Advertisement
ಅಮೆರಿಕ, ಈಜಿಪ್ಟ್, ಇಸ್ರೇಲ್ ಹಾಗೂ ಕತಾರ್ ನಡುವಿನ ಮಾತುಕತೆಯ ಪ್ರಕಾರ ಈಗಾಗಲೇ ಪಾಸ್‌ಪೋರ್ಟ್ ಹೊಂದಿರುವ ಪ್ಯಾಲೆಸ್ತೀನಿಯರಿಗೆ ದೇಶತೊರೆಯಲು ಇಸ್ರೇಲ್ ಅನುವು ಮಾಡಿಕೊಟ್ಟಿದೆ. ಈ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕದನವಿರಾಮ ಘೋಷಿಸುವಂತೆ ಸಲಹೆ ನೀಡಿದ್ದಾರೆ. ಅರಬ್ ರಾಷ್ಟ್ರಗಳೂ ಕೂಡ ಈ ನಿಟ್ಟಿನಲ್ಲಿ ಇಸ್ರೇಲ್ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸುತ್ತಿರುವುದಾಗಿ ಹೇಳಿದ್ದಾರೆ. ಮತ್ತೂಂದೆಡೆ ಇತ್ತೀಚೆಗಷ್ಟೇ ಇಸ್ರೇಲ್ ಜತೆಗೆ ಸ್ನೇಹ ಬೆಸೆದುಕೊಂಡಿದ್ದ ಬಹ್ರೈನ್ ಕೂಡ ತನ್ನ ರಾಯಭಾರಿಗಳನ್ನು ಹಿಂದಕ್ಕೆ ಕರೆಸಿಕೊಂಡಿದೆ. ಅತ್ತ ಹಮಾಸ್ ಉಗ್ರರು ಕೂಡ ರಾತ್ರೋರಾತ್ರಿ ಇಸ್ರೇಲ್ ಪಡೆಗಳ ಮೇಲೆ ಡ್ರೋನ್‌ದಾಳಿ ನಡೆಸಿರುವುದು ವರದಿಯಾಗಿದೆ.
ಗಾಯಗೊಂಡ ಪ್ಯಾಲೆಸ್ತೀನಿಯರ ಚಿಕಿತ್ಸೆಗಾಗಿ ಹಾಸ್ಪಿಟಲ್ ಶಿಪ್‌ಗ್ಳನ್ನು ಈಜಿಪ್ಟ್ಗೆ ಕಳುಹಿಸಿಕೊಡುವಂತೆ ಜರ್ಮನ್‌ನಲ್ಲಿರುವ ಇಸ್ರೇಲಿ ರಾಯಭಾರಿಗಳು ವಿಶ್ವರಾಷ್ಟ್ರಗಳಿಗೆ ಕರೆ ನೀಡಿದ್ದಾರೆ. ಗಾಜಾದಲ್ಲಿನ ಜನರಿಗೆ ಸಹಾಯ ಮಾಡಲು ಯುರೋಪ್ ರಾಷ್ಟ್ರಗಳು ಅವಕಾಶ ಕೋರುತ್ತಿವೆ. ಈ ಹಿನ್ನೆಲೆಯಲ್ಲಿ ಪ್ಯಾಲೆಸ್ತೀನಿಯರು ಈಜಿಪ್ಟ್ಗೆ ತೆರಳಲು ಇಸ್ರೇಲ್ ಅವಕಾಶವನ್ನೂ ನೀಡಿದೆ. ಜನರಿಗೆ ನೆರವು ನೀಡಬಯಸುವವರು ನೇರ ಈಜಿಪ್ಟ್ಗೆ ಹಾಸ್ಪಿಟಲ್ ಶಿಪ್‌ಗ್ಳನ್ನು ಕಳುಹಿಸಿಕೊಡಿ ಎಂದಿದ್ದಾರೆ.