ಲಕ್ನೋ : ಮುಂದಿನ ಭಾನುವಾರ ಸೆ.17ರಂದು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟಿದ ದಿನ. ಅಂದು ಉತ್ತರ ಪ್ರದೇಶದಾದ್ಯಂತದ ಪ್ರಾಥಮಿಕ ಶಾಲೆಗಳು ತೆರೆದಿರುತ್ತವೆ – ಮೋದಿ ಹುಟ್ಟು ಹಬ್ಬವನ್ನು ಆಚರಿಸಲು !
ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿರುವ ವರದಿಯ ಪ್ರಕಾರ ಸೆ.17ರಂದು ಉತ್ತರ ಪ್ರದೇಶದ ಎಲ್ಲ ಪ್ರಾಥಮಿಕ ಶಾಲೆಗಳ ಮಕ್ಕಳು ಅಂದು ಭಾನುವಾರವಾದರೂ ಶಾಲೆಗೆ ಹಾಜರಾಗಲೇ ಬೇಕು; ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದ ಸಮಾರಂಭದಲ್ಲಿ ಭಾಗವಹಿಸಲೇಬೇಕು; ಇದು ಕಡ್ಡಾಯ !
ಸ್ವತಂತ್ರ ಖಾತೆ ಹೊಂದಿರುವ ಕೇಂದ್ರ ಸಹಾಯಕ ಮೂಲ ಶಿಕ್ಷಣ ಸಚಿವೆ ಅನುಪಮಾ ಜೈಸ್ವಾಲ್ ಅವರು ತಿಳಿಸಿರುವ ಪ್ರಕಾರ ಅಂದು ಉತ್ತರ ಪ್ರದೇಶದ 1.60 ಲಕ್ಷ ಪ್ರಾಥಮಿಕ ಶಾಲೆಗಳು ಮೋದಿ ಹುಟ್ಟುಹಬ್ಬವನ್ನು ಆಚರಿಸುತ್ತವೆ.
ತಮ್ಮ ಪ್ರಾಂತ್ಯದಲ್ಲಿನ ಶಾಲೆಗಳನ್ನು ದತ್ತು ತೆಗೆದುಕೊಂಡಿರುವ ಶಾಸಕರು ಅಂದು ಆ ಶಾಲೆಗಳಿಗೆ ತೆರಳಿ ಸಮಾರಂಭದಲ್ಲಿ ಭಾಗಿಗಳಾಗಿ ಪ್ರಧಾನಿ ಮೋದಿ ಅವರ ನೈರ್ಮಲ್ಯ ಕುರಿತ ಸಂದೇಶವನ್ನು ತಲುಪಿಸುತ್ತಾರೆ. ಅಂತೆಯೇ ತಮ್ಮ ವಲಯದ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಅಂದು ಸಭೆ, ಸಮಾರಂಭ ನಡೆಯುವುದನ್ನು ಅವಲೋಕಿಸಲಿದ್ದಾರೆ.
ವರದಿಗಳ ಪ್ರಕಾರ ಶಾಸಕರು ಅಂದು ರಾಜ್ಯಾದ್ಯಂತದ ಪ್ರಾಥಮಿಕ ಶಾಲೆಗಳಲ್ಲಿನ ಮೂಲ ಸೌಕರ್ಯಗಳು, ಸ್ಥಿತಿಗತಿ ಇತ್ಯಾದಿಗಳ ಅವಲೋಕನ ನಡೆಸಿ ಪ್ರಧಾನಿಯವರ “ನವಭಾರತ’ದ ಮುಂಗಾಣೆRಯನ್ನು ಮಕ್ಕಳಿಗೆ ವಿವರಿಸಲಿದ್ದಾರೆ. ಮಕ್ಕಳಲ್ಲಿ ನೈರ್ಮಲ್ಯ ರಕ್ಷಣೆಯ ಪರಿಕಲ್ಪನೆಯನ್ನು ಜಾಗೃತಗೊಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ವರದಿ ಹೇಳಿದೆ.