ಭಾರತೀನಗರ: ಸಂಸದೆ ಸುಮಲತಾ ಅವರು ಗಣಿಗಾರಿಕೆ ವಿಚಾರ ಬಿಟ್ಟರೆ ಬೇರೆ ಯಾವ ಸಮಸ್ಯೆಯ ಬಗ್ಗೆ ಧ್ವನಿ ಎತ್ತದಿರುವುದು ಏಕೆ ಎಂದು ಸಿಪಿಎಂ ರಾಜ್ಯ ಮುಖಂಡ ಜಿ.ಎನ್.ನಾಗರಾಜ್ ಪ್ರಶ್ನಿಸಿದ್ದಾರೆ.
ಭಾರತೀನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಜರುಗಿದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಘಟಕದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸುಮಲತಾ ಅವರಿಗೆ ಅಕ್ರಮ ಗಣಿಗಾರಿಕೆ ವಿಚಾರ ಬಿಟ್ಟರೆ ಇನ್ಯಾವ ವಿಚಾರವು ಕಣ್ಣಿಗೆ ಕಾಣುತ್ತಿಲ್ಲವೇ? ಇದೊಂದು ವಿಚಾರವಿಟ್ಟು ಕೊಂಡು ರಾಜಕಾರಣ ಮಾಡುತ್ತಿದ್ದಾರಲ್ಲ, ಇದು ಎಷ್ಟರ ಮಟ್ಟಿಗೆ ಸರಿ. ಕೃಷಿ ಕೂಲಿಕಾರರ ಸಮಸ್ಯೆಗಳಿಲ್ಲವೇ, ಸಂಸದರಾದ ಮೇಲೆ ಜಿಲ್ಲೆಗೆ ಇಲ್ಲಿಯವರೆಗೆ ಏನುಕೆಲಸ ಮಾಡಿದ್ದಾರೆ.ಒಂದು ಸಣ್ಣ ಧ್ವನಿಯೂ ಇಲ್ಲವಲ್ಲ ಎಂದು ಪ್ರಶ್ನಿಸಿದರು.
ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಎಂ.ಪುಟ್ಟಮಾದು ಮಾತನಾಡಿ, ಸಂಸದೆ ಸುಮಲತಾ ಅವರು ಮಂಡ್ಯ ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಖಾಸಗೀಕರಣಕ್ಕೆ ಮಾರಲು ನಿಂತಿದ್ದಾರೋ, ಅಥವಾ ಜಿಲ್ಲೆಯ ಜನರನ್ನ ರಕ್ಷಣೆ ಮಾಡಲು ನಿಂತಿದ್ದಾರೋ ಎಂಬುವುದನ್ನು ಮೊದಲು ತಿಳಿಸಬೇಕು ಎಂದರು.
ಇದೇ ವೇಳೆ ಪ್ರಧಾನ ಕಾರ್ಯದರ್ಶಿ ಬಿದರಹಳ್ಳಿ ಹನುಮೇಶ, ಮುಖಂಡರಾದ ಟಿ.ಎಲ್. ಕೃಷ್ಣೇಗೌಡ, ಸಿ.ಕುಮಾರಿ, ಯಶವಂತ್, ಕೆ.ಬಸವರಾಜು, ಹನುಮೇಗೌಡ, ಕರಡಕೆರೆ ವಸಂತಾ ಸೇರಿದಂತೆ ಇತರರಿದ್ದರು.