Advertisement

ಶಿವಮೊಗ್ಗ ಕೈಗಾರಿಕಾ ಕಾರಿಡಾರ್‌ಗೆ ಸೇರಿಸಲು ಯತ್ನ

05:28 PM Oct 27, 2020 | Suhan S |

ಭದ್ರಾವತಿ: ಬೆಂಗಳೂರು- ಬಾಂಬೆ ಕೈಗಾರಿಕಾ ಕಾರಡಾರ್‌ಗೆ ಧಾರವಾಡ, ತುಮಕೂರು,ಶಿವಮೊಗ್ಗ ಜಿಲ್ಲೆಯನ್ನು ಸೇರಿಸುವ ಪ್ರಯತ್ನನಡೆದಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

Advertisement

ಭಾನುವಾರ ಮದ್ಯಾಹ್ನ ವಿಐಎಸ್‌ಎಲ್‌ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೊಸ ಕೈಗಾರಿಕೆಗಳ ಆರಂಭಕ್ಕೆಅಗತ್ಯ ವಾತಾವರಣ ಸೃಷ್ಟಿಸುವ ಅಗತ್ಯವಿದೆ. ಕೈಗಾರಿಕೋದ್ಯಮಿಗಳು ಇಲ್ಲಿ ಬಂಡವಾಳ ಹೂಡಿ ಕಾರ್ಖಾನೆಗಳನ್ನು ಆರಂಭಿಸಿದರೆ ಕಾರ್ಮಿಕರಿಗೆ ಕೆಲಸ ಸಿಗುವ ಮೂಲಕ ಅವರ ಬದುಕು ಹಸನಾಗುತ್ತದೆಎಂದರು.

ಇಂದು ಹೊಸ ಕಾರ್ಖಾನೆಗಳನ್ನು ತರಬೇಕಾದರೆ ಬಹಳ ಪರಿಶ್ರಮ ಅಗತ್ಯ. ಸರ್‌.ಎಂ.ವಿ. ಅವರದೂರದೃಷ್ಟಿಯ ಫಲವಾಗಿ ಭದ್ರಾವತಿಯಲ್ಲಿ ಸ್ಥಾಪಿತವಾದಎಂಪಿಎಂ ಮತ್ತು ವಿಐಎಸ್‌ಎಲ್‌ ಕಾರ್ಖಾನೆಗಳನ್ನುಉಳಿಸಿಕೊಂಡು ಜಿಲ್ಲೆಯಲ್ಲಿನ ಪಶ್ಚಿಮ ಘಟ್ಟಗಳಿಗೆ ತೊಂದರೆ ಆಗದಂತೆ ಇಲ್ಲಿನ ಪರಿಸರಕ್ಕೆ ಧಕ್ಕೆಯಾಗದಂತಹ ಕೈಗಾರಿಕೆಗಳನ್ನು ಸ್ಥಾಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆ ಕೈಗಾರಿಕಾ ಕಾರಡಾರ್‌ ಗೆ ಸೇರಿದರೆ ಜಿಲ್ಲೆಯ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಆದ್ದರಿಂದ ಜಿಲ್ಲೆಯನ್ನು ಕೈಗಾರಿಕಾ ಕಾರಿಡಾರ್‌ಗೆ ಸೇರಿಸುವ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದು, ಕೇಂದ್ರದ ಕೈಗಾಗರಿಕಾ ಮಂತ್ರಿಗಳೊಂದಿಗೂ ಸಹ ಮಾತುಕತೆ ನಡೆದಿದೆ ಎಂದರು.

ಭದ್ರಾವತಿ ವಿಐಎಸ್‌ಎಲ್‌ ಕಾರ್ಮಿಕ ವಸತಿ ಗೃಹಗಳಲ್ಲಿ ವಾಸವಿರುವ ನಿವೃತ್ತ ಕಾರ್ಮಿಕರು ವಸತಿಗೃಹಗಳನ್ನು ಖಾಲಿ ಮಾಡುವಂತೆ ಆಡಳಿತ ಮಂಡಳಿ ನೋಟಿಸ್‌ ನೀಡುತ್ತಿದೆ ಎಂಬ ವದಂತಿ ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ವಸತಿಗೃಹದಲ್ಲಿರುವವರ ಬಾಡಿಗೆ ಅಥವ ಲೀಸ್‌ ಅವಧಿ ಪೂರ್ಣಗೊಳ್ಳುವಂತಿದ್ದರೆ ಅದರ ನವೀಕರಣಕ್ಕಾಗಿ ನೋಟಿಸ್‌ ನೀಡಲಾಗುತ್ತಿದೆ ಹೊರತು ಖಾಲಿ ಮಾಡಿಸಲು ಅಲ್ಲ. ಈ ಕುರಿತಂತೆ ನಾನು ಕಾರ್ಖಾನೆಯ ಆಡಳಿತ ಮಂಡಳಿಯವರೊಂದಿಗೆ ಮಾತನಾಡಿದ್ದೇನೆ. ಯಾರೂ ತಪ್ಪು ತಿಳುವಳಿಕೆ ಹೊಂದುವುದು ಬೇಡ. ಕುಡಿಯುವ ನೀರಿನ ಸಮಸ್ಯೆಯನ್ನೂ ಸಹ ಅಧಿಕಾರಿಗಳು ಬಗೆಹರಿಸುವಂತೆ ಸೂಚಿಸಿದ್ದೇನೆ ಎಂದರು.

ಎಂಪಿಎಂ ಕೊಳಚೆ ಬಡಾವಣೆ: ಎಂಪಿಎಂ ಪ್ರದೇಶದಲ್ಲಿನ ವಸತಿಗೃಹಗಳಿರುವ ಪ್ರದೇಶದಲ್ಲಿ ಮೂರು ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರವನ್ನೂ ಸಹ ನೀಡಲಾಗಿದ್ದು ಈಗ ಎಂಪಿಎಂ ಕಾರ್ಖಾನೆ ವಸತಿಗೃಹತೆರವಿಗೆ ಮುಂದಾದರೆ ಕೊಳಚೆ ಪ್ರದೇಶದ ನಿವಾಸಿಗಳಿಗೆ ತೊಂದರೆಯಾಗುತ್ತದೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದರು ಈ ಬಗ್ಗೆ ಗಮನ ಹರಿಸಿ ಆ ಕೊಳಚೆ ಪ್ರದೇಶದ ನಿವಾಸಿಗಳಿಗೆ ತೊಂದರೆಯಾಗದ ರೀತಿ ಯಾವ ಕ್ರಮ ಕೈಗೊಳ್ಳಬೇಕೆಂದು ಅಲ್ಲಿನ ಅಧಿಕಾರಿಗಳೊಂದಿಗೆ ಮಾತನಾಡುವ ಭರವಸೆ ನೀಡಿದರು.

Advertisement

ವಿಐಎಸ್‌ಎಲ್‌ ಕಾರ್ಖಾನೆ ಖಾಸಗಿಯವರು ವಹಿಸಿಕೊಂಡರೆ ಈಗ ಕಾರ್ಖಾನೆಯಲ್ಲಿರುವ ಗುತ್ತಿಗೆ ಕಾರ್ಮಿಕರ ಕೆಲಸಕ್ಕೆ ಧಕ್ಕೆಯಾಗದ ರೀತಿ ಅಲ್ಲಿ ಅವರಿಗೆ ಕೆಲಸಕ್ಕೆ ತೆಗೆದುಕೊಳ್ಳುವಂತೆ ವ್ಯವಸ್ಥೆ ಮಾಡಬೇಕೆಂದು ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳು ಸಂಸದರಿಗೆ ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು ವಿಐಎಸ್‌ಎಲ್‌ ಗುತ್ತಿಗೆ ಕಾರ್ಮಿಕರ ಪರಿಸ್ಥಿತಿ ನಮಗೆ ಚೆನ್ನಾಗಿ ಅರಿವಿದೆ. ಇಲ್ಲಿನ ಗುತ್ತಿಗೆ ಕಾರ್ಮಿಕರನ್ನು ಬೇರೆಯವರ ರೀತಿ ನೋಡಲು ಸಾಧ್ಯವಲ್ಲ, ನಿಮ್ಮ ಬೇಡಿಕೆ ಈಡೇರಿಕೆ ಬಗ್ಗೆ ನಾನು ಖಂಡಿತ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಧರ್ಮಪ್ರಸಾದ್‌, ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್‌, ಸೂಡಾ ಸದಸ್ಯ ರಾಮಲಿಂಗಯ್ಯ, ಎಂಐಎಂಎಸ್‌ ಸದಸ್ಯ ರಮೇಶ್‌, ಬಿಜೆಪಿ ತಾಲೂಕು ಅಧ್ಯಕ್ಷ ಪ್ರಭಾಕರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next