ಉಡುಪಿ: ಮಳೆಗಾಲದಲ್ಲಿ ಮಲೇರಿಯಾ, ಡೆಂಗ್ಯೂ ಸಹಿತ ಸಾಂಕ್ರಾಮಿಕ ರೋಗಗಳ ಪ್ರಕರಣಗಳು ಹೆಚ್ಚುತ್ತಿದ್ದು, ಆರೋಗ್ಯ ಇಲಾಖೆ ಮುಂಜಾಗರೂಕತೆ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈಗಾಗಲೇ ಮನೆ-ಮನೆಗೆ ತೆರಳಿ ಕರಪತ್ರಗಳನ್ನು ಹಂಚಲಾಗಿದೆ.
ಈಗಾಗಲೇ ವಿತರಣೆಯಾಗಿರುವ ಸೊಳ್ಳೆ ಪರದೆಗಳು ಸರಿಯಾದ ರೀತಿಯಲ್ಲಿ ಉಪಯೋಗ ಆಗುತ್ತಿಲ್ಲ ಎಂಬ ಆರೋಪವೂ ಕೇಳಿ ಬರುತ್ತಿದೆ. ಬಹುತೇಕ ಮಂದಿ ಕೊಬ್ಬರಿ ಒಣಗಿಸಲು, ಮಳೆನೀರು ಸೋಸಲು, ಕೀಟಗಳ ಭಾದೆ ತಪ್ಪಿಸಲು ಇವುಗಳನ್ನು ಅಳವಡಿಸುವಂತಹ ಘಟನೆಗಳು ನಡೆಯುತ್ತಿವೆ. ಆರೋಗ್ಯ ಇಲಾಖೆ ಎಷ್ಟೇ ಜಾಗೃತಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದರೂ ಸಾರ್ವಜನಿಕರೂ ಕೂಡ ಸಹಕಾರ ನೀಡಬೇಕಿದೆ ಎಂದು ಹೇಳುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು. 50 ಮಲೇರಿಯಾ, 90 ಡೆಂಗ್ಯೂ ಪ್ರಕರಣ.
2015ರಲ್ಲಿ ಮಲೇರಿಯಾ 1,366, ಡೆಂಗ್ಯೂ 331, 2016ರಲ್ಲಿ ಮಲೇರಿಯಾ 1,168, ಡೆಂಗ್ಯೂ 600, 2017ರಲ್ಲಿ ಮಲೇರಿಯಾ 513, ಡೆಂಗ್ಯೂ 383, 2018ರಲ್ಲಿ ಮಲೇರಿಯಾ 221, ಡೆಂಗ್ಯೂ 228 ಹಾಗೂ 2019ರ ಜುಲೈ ತಿಂಗಳವರೆಗೆ 50 ಮಲೇರಿಯಾ ಹಾಗೂ 97 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.
ಆಗಬೇಕಿದೆ ಮತ್ತಷ್ಟು ಜಾಗೃತಿ
ಆರೋಗ್ಯ ಇಲಾಖೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಆಯೊಜಿಸಿದರೂ ಸಿಕ್ಕಲೆಲ್ಲ ಕಸ, ತ್ಯಾಜ್ಯ ಎಸೆಯುವವರ ಸಮಖ್ಯೆಯೇನೂ ಕಡಿಮೆಯಾಗಿಲ್ಲ. ಹೊಟೇಲು, ಕಾರ್ಖಾನೆಗಳ ತ್ಯಾಜ್ಯ ನೀರು ಹರಿಯುವುದು ನಿಂತಿಲ್ಲ. ನಗರದ ಹಲವಾರು ವಾರ್ಡ್‌ಗಳಲ್ಲಿ ಬಾವಿ ಸೇರುತ್ತಿರುವ ಚರಂಡಿ ನೀರಿನ ಸಮಸ್ಯೆಯೂ ಹಾಗೆಯೇ ಉಳಿದಿದೆ. ತೆರೆದ ಚರಂಡಿಯಲ್ಲಿ ತ್ಯಾಜ್ಯ ನೀರು ಹರಿಯುವ ದೃಶ್ಯ ಹಲವೆಡೆ ಸಿಗುತ್ತಿವೆ. ಇದಕ್ಕೆಲ್ಲ ಕಡಿವಾಣ ಹಾಕಬೇಕಿದ್ದರೆ ಆರೋಗ್ಯ ಇಲಾಖೆಯಷ್ಟೇ ನಗರಸಭೆ, ಸ್ಥಳೀಯ ವಾರ್ಡ್ ಸದಸ್ಯರು, ಸಾರ್ವಜನಿಕರ ಶ್ರಮ ಕೂಡ ಅತೀ ಅಗತ್ಯವಾಗಿದೆ.
