ಬೆಂಗಳೂರು : ಬಿಟ್ಕಾಯಿನ್ ಹಗರಣದ ಆರೋಪ ನಿರ್ಲಕ್ಷಿಸುವುದು ವ್ಯವಸ್ಥಿತ ತಂತ್ರ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರು ಶುಕ್ರವಾರ ಟ್ವೀಟ್ ಮಾಡಿದ್ದಾರೆ.
”ಬಿಟ್ಕಾಯಿನ್ ಹಗರಣದ ಆರೋಪ ನಿರ್ಲಕ್ಷಿಸುವುದು ವ್ಯವಸ್ಥಿತ ತಂತ್ರ.ಈ ಹಗರಣ ಈಗಾಗಲೇ ದೇಶಾದ್ಯಾಂತ ಸದ್ದು ಮಾಡುತ್ತಿದೆ.
ಈ ಸಂದರ್ಭದಲ್ಲಿ ಕೇಂದ್ರದ ಬಿಜೆಪಿ ನಾಯಕರು ಪಾರದರ್ಶಕ ತನಿಖೆ ನಡೆಸಲು ಬೊಮ್ಮಾಯಿಯವರಿಗೆ ಆಗ್ರಹಿಸಬೇಕು.ಅದರ ಬದಲು ನಿರ್ಲಕ್ಷಿಸಿ ಎಂದು ಸಲಹೆ ಕೊಟ್ಟರೆ ತನಿಖೆ ಹಳ್ಳ ಹಿಡಿಯುವುದಂತೆ.ಹಗರಣದ ತನಿಖೆ ಪಾರದರ್ಶಕವಾಗಿ ನಡೆಯಲಿ.” ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ ಬಿಟ್ ಕಾಯಿನ್ ಪ್ರಕರಣದಲ್ಲಿ ಪೊಲೀಸರು, ಸರ್ಕಾರ ಎಲ್ಲರೂ ಇದ್ದಾರೆ: ಪ್ರಿಯಾಂಕ್ ಖರ್ಗೆ
ಬಿಟ್ ಕಾಯಿನ್ ಹಗರಣದ ತನಿಖೆಯನ್ನು ಕೇಂದ್ರ ಹಾಗೂ ರಾಜ್ಯದ ತನಿಖಾ ಸಂಸ್ಥೆಗಳು ನಡೆಸುತ್ತಿವೆ.ಈ ಹಗರಣದಲ್ಲಿ ಬಿಜೆಪಿ ನಾಯಕರ ಹೆಸರು ಕೇಳಿಬರುತ್ತಿದೆ.ಹೀಗಿರುವಾಗ ಆರೋಪ ನಿರ್ಲಕ್ಷಿಸಿದರೆ ಹಗರಣ ಮುಚ್ಚಿ ಹಾಕುವ ಯತ್ನವಲ್ಲವೇ? ಪ್ರಧಾನಿಯಾದವರು ಸರಿಯಾದ ತನಿಖೆ ನಡೆಸಿ ಆರೋಪಮುಕ್ತರಾಗಿ ಎಂಬ ಸಲಹೆ ನೀಡಬೇಕು.ನಿರ್ಲಕ್ಷಿಸಿ ಎಂದರೆ ಅರ್ಥವೇನು? ಎಂದು ಇನ್ನೊಂದು ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ.