Advertisement
“ಉದಯವಾಣಿ’ ವತಿಯಿಂದ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿನ ಅವಕಾಶಗಳ ಬಗ್ಗೆ ಪತ್ರಿಕೆಯ ಕಚೇರಿಯಲ್ಲಿ ಏರ್ಪಡಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಡಾ| ಕೆಂಪೇಗೌಡ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಭುವನೇಶ್ವರಿ, ಜಿಲ್ಲಾ ಅಗ್ರಣಿ ಬ್ಯಾಂಕ್ ಪ್ರಬಂಧಕ ಪಿ.ಎಂ.ಪಿಂಜರ್, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ| ಧನಂಜಯ ಪಾಲ್ಗೊಂಡು ಮಾತನಾಡಿದರು.
Related Articles
Advertisement
ಸತೀಶಕುಮಾರ್ ಶೆಟ್ಟಿ ಯಡ್ತಾಡಿ, ರಾಮಕೃಷ್ಣ ಭಟ್‌ಕೆಂಜೂರು
ಬೆಂಬಲ ಬೆಲೆ ತಡವಾಗಿ ಘೋಷಿಸುವುದು ಏಕೆ?
ರೈತರಿಗೆ ಅನುಕೂಲ ವಾಗುವಂತೆ ಆದಷ್ಟು ಶೀಘ್ರ ಬೆಂಬಲ ಬೆಲೆ ಘೋಷಿಸಲು ಕ್ರಮ ವಹಿಸಲಾಗುವುದು.
ಸದಾನಂದ ಜತ್ತನ್ನ ಮಲ್ಪೆ
ತೆಂಗಿನ ಮರದ ಕಾಂಡದಲ್ಲಿ ಕೆಂಪು ನೀರು ಬರುತ್ತಿದೆ.
ನೀರು ನಿಲ್ಲುವ ಜಾಗದಲ್ಲಿ ಇಂಥ ಸಮಸ್ಯೆ ಕಂಡು ಬರುತ್ತದೆ. ಬೇಸಗೆಯಲ್ಲಿ ನೀರು ಕೊಡುವಾಗ 1 ಲೀ. ನೀರಿಗೆ 2 ಎಂಎಲ್ ಎಕ್ಸಾಪುಂಜುಲ್ ರಾಸಾಯನಿಕ ದ್ರಾವಣ ಬೆರೆಸಿ ಒಂದು ಗಿಡಕ್ಕೆ 10 ಎಂಎಲ್ ಬೇರಿಗೆ ಸಿಗು ವಂತೆ ಕೊಡಬೇಕು. ಒಂದು ತಿಂಗಳು ಎಳನೀರು ತೆಗೆಯ ಬಾರದು. ಒಂದು ವಾರ ಬಿಟ್ಟು ನೀರು ಕೊಡಬೇಕು.
ಹಮೀದ್ ವಿಟ್ಲ
ಯುವಕರು ಕೃಷಿಯತ್ತ ಬರಲು ಯೋಜನೆಗಳೇನು?
ಕೃಷಿ ಭೂಮಿ ಇರುವವರಿಗೆ ಬೆಳೆ ಸಾಲವನ್ನು ನೀಡಲಾಗುತ್ತಿದೆ. ಭೂಮಿ ಇಲ್ಲದವರು ಜಾನುವಾರು ಸಾಕಣೆ, ಕೋಳಿ ಸಾಕಣೆ ಕೈಗೊಳ್ಳಬಹುದು. ಸಮೀಪದ ಬ್ಯಾಂಕ್ ಶಾಖೆಗಳಿಗೆ ಹೋದರೆ ಅಲ್ಲಿ ತಿಳಿಸುತ್ತಾರೆ.
ಬಾಬು ಸವಣೂರು, ಸದಾನಂದ ನಾಯಕ್ ಕಳತ್ತೂರು
ಯಂತ್ರ ಖರೀದಿಸುವಾಗ ಹಿಂದೆ ಸಿಗುತ್ತಿದ್ದ ಸಬ್ಸಿಡಿ ಈಗ ಇಳಿದಿರುವುದು ಏಕೆ?
ಹೋದ ವರ್ಷ ಎಸ್‌ಸಿ/ಎಸ್‌ಟಿಯವರಿಗೆ ಶೇ.90 ಸಬ್ಸಿಡಿ ಇತ್ತು. ಈಗ ಎಸ್‌ಸಿ/ಎಸ್‌ಟಿ ಯವರಿಗೆ ಶೇ.50ಕ್ಕೆ ಮತ್ತು ಸಾಮಾನ್ಯ ವರ್ಗಕ್ಕೆ ಶೇ.40ಕ್ಕೆ ಇಳಿದಿದೆ. ಇದು ಮುಂದೆ ಬದಲಾವಣೆಯಾಗ ಬಹುದು. ಸರಕಾರದ ಗಮನಕ್ಕೆ ತರುತ್ತೇವೆ. ಸಂಘಗಳಿಂದ ಮನವಿ ಬಂದರೆ ಸರಕಾರಕ್ಕೆ ತಿಳಿಸುತ್ತೇವೆ. ಒಂದು ಸಂಸ್ಥೆಗೆ ಶೇ.75ರಷ್ಟು ಸಬ್ಸಿಡಿಯಲ್ಲಿ ಯಂತ್ರ ಸಿಕ್ಕಿದರೆ ಮತ್ತೆ ಅದೇ ಸಂಸ್ಥೆಗೆ ಕೊಡುವುದಿಲ್ಲÉ.
ಶೇಖರ ಕೋಟ್ಯಾನ್ ಪಿತ್ರೋಡಿ, ನಾರಾಯಣ ನಾಯಕ್ ನೇರಳಕಟ್ಟೆ
ಕೊರೊನಾದಿಂದ ನಗರ ಪ್ರದೇಶ ಬಿಟ್ಟು ಹಳ್ಳಿಗಳಿಗೆ ಬಂದಿದ್ದಾರೆ. ಕೃಷಿ ಮಾಹಿತಿ ಸರಿಯಾಗಿ ಸಿಗುತ್ತಿಲ್ಲ.
ಪ್ರತೀ ಹೋಬಳಿಯಲ್ಲಿ ಇರುವ ರೈತ ಸಂಪರ್ಕ ಕೇಂದ್ರ ಗಳಲ್ಲಿ, ಗ್ರಾ.ಪಂ. ಮೂಲಕ ಸರಕಾರದ ಯೋಜನೆಗಳನ್ನು ಕರಪತ್ರಗಳ ಮೂಲಕ ತಿಳಿಸುತ್ತೇವೆ. ಪತ್ರಿಕಾ ಮಾಧ್ಯಮಗಳ ಮೂಲಕ ಆಕಾಶವಾಣಿ ಮೂಲಕವೂ ಬಿತ್ತರಿಸುತ್ತೇವೆ. ತೋಟಗಾರಿಕಾ ಇಲಾಖೆಯ ಉಡುಪಿಯ ಶಿವಳ್ಳಿ, ವಾರಂಬಳ್ಳಿ, ಕುಂದಾಪುರದ ಕೆದೂರು, ಕುಂಭಾಸಿ, ಕಾರ್ಕಳದ ರಾಮಸಮುದ್ರ, ಕುಕ್ಕುಂದೂರು ತೋಟಗಾರಿಕಾ ಕ್ಷೇತ್ರಗಳಲ್ಲಿ ಅಡಿಕೆ, ತೆಂಗು, ಕಾಳುಮೆಣಸು, ಗೇರು ಇತ್ಯಾದಿ ಗಿಡಗಳನ್ನು ಸರಕಾರ ನಿಗದಿಪಡಿಸಿದ ದರದಲ್ಲಿ ರೈತರಿಗೆ ವಿತರಿಸುತ್ತಿದ್ದೇವೆ.
ರೋಹಿಣಿ ಬಾಲಚಂದ್ರ ದೊಡ್ಡಣಗುಡ್ಡೆ, ಮನೋಹರ ಪರ್ಕಳ, ಕೃಷ್ಣಪ್ರಸಾದ ಪುತ್ತೂರು, ಶ್ಯಾಮಸುಂದರ ವಿಟ್ಲ
ಹೆಚ್ಚು ಪ್ರಮಾಣದಲ್ಲಿ ಆಮ್ಲಜನಕ ಉತ್ಪಾದಿಸುವ ಮರಗಳು ಯಾವುವು? ಲಾಭದಾಯಕ ಬೆಳೆ ಯಾವುದು? ಬಾವಿ ತೋಡಲು ನೆರವು ಇದೆಯೆ? ಸಾವಯವ ಗೊಬ್ಬರ ತಯಾರಿಗೆ ಪ್ರೋತ್ಸಾಹಗಳೇನು?