Advertisement
ಸೊಳ್ಳೆ ಪರದೆಗೂ ಅಪಾರ ಬೇಡಿಕೆಯಿದ್ದು ಈ ವರ್ಷ ಜುಲೈ ತಿಂಗಳವರೆಗೆ ಜಿಲ್ಲೆಯಾದ್ಯಂತ ಒಟ್ಟು 23,548 ಸೊಳ್ಳೆ ಪರದೆಗಳನ್ನು ವಿತರಿಸಲಾಗಿದೆ. 2018ರಲ್ಲಿ ಒಟ್ಟು 23,315 ಸೊಳ್ಳೆ ಪರದೆಗಳನ್ನು ವಿತರಿಸಲಾಗಿತ್ತು. ಸೊಳ್ಳೆ ಪರದೆ ವಿತರಣೆಯ ಸಂಖ್ಯೆ ಈ ವರ್ಷಾಂತ್ಯಕ್ಕೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯೂ ಇದೆ. ಇದು ಸರಕಾರದಿಂದ ವಿತರಣೆಯಾಗುತ್ತಿದ್ದರೆ ಖಾಸಗಿಯಾಗಿ ಕೊಂಡುಕೊಳ್ಳುವವರೂ ಇದ್ದಾರೆ. ಸಮರ್ಪಕ ರೀತಿ ಉಪಯೋಗವಾಗಲಿ
ಆಗಬೇಕಿದೆ ಮತ್ತಷ್ಟು ಜಾಗೃತಿ
ಆರೋಗ್ಯ ಇಲಾಖೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಆಯೊಜಿಸಿದರೂ ಸಿಕ್ಕಲೆಲ್ಲ ಕಸ, ತ್ಯಾಜ್ಯ ಎಸೆಯುವವರ ಸಮಖ್ಯೆಯೇನೂ ಕಡಿಮೆಯಾಗಿಲ್ಲ. ಹೊಟೇಲು, ಕಾರ್ಖಾನೆಗಳ ತ್ಯಾಜ್ಯ ನೀರು ಹರಿಯುವುದು ನಿಂತಿಲ್ಲ. ನಗರದ ಹಲವಾರು ವಾರ್ಡ್‌ಗಳಲ್ಲಿ ಬಾವಿ ಸೇರುತ್ತಿರುವ ಚರಂಡಿ ನೀರಿನ ಸಮಸ್ಯೆಯೂ ಹಾಗೆಯೇ ಉಳಿದಿದೆ. ತೆರೆದ ಚರಂಡಿಯಲ್ಲಿ ತ್ಯಾಜ್ಯ ನೀರು ಹರಿಯುವ ದೃಶ್ಯ ಹಲವೆಡೆ ಸಿಗುತ್ತಿವೆ. ಇದಕ್ಕೆಲ್ಲ ಕಡಿವಾಣ ಹಾಕಬೇಕಿದ್ದರೆ ಆರೋಗ್ಯ ಇಲಾಖೆಯಷ್ಟೇ ನಗರಸಭೆ, ಸ್ಥಳೀಯ ವಾರ್ಡ್ ಸದಸ್ಯರು, ಸಾರ್ವಜನಿಕರ ಶ್ರಮ ಕೂಡ ಅತೀ ಅಗತ್ಯವಾಗಿದೆ.
ದುರುಪಯೋಗ ಬೇಡ
ಸಾಂಕ್ರಾಮಿಕ ರೋಗ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಟಯರು, ಸೀಯಾಳ ಚಿಪ್ಪು , ಒಡೆದ ಬಾಟಲಿಯಲ್ಲಿ ನೀರು ಸಂಗ್ರಹವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮೈ ಮುಚ್ಚುವ ಬಟ್ಟೆ ಧರಿಸಿ, ಸೊಳ್ಳೆ ಬತ್ತಿ, ಪರದೆ ಅಳವಡಿಸಬೇಕು. ಇಲಾಖೆಯಿಂದ ನೀಡುವ ಸೊಳ್ಳೆ ಪರದೆಗಳನ್ನು ದುರುಪಯೋಗ ಮಾಡಬಾರದು.
-ಡಾ| ಪ್ರಶಾಂತ್ ಭಟ್, ಮಲೇರಿಯಾ ನಿಯಂತ್ರಣಾಧಿಕಾರಿ