Advertisement

ಕೋಲಿ ಸಮಾಜಕ್ಕೆ ಪರಿಷತ್‌ ಸದಸ್ಯತ್ವಕ್ಕಾಗಿ ಯತ್ನ

11:58 AM Sep 15, 2018 | |

ಕಲಬುರಗಿ: ಕಾಡಿ ಬೇಡಿಯಾದರೂ ಈ ಬಾರಿ ಒಂದು ಎಂಎಲ್‌ಸಿ, ಎರಡು ನಿಗಮ ಮಂಡಳಿಗೆ ಸ್ಥಾನವನ್ನು ಸಮಾಜಕ್ಕೆ ತಂದು ಕೊಡುವುದಾಗಿ ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ್‌ ವಾಗ್ಧಾನ ಮಾಡಿದರು. ನಗರದ ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾ ಕೋಲಿ ಸಮಾಜ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿತರಾಗಿ ಅವರು ಮಾತನಾಡಿದರು.

Advertisement

ಕೋಲಿ ಸಮಾಜಕ್ಕೆ ನಿರಂತರವಾಗಿ ರಾಜಕೀಯ ಅನ್ಯಾಯವಾಗಿದೆ. ಅದನ್ನು ನಮ್ಮವರೇ ಮಾಡಿರುವುದು ದುರಂತ. ನನಗೆ ಮಕ್ಕಳಿಲ್ಲ. ನೀವೇ ಮಕ್ಕಳು ಎನ್ನುತ್ತ ಜೀವ ಕೊಡುತ್ತೇನೆ. ಆಸ್ತಿ ಕೊತ್ತೇನೆ ಎನ್ನುತ್ತಲೇ ಸಮಾಜಕ್ಕೆ ಸಿಗುವ ಎಲ್ಲ ಸೌಕರ್ಯಗಳನ್ನು ಒಬ್ಬರೇ ಅನುಭವಿಸಿರುವುದು ನಮ್ಮ ಸಮಾಜದ ರಾಜಕೀಯ ಅಂಗವೈಕಲ್ಯಕ್ಕೆ ಕಾರಣವಾಗಿದೆ
ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಹಲವಾರು ವರ್ಷಗಳಿಂದ ಬೀದರ ಜಿಲ್ಲೆಯಲ್ಲಿ ಟೋಕರೆ ಕೋಳಿ, ಕೋಳಿ, ಗೊಂಡ ಜಾತಿಗಳಿಗೆ ಎಸ್‌ಟಿ ಪ್ರಮಾಣ ಪತ್ರ ಕೊಡಲಾಗುತ್ತಿದೆ. ಇದನ್ನು ಕಲಬುರಗಿ ಜಿಲ್ಲೆಯಲ್ಲಿ ಪಡೆಯಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಶೀಘ್ರವೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗುವುದು. ಅಲ್ಲದೆ, ದೆಹಲಿಗೆ ನಿಯೋಗ
ಕೊಂಡೋಯ್ದು ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಿ ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸಲು ಮನವಿ ಮಾಡಲಾಗುವುದು ಎಂದು ಹೇಳಿದರು.

ಲೋಕಸಭೆ ಚುನಾವಣೆಗೂ ಮುನ್ನ ಎಸ್‌ಟಿಗೆ ಸೇರಿಸಲು ಒತ್ತಡ ಹೇರೋಣ. ನಮ್ಮ ನಾಯಕರಾದ ಡಾ| ಮಲ್ಲಿಕಾರ್ಜುನ ಖರ್ಗೆ ಅವರಿಗೂ ಈ ಕುರಿತು ಆಸಕ್ತಿ ಇದ್ದು, ಅದನ್ನು ಮಾಡಿಸಿಕೊಳ್ಳೋಣ ಎಂದು ಹೇಳಿದರು. ಕಾರ್ಯಕ್ರಮ ಸಂಯೋಜಕ ಹಾಗೂ ಕೋಲಿ ಸಮಾಜ ರಾಜ್ಯ ಗೌರವಾಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಬಿ. ನಾರಾಯಣರಾವ್‌ ನಮ್ಮ ಸಮಾಜದಲ್ಲಿ ಒಬ್ಬ ಅಪರೂಪದ ರಾಜಕಾರಣಿ. ತನ್ನ ರಕ್ತದ ಒಂದೊಂದು ಹನಿ ಧಾರೆ ಎರೆದು ಶಾಸಕರಾಗಿ ಚುನಾಯಿತರಾಗುವಂತೆ ಎಲ್ಲ ಸಮುದಾಯದ ಜನರಲ್ಲಿ ಪ್ರೇರಣೆ, ಪ್ರಜ್ಞೆ ಜಾಗೃತಿ ಮಾಡಿರುವ ನಾಯಕ. ಬಿ. ನಾರಾಯಣರಾವ್‌ ಅವರು, ಬೀದರನಲ್ಲಿ ದಿ| ಧರ್ಮಸಿಂಗ್‌ ಅವರನ್ನು ಗೆಲ್ಲಿಸಿದಂತೆ ಕಲಬುರಗಿಯಲ್ಲೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಖಂಡಿತ ಗೆಲ್ಲಿಸಲು ಟೊಂಕ ಕಟ್ಟಿ ನಮ್ಮೊಂದಿಗೆ ನಿಲ್ಲುತ್ತಾರೆ. ಕೋಲಿ ಸಮಾಜದ ಹಿರಿಯರಾದ ಶಿವಶರಣಪ್ಪ ಕೋಬಾಳ ಹಾಗೂ ಹಿರಿಯ ದಲಿತ ಮುಖಂಡ ವಿಠuಲ ದೊಡ್ಡಮನಿ, ಸಾನ್ನಿಧ್ಯ ವಹಿಸಿದ್ದ ತೊನಸನಳ್ಳಿಯ ಅಲ್ಲಮಪ್ರಭು ಸಂಸ್ಥಾನ ಮಠದ ಪೀಠಾಧಿಪತಿ ಮಲ್ಲಣ್ಣಪ್ಪ ಮುತ್ಯಾ, ಅತಿಥಿಯಾಗಿ ಆಗಮಿಸಿದ್ದ ವಿಧಾನ ಪರಿಷತ್‌ ಮಾಜಿ ಸದಸ್ಯ ಅಲ್ಲಂಪ್ರಭು ಪಾಟೀಲ, ಮೇಯರ್‌ ಶರಣಕುಮಾರ ಮೋದಿ, ಕೋಲಿ ಸಮಾಜದ ವಿಜಯಪುರ ಜಿಲ್ಲಾಧ್ಯಕ್ಷ ಶರಣಪ್ಪ ಕಣಮೇಶ್ವರ ಮಾತನಾಡಿದರು.

ಜಗದ್ಗುರು ಡಾ| ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು, ಹಳ್ಳಿಖೇಡದ ದತ್ತಾತ್ರೇಯ ಗುರೂಜಿ, ಶ್ರೀಮತಿ ನಾರಾಯಣರಾವ್‌, ಶಿವಲಿಂಗಪ್ಪ ಕಿನ್ನೂರ, ಭೀಮಣ್ಣ ಸಾಲಿ, ತಿಪ್ಪಣ್ಣ ರೆಡ್ಡಿ ಆರ್‌.ಎಂ. ನಾಟೀಕಾರ, ಮಲ್ಲಿಕಾರ್ಜುನ ಸಾಹು, ಮಹಾಂತೇಶ ಪಾಟೀಲ, ಶರಣಪ್ಪ ತಳವಾರ, ರವಿರಾಜ ಕೊರವಿ, ಜಗನ್ನಾಥ ಜಮಾದಾರ, ವಸಂತ ನರಿಬೋಳ, ಲಕ್ಷ್ಮೀಪುತ್ರ ಜಮಾದಾರ, ದೇವೇಂದ್ರಪ್ಪ ಜಮಾದಾರ, ಮಹಾರಾಯ ಅಗಸಿ, ಅಣ್ಣಪ್ಪ ಜಮಾದಾರ, ರೇವಣಸಿದ್ದಪ್ಪ ಕಮಾನಮನಿ, ಅರ್ಜುನ ಜಮಾದಾರ, ದೇವೀಂದ್ರಪ್ಪ ತೆಗನೂರು, ಸೈಬಣ್ಣ ಜಮಾದಾರ, ರಾಜೇಂದ್ರ ರಾಜವಾಳ, ಭೀಮಾಶಂಕರ ಫಿರೋಜಾಬಾದ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next