Advertisement

Hindenburg Report: ವರ್ಚಸ್ಸಿಗೆ ಮಸಿ ಬಳಿಯಲು ಯತ್ನ- ಗೌತಮ್‌ ಅದಾನಿ

09:24 PM Jul 18, 2023 | Team Udayavani |

ನವದೆಹಲಿ: ಅಮರಿಕದ ಹಿಂಡನ್‌ಬರ್ಗ್‌ ರಿಸರ್ಚ್‌ ನಮ್ಮ ಕಂಪನಿಯ ವರ್ಚಸ್ಸಿಗೆ ಮಸಿ ಬಳಿಯಲೆಂದೇ ಉದ್ದೇಶಪೂರ್ವಕವಾಗಿ ವ್ಯತಿರಿಕ್ತ ವರದಿಯನ್ನು ಪ್ರಕಟಿಸಿತ್ತು ಎಂದು ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್‌ ಅದಾನಿ ಆರೋಪಿಸಿದ್ದಾರೆ.

Advertisement

ನವದೆಹಲಿಯಲ್ಲಿ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾತೃಭೂಮಿ ಭಾರತ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಸಾಧಿಸಲಿದೆ. ಅದಕ್ಕಾಗಿಯೇ ತಮ್ಮ ಇಡೀ ಉದ್ದಿಮೆ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ. ಬಂದರು ಕ್ಷೇತ್ರದಿಂದ ವಿದ್ಯುತ್‌ ಉತ್ಪಾದನೆ ವರೆಗಿನ ವಿವಿಧ ಕ್ಷೇತ್ರಗಳ ಕಂಪನಿಗಳು ಈಗ ಮತ್ತಷ್ಟು ಬಲವರ್ಧನೆಗೊಂಡಿವೆ.

ತಮ್ಮ ವಿವಿಧ ಕಂಪನಿಗಳು ಉತ್ತಮ ರೀತಿಯಲ್ಲಿ ನಿರ್ವಹಿಸಲ್ಪಡುತ್ತವೆ ಎಂದು ಅದಾನಿ ಸಮರ್ಥನೆಯನ್ನೂ ನೀಡಿದ್ದಾರೆ. ಜ.24ರಂದು ಹಿಂಡನ್‌ಬರ್ಗ್‌ ರಿಸರ್ಚ್‌ ಅದಾನಿ ಗ್ರೂಪ್‌ ಷೇರು ಪೇಟೆಗಳಲ್ಲಿ ವಂಚನೆ ಮಾಡುತ್ತಿದೆ ಎಂದು ಆರೋಪಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next