Advertisement

ತಹಶೀಲ್ದಾರ್‌ ರಿಂದಲೇ ಖುದ್ದು ಕೆರೆ ಏರಿಯ ಗುಂಡಿ ಮುಚ್ಚಲು ಪ್ರಯತ್ನ

08:58 PM Oct 15, 2022 | Team Udayavani |

ಗುಡಿಬಂಡೆ: ಪಟ್ಟಣದ ಅಮಾನಿಬೈರಸಾಗರ ಏರಿಯ ಮೇಲೆ ಬಿದ್ದಿರುವ ಭಾರಿ ಗುಂಡಿಗಳನ್ನು ತಹಶೀಲ್ದಾರ್ ಸಿಗ್ಬತುಲ್ಲಾ ಮತ್ತು ರಾಜಸ್ವ ನಿರೀಕ್ಷಕ ಲಕ್ಷ್ಮೀನಾರಾಯಣ ಹಾಗೂ ಪತ್ರಕರ್ತರರು ಸೇರಿ ದೂಳು ಮಿಶ್ರಿತ ಜೆಲ್ಲಿ ಮೂಟೆಯಿಂದ ಮುಚ್ಚಿದರು.

Advertisement

ಅಮಾನಿಬೈರಸಾಗರ ಏರಿಯ ಮೇಲೆ ಗುಂಡಿಗಳು ಬಿದ್ದು, ಸಾರ್ವಜನಿಕರು ಓಡಾಡಲು ತುಂಬಾ ತೊಂದರೆಯಾಗಿದ್ದು, ಅಲ್ಲದೆ ಹರಿಯುತ್ತಿರುವ ನೀರಿನಲ್ಲಿ ಗುಂಡಿಗಳು ಕಾಣಿಸದೇ ಅನೇಕ ದ್ವಿಚಕ್ರ ವಾಹನ ಸವಾರರು ನೀರಿನಲ್ಲಿ ಬಿದ್ದು, ಗಾಯಗಳನ್ನು ಮಾಡಿಕೊಳ್ಳುತ್ತಿದ್ದು, ಗುಂಡಿಗಳನ್ನು ಮುಚ್ಚುವಂತೆ ಸಂಬಂಧಪಟ್ಟ ಲೋಕೋಪಯೋಗಿ ಮತ್ತು ಸಣ್ಣ ನೀರಾವರಿ ಇಲಾಖಾ ಅಧಿಕಾರಿಗಳಿಗೆ ತಹಶೀಲ್ದಾರ್, ಸಾರ್ವಜನಿಕರು ಹೇಳುತ್ತಿದ್ದರು, ಹಾಗೂ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಖುದ್ದಾಗಿ ಹೇಳಿದರು, ಇಲಾಖಾ ಅಧಿಕಾರಿಗಳು ಮಾತ್ರ ಏನೂ ನಡೆದೇ ಇಲ್ಲವೆಂಬಂತೆ ಕಣ್ಣು ಮುಚ್ಚಿರುವುದನ್ನು ಗಮನಿಸಿದ, ತಹಶೀಲ್ದಾರ್ ಹಾಗೂ ಸಿಬ್ಬಂದಿ ಮತ್ತು ಪತ್ರಕರ್ತರೇ ಒಂದು ಟಿಪ್ಪರ್ ಲೋಡ್ ದೂಳು ಮಿಶ್ರಿತ ಜೆಲ್ಲಿಯನ್ನು ತರಿಸಿ, ಅವರುಗಳೇ ಖುದ್ದು ನೀರಿನಲ್ಲಿ ಇಳಿದು, ಮೂಟೆಗಳಲ್ಲಿ ಜೆಲ್ಲಿ ಯನ್ನು ತುಂಬಿಕೊಂಡು ಗುಂಡಿಯಲ್ಲಿ ತಾತ್ಕಾಲಿಕವಾಗಿ ಸಾರ್ವಜನಿಕರು ಹಾಗೂ ವಾಹನ ಸವಾರರು ಓಡಾಡಲು ತೊಂದರೆಯಾಗದೆ ಮಾಡಿದ್ದಾರೆ.

ಇದ್ದನ್ನು ನೋಡಿದ ಸಾರ್ವಜನಿಕರು ತಹಶೀಲ್ದಾರ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಲೋಕೋಪಯೋಗಿ ಮತ್ತು ಸಣ್ಣ ನೀರಾವರಿ ಇಲಾಖಾ ಅಧಿಕಾರಿಗಳಿಗೆ ಚೀಮಾರಿ ಹಾಕಿದ್ದಾರೆ.

ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿ ಚನ್ನಕೃಷ್ಣ, ಪತ್ರಕರ್ತರಾದ ಬಾಲಾಜಿ, ಸತೀಶ್ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next