Advertisement
ಅ.19ರ ಸಂಜೆ 4.30ರ ಸುಮಾರಿಗೆ ನಡೆದ ಗುಬ್ಬಿ ಗೇಟ್ ಸರ್ಕಲ್ ಸಮೀಪ ನಡೆದ ಘಟನೆಯಲ್ಲಿ ಹಿಂದೂಪರ ಸಂಘಟನೆಯಾದ ಭಜರಂಗದಳದ ತುಮಕೂರು ಜಿಲ್ಲಾ ಸಂಚಾಲಕ ಮಂಜು ಭಾರ್ಗವ್ ಮತ್ತು ಕಿರಣ್ ಎಂಬುವವರ ಮೇಲೆ ಒಂದು ಸಮು ದಾಯದ ಜನರು ನಡೆಸಿರುವ ಮಾರಾಣಾಂತಿಕ ಹಲ್ಲೆಯನ್ನು ಖಂಡಿಸಿ, ಅ.22ರಂದು ತುಮಕೂರು ಬಂದ್‌ಗೆ ವಿಶ್ವ ಹಿಂದೂ ಪರಿಷತ್ ಕರೆ ನೀಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Related Articles
Advertisement
ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ತುಮಕೂರು: ನಗರದ ಗುಬ್ಬಿ ಗೇಟ್ ಸಮೀಪ ಸಂಜೆ 4.30 ಗಂಟೆಯಲ್ಲಿ ಇಬ್ಬರು ವ್ಯಕ್ತಿಗಳ ಮೇಲೆ ಏಕಾಏಕಿ ಗುಂಪು ಕಟ್ಟಿಕೊಂಡು ಗಲಾಟೆ ಮಾಡಿರುವ ಸಂಬಂಧ ಐದು ಜನರನ್ನು ಬಂಧಿಸ ಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ತಿಳಿಸಿದ್ದಾರೆ. ಈ ಘಟನೆಯಲ್ಲಿ ರಕ್ತ ಗಾಯವಾಗಿದ್ದು, ಘಟನೆ ಸಂಬಂಧಪಟ್ಟಂತೆ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣ ಗಂಭೀರ ಸ್ವರೂಪದಲ್ಲಿ ಇದ್ದುದರಿಂದ ಆರೋಪಿಗಳನ್ನು ದಸ್ತಗಿರಿ ಮಾಡಲು ಎರಡು ತಂಡಗಳನ್ನು ರಚಿಸಲಾಗಿದ್ದು, ಈಗಾಗಲೇ ಐದು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣ ತನಿಖೆ ಹಂತದಲ್ಲಿ ಇರುವುದರಿಂದ ಆರೋಪಿಗಳ ಹೆಸರು ಬಹಿರಂಗ ಮಾಡಿಲ್ಲ. ಇನ್ನು ಉಳಿದ ಆರೋಪಿಗಳ ಸುಳಿವು ಸಿಕ್ಕಿದ್