Advertisement

ನಿಷೇಧಿತ ಡ್ರಗ್ಸ್‌ ಮಾರಾಟ ಯತ್ನ-ಆರೋಪಿ ಸೆರೆ; 72 ಗ್ರಾಂ ಡ್ರಗ್ಸ್‌ ವಶಕ್ಕೆ

11:23 PM Jun 17, 2023 | Team Udayavani |

ಉಳ್ಳಾಲ: ಖಾಸಗಿ ಕಾಲೇಜು ವಸತಿಗೃಹದ ಸಮೀಪ ಡ್ರಗ್ಸ್‌ ಮಾರಾಟ ನಡೆಸಲು ಮನೆಯ ಬಳಿಯಿರುವ ಶೆಡ್‌ನ‌ಲ್ಲಿ ದಾಸ್ತಾನಿರಿಸಿದ್ದ ವ್ಯಕ್ತಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, ಆತನಿಂದ ಒಟ್ಟು ರೂ. 3.60 ಲಕ್ಷ ಮೌಲ್ಯದ 72 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

ಬಗಂಬಿಲ ವೈದ್ಯನಾಥ ನಗರ ನಿವಾಸಿ ಅಕ್ಷತ್‌ ಕುಮಾರ್‌ (32) ನನ್ನು ಬಂಧಿಸಲಾಗಿದೆ. ಕೋಟೆಕಾರು ಗ್ರಾಮದ ಖಾಸಗಿ ಕಾಲೇಜಿನ ಪುರುಷರ ವಸತಿ ಗೃಹದ ಸಮೀಪದ ತನ್ನ ಮನೆಯ ಶೆಡ್‌ನ‌ಲ್ಲಿ ಪ್ಲ್ರಾಸ್ಟಿಕ್‌ ಲಕೋಟೆ ಹಾಗೂ ಡಬ್ಬದಲ್ಲಿ ಎಂಡಿಎಂಎ ದಾಸ್ತಾನಿರಿಸಿರುವುದರ ಮಾಹಿತಿ ಮೇರೆಗೆ ಉಳ್ಳಾಲ ಪೊಲೀಸರು ದಾಳಿ ನಡೆಸಿ ಬಂಧಿಸಿ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಬಂಧಿತರಿಂದ ಖರೀದಿ : ಇತ್ತೀಚೆಗೆ ಸಿಸಿಬಿ ಪೊಲೀಸರ ತಂಡದಿಂದ ಕರ್ನಾಟಕ ಗಡಿಭಾಗ ತೌಡುಗೋಳಿ ಕ್ರಾಸ್‌ ಸಮೀಪ ಬಂಧಿತರಾಗಿದ್ದ ನಾಜಿಮ್‌ ಯಾನೆ ನಿಜ್ಜು ಮತ್ತು ಮಹಮ್ಮದ್‌ ರಿಫಾಸ್‌ನ ಮೂಲಕ ಖರೀದಿ ಮಾಡಿದ್ದ ನಿಷೇಧಿತ ಮಾದಕ ವಸ್ತು ಎಂಡಿಎಂಎ ಅನ್ನು ದಾಸ್ತಾನಿರಿಸಿ ಅದನ್ನು ವಿದ್ಯಾರ್ಥಿಗಳಿಗೆ, ಯುವಕರಿಗೆ ಮಾರಾಟ ಮಾಡಲು ದಾಸ್ತಾನು ಇರಿಸಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.

ಆರೋಪಿ ಕೈಯಿಂದ ಮೊಬೈಲ್‌, ನಗದು ರೂ.20,880, ಡಿಜಿಟಲ್‌ ತೂಕದ ಮಾಪನ ಸೇರಿದಂತೆ 72 ಗ್ರಾಂ ತೂಕದ ಎಂಡಿಎಂಎ ನಿಷೇ ತ ಮಾದಕ ವಸ್ತುವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next