ಅರಳಿಮರ, ಬೇವಿನ ಮರ, ಆಲದ ಮರ ಹೆಚ್ಚು ಆಮ್ಲಜನಕ ಉತ್ಪಾದಿಸುತ್ತವೆ. ಬೆಂಡೆಯಂತಹ ತರಕಾರಿ ಬೆಳೆ, ಮಲ್ಲಿಗೆ ಕೃಷಿ ಕಡಿಮೆ ಸಮಯದಲ್ಲಿ ಆದಾಯ ಕೊಡು ತ್ತವೆ. ಬಾವಿ ನಿರ್ಮಾಣ, ತೆಂಗು, ಅಡಿಕೆ, ಗೇರು, ಮಲ್ಲಿಗೆಗೆ ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಮಾಡಿಸಿದರೆ ಅನುಕೂಲ. ಸಾವಯವ ಗೊಬ್ಬರ ತಯಾರಿಗೆ ಪೂರಕವಾಗಿ ದನದ ಕೊಟ್ಟಿಗೆ ನಿರ್ಮಿಸಲು ನರೇಗಾದಡಿ ಅವಕಾಶವಿದೆ. ಬ್ಯಾಂಕ್‌ಗಳಲ್ಲಿ ಕೃಷಿ ಅಭಿವೃದ್ಧಿ ಸಾಲ ಸಿಗುತ್ತದೆ.
ಚಂದ್ರಶೇಖರ ಬೆಳ್ತಂಗಡಿ
ಅಡಿಕೆಗೆ ಬಸವನಹುಳು ಬಾಧೆ ಇದೆ.
ಬೇಸಗೆಯಲ್ಲಿ ಅಡಿಕೆ ಸೋಗೆಯನ್ನು ಕವುಚಿ ಹಾಕಿ. ಸ್ಪ್ರಿಂಕ್ಲರ್ ಮೂಲಕ ನೀರು ಬಿಟ್ಟರೆ ಹುಳುಗಳು ಶೇಖರಣೆ ಯಾಗುತ್ತದೆ. ಇವುಗಳಿಗೆ ಸುಣ್ಣ ಹಾಕಿದರೆ ಸಾಯುತ್ತವೆ.
ದಯಾನಂದ ಉಡುಪಿ
ನೆಟ್‌ವರ್ಕ್ ಕೊರತೆಯಿಂದ ಬೆಳೆ ಸಮೀಕ್ಷೆ ಸರಿಯಾಗುತ್ತಿಲ್ಲ
ಬೆಳೆ ಸಮೀಕ್ಷೆಯನ್ನು ರೈತರ ಆ್ಯಪ್ ಮೂಲಕ ನಡೆಸಲಾ ಗುತ್ತಿದೆ. ಅವಕಾಶವಿಲ್ಲದಿದ್ದರೆ ಗ್ರಾಮಗಳಲ್ಲಿ ನೇಮಿಸಿದ ಸಿಬಂದಿ ಮೂಲಕ ಮಾಡಬಹುದು. ಸರಕಾರದಿಂದಲೇ ಸಮೀಕ್ಷೆ ಕೈಗೊಳ್ಳುವಾಗ ಎಲ್ಲ ಮಾಹಿತಿ ಪಡೆಯಲಾಗುವುದು.
ಪ್ರಾಣೇಶ ಹೆಜಮಾಡಿ
ತೆಂಗಿನ ಮರ ಹತ್ತುವವರಿಗೆ ತರಬೇತಿ ಕೊಟ್ಟರೆ ಉತ್ತಮ ತೆಂಗಿನ ಮರ ಹತ್ತುವ ಇತ್ತೀಚಿನ ತಂತ್ರಜ್ಞಾನ ಮಾಹಿತಿ ಯನ್ನು ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಸಿದ್ದೆವು. ಈ ವರ್ಷ ಮಂಜೂರಾದರೆ ಮಾಡಿಸುತ್ತೇವೆ. ಈ ತರಬೇತಿಗೆ ವಿಮೆ ಮಾಡಿಸಲಾಗುತ್ತಿದೆ. ಈಗ ಸೇಫ್ಟಿ ಬೆಲ್ಟ್ ಸಹ ಬಂದಿದೆ.
ಸಾಯಿತೋಷ ಸಚ್ಚೇರಿಪೇಟೆ
ಮಾವಿನ ಹಣ್ಣುಗಳಲ್ಲಿ ಹುಳ ಆಗುತ್ತಿದೆ.
ಮೂರು ಬಾರಿ ಔಷಧ ಸಿಂಪಡಿಸಬೇಕು.ಕನಿಷ್ಠ ಮಿಡಿ ಆಗುವಾಗಲಾದರೂ ಮಾಡಬೇಕು. ಹುಳವನ್ನು ಟ್ರ್ಯಾಪ್ ಮಾಡುವ ಕ್ರಮವಿದೆ. ಬಕೆಟ್‌ನಲ್ಲಿ ನೀರು ಇರಿಸಿ ಹುಳಗಳು ಅದಕ್ಕೆ ಬೀಳುವಂತೆ ಮಾಡಬೇಕು. ವಾರಕ್ಕೊಂದು ಬಾರಿ ನೀರು ಬದಲಾಯಿಸಬೇಕು. ಇದು ಸೂಕ್ತ.
ವಿಜಯ ಉಪ್ಪಿನಂಗಡಿ
ನೇಂದ್ರ ಬಾಳೆ ಗಿಡದ ಎಲೆ ಬಿಳಿಯಾಗುತ್ತಿದೆ.
ಬೋರ್ಡೋ ದ್ರಾವಣವನ್ನು ಮಣ್ಣಿಗೆ ಬೆರೆಸಿ ಹಾಕಬೇಕು ಮತ್ತು ಸಿಂಪಡಣೆ ಮಾಡಬೇಕು.
ನಾರಾಯಣ ಬಂಟ್ವಾಳ
ವರ್ಷದಲ್ಲಿ ಹಲವು ಬಾರಿ ಗಾಳಿ ಮಳೆಗೆ ಅಡಿಕೆ ತೋಟ ನಾಶವಾಗುತ್ತಿದೆ. ಸರಿಯಾದ ಪರಿಹಾರ ಸಿಗುತ್ತಿಲ್ಲ.
ಶೇ.33ರಷ್ಟು ಹಾನಿಯಾದರೆ ಮಾತ್ರ ಪರಿಹಾರ ದೊರಕುತ್ತದೆ. ಹೀಗಾಗಿ ಪ್ರತೀ ಬಾರಿ ನಾಶವಾದಾಗ ಅದರ ಪ್ರಮಾಣವನ್ನು ಫೋಟೋ, ದಾಖಲೆ ಸಹಿತ ಇಲಾಖೆಯ ಗಮನಕ್ಕೆ ತಂದು ಅರ್ಜಿ ಸಲ್ಲಿಸಬೇಕು.
ರಮಾದೇವಿ ಸಸಿಹಿತ್ಲು
ಉಪ್ಪುನೀರಿನ ಪ್ರದೇಶದಲ್ಲಿ ಯಾವ ಬೆಳೆ ಸೂಕ್ತ?
ತೆಂಗು, ಗೇರು ಸೂಕ್ತ. ಉಪ್ಪುನೀರಿನ ಪ್ರದೇಶದಲ್ಲಿ ಕೆಂಪು ಮಣ್ಣು ಹಾಕಿ ಗೋಮೂತ್ರ, ಗೊಬ್ಬರ ಹಾಕಿ ಪೋಷಕಾಂಶ ಹೆಚ್ಚಿಸಿದರೆ 3 ವರ್ಷದ ಬಳಿಕ ಇಳುವರಿ ಪಡೆಯಬಹುದು. ಗೋಣಿ ಚೀಲಗಳಲ್ಲಿ ಕೆಂಪು ಮಣ್ಣು ಹಾಕಿ ಸಿಹಿ ನೀರು ಬಳಸಿ ಬೆಂಡೆಯಂತಹ ತರಕಾರಿಗಳನ್ನು ಬೆಳೆಯಬಹುದು.
ಪುತ್ರನ್, ಸಂತೆಕಟ್ಟೆ
ಬಾವಿ ನಿರ್ಮಿಸಲು ಅಗತ್ಯದ ಸಾಲ ಸಿಗುತ್ತಿಲ್ಲ.
ಸರಕಾರದ ನಿಯಮಾನುಸಾರ ಬ್ಯಾಂಕ್‌ಗಳಲ್ಲಿ ಸಾಲ ಮಂಜೂರಾಗುತ್ತದೆ. ನೀವು ಎಷ್ಟು ಸಾಲ ಸಿಗುತ್ತದೋ ಅಷ್ಟನ್ನು ಪಡೆದು, ಉಳಿದ ಮೊತ್ತವನ್ನು ಬೆಳೆ ಸಾಲ ಯೋಜನೆಯಡಿ ಪಡೆದುಕೊಳ್ಳಬಹುದು.
ಲವೀನಾ ಮಂಗಳೂರು
ದ.ಕ. ಜಿಲ್ಲೆಯಲ್ಲಿ ಕೃಷಿ ಮಾಹಿತಿ ಎಲ್ಲಿಂದ ಲಭ್ಯ?
ಕಂಕನಾಡಿ ಕೃಷಿ ವಿಜ್ಞಾನ ಕೇಂದ್ರ (ಮೀನುಗಾರಿಕಾ ಕಾಲೇಜು ಸಮೀಪ) ಲಭ್ಯ. ಯೋಜನೆಗಳ ಕುರಿತು ರೈತ ಸಂಪರ್ಕ ಕೇಂದ್ರ ಮತ್ತು ತಾಲೂಕು ಸಹಾಯಕ ತೋಟ ಗಾರಿಕಾ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.
ಶ್ಯಾಮ ನಾಯಕ್ ಕಾರ್ಕಳ, ಸುಂದರ ಭಟ್ ಬಂಟ್ವಾಳ
ಕಾಳು ಮೆಣಸಿನ ರೋಗಕ್ಕೆ ಔಷಧವೇನು?
ನೀರು ನಿಂತಾಗ ಈ ರೋಗ ಬರುತ್ತದೆ. ಬೋಡೋì ದ್ರಾವಣವನ್ನು ಕಾಂಡಕ್ಕೆ ಹಚ್ಚುವುದು, ಸಿಂಪಡಿಸುವ ಕ್ರಮ ಕೈಗೊಳ್ಳಬೇಕು. ಕಾಪ್ಪರ್ ಫಾಸ್ಪೇಟ್‌ಗೆ ಸಬ್ಸಿಡಿ ಇದ್ದು, ಔಷಧದ ಬಿಲ್‌ನ್ನು ನೀಡಿದರೆ ಸಬ್ಸಿಡಿ ದೊರಕುತ್ತದೆ.
ನೆಲ್ಯಾಡಿ ಸುಕುಮಾರ್
ಅಡಿಕೆ ಸಸಿ ನೆಟ್ಟಿದ್ದು ನೀರಿನ ಕೊರತೆ ಇದೆ.
ಇಂತಹ ಸಂದರ್ಭ ಹನಿ ನೀರಾವರಿ ಪದ್ಧತಿ ಅನುಸರಿಸಬೇಕು. ಸಸಿ ಬುಡದಲ್ಲಿ ತರಗೆಲೆಯನ್ನು ದಪ್ಪವಾಗಿ ಹಾಕಿದರೆ ನೀರಿನ ಅಂಶ ಕಡಿಮೆ ಸಾಕಾಗುತ್ತದೆ.
ಪ್ರಕಾಶ ಪಡಿಯಾರ್ ಮರವಂತೆ
ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಕೃಷಿ ತರಬೇತಿ ಕೊಡಬೇಕು.
ಎಸೆಸೆಲ್ಸಿ ಕಲಿಯುವುದರ ಒಳಗೆ ಒಂದು ಸಿಲೆಬಸ್ ಇರಬೇಕು. ಬಿಸಿಯೂಟ ನಡೆಯುವಲ್ಲಿ ತರಕಾರಿ ಬೆಳೆಸಲು ಸಲಹೆ ನೀಡುತ್ತಿದ್ದೇವೆ. ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ, ಕೃಷಿ ಇಲಾಖೆಯವರನ್ನು ಶಾಲೆಗಳಿಗೆ ಆಹ್ವಾನಿ ಸಿದರೆ ಮಾರ್ಗದರ್ಶನ ನೀಡುತ್ತಾರೆ.
ಸರಸ್ವತಿ ಭಟ್ ಬ್ರಹ್ಮಾವರ
ಕರಾವಳಿಯಲ್ಲಿ ಸಿರಿಧಾನ್ಯ ಬೆಳೆಯ ಬಹುದೆ?
ಎರಡನೆಯ ಬೆಳೆಯಾಗಿ ರಾಗಿ, ರಾಗಿ ಹರಿವೆ ಬೆಳೆಯಬಹುದು. ಇದರ ಬೀಜ ಕೃಷಿ ವಿಜ್ಞಾನ
ಕೇಂದ್ರದಲ್ಲಿ ಲಭ್ಯವಿದೆ.
ಸಹಾಯವಾಣಿ :
ಕೃಷಿ ಇಲಾಖೆ ಉಡುಪಿ 0820-2574960
ತೋಟಗಾರಿಕೆ ಇಲಾಖೆ 0820-2531950
ಅಗ್ರಣಿ ಬ್ಯಾಂಕ್ ಪ್ರಬಂಧಕರು 9449860858
ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ 0820-2563923