿ ವಿವಿಧ ಇಲಾಖೆಯ ಅಧಿಕಾರಿಗಳು ದಲಿತಸಮುದಾಯದ ರಾಂಪುರ ನಾಗೇಶ್ ಮಲ್ಲಿಕಾರ್ಜುನ್ ಶಿವಲಿಂಗಯ್ಯ ಗುರುಮೂರ್ತಿಚಂದ್ರು ಶಿವ ಇತರರು ಇದ್ದರು.
ಪ್ರಭಾವಿಗಳ ಹೆಸರು ಹೇಳಿದರೆ ಸವಲತ್ತು :
ಸಭೆಯಲ್ಲಿ ಹಾಜರಿದ್ದ ವಿವಿಧ ಇಲಾಖೆಯಅಧಿಕಾರಿಗಳು ಇಲಾಖಾವಾರು ಮಾಹಿತಿ ನೀಡು ವಾಗ ಕೃಷಿ ಇಲಾಖೆ ಮತ್ತು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಇಲಾಖೆಯ ಮಾಹಿತಿ ನೀಡಲು ಮುಂದಾದಾಗ ಶಿವಮುತ್ತು ಮಧ್ಯಪ್ರವೇಶಿಸಿ ನಿಮ್ಮ ಇಲಾಖೆಯಲ್ಲಿ ಸಿಗುವ ಸೌಲತ್ತುಗಳನ್ನು ಪಡೆಯ ಬೇಕಾದರೆ ಜಿಪಂ, ತಾಪಂ ಸದಸ್ಯರಿಂದ ಅನುಮತಿಪತ್ರ ತರಬೇಕು ಎಂದು ಹೇಳುತ್ತೀರಿ, ರಾಜಕಾರಣಿ ಗಳು ಹೆಸರು ಹೇಳಿಕೊಂಡು ಬಂದವರಿಗೆ ಮೀಸಲಾತಿ ಇಲ್ಲದಿದ್ದರೂ ಸವಲತ್ತುಗಳನ್ನು ಕೊಟ್ಟಿದ್ದೀರಿ.ಸರಿಯಾಗಿಮಾಹಿತಿ ನೀಡದೆ ಇಲಾಖೆಯ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.