ಮಂಡ್ಯ: ಭದ್ರತೆಯಿದ್ದರೂ ಕೆಆರ್‌ಎಸ್ ಬೃಂದಾವನದಲ್ಲಿ ಹಲವು ವರ್ಷಗಳಿಂದ ಬೆಳೆದು ನಿಂತಿದ್ದ ಶ್ರೀಗಂಧದ ಮರವನ್ನು ಕಳ್ಳತನ ಮಾಡಲು ಕಳ್ಳರು ಯತ್ನಿಸಿರುವ ಘಟನೆ ನಡೆದಿದೆ.
ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಕೆಆರ್‌ಎಸ್ ಬೃಂದಾವನ ಸೇರಿದಂತೆ ಸುತ್ತಲೂ ಬಾರಿ ಭದ್ರತೆ ಇದ್ದರೂ ಗಂಧದ ಮರವನ್ನು ಕಳ್ಳತನ ಮಾಡಲು ಮುಂದಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಬೃಂದಾವನಕ್ಕೆ ಪತ್ಯೇಕವಾಗಿ ಪೊಲೀಸರು ಕಾವಲಿದೆ. ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಆದರೂ ಕಳ್ಳರು ಬೃಂದಾವನ ಪ್ರವೇಶಿಸಿ ಗಂಧದ ಮರವನ್ನು ಕಟಾವು ಮಾಡಿ ಅಲ್ಲಿಯೇ ಬಿಟ್ಟು ಹೋಗಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದರೂ ಗಣನೆಗೆ ತೆಗೆದುಕೊಳ್ಳದ ನೀರಾವರಿ ಇಲಾಖೆ ಹಾಗೂ ಪೊಲೀಸರ ಮೇಲೆ ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ. ಕೆಆರ್‌ಎಸ್‌ನಲ್ಲಿ ಒಂದಿಲ್ಲೊಂದು ಪ್ರಕರಣಗಳು ಹೆಚ್ಚಾಗುತ್ತಿದೆ. ಇದು ಭದ್ರತೆಯ ಲೋಪವಾಗುತ್ತಿದೆ. ತನಿಖೆ ನಡೆಸಿ ತಪ್ಪಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸೃಳೀಯರು ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ :ಮಂಡ್ಯ : ನಿರ್ಬಂಧವಿದ್ದರೂ ಕೆಆರ್‌ಎಸ್ ಡ್ಯಾಂ ಮೇಲೆ ವಾಹನ ಚಾಲನೆ ಆರೋಪ ; ಪಿಎಸ್‌ಐ ಅಮಾನತು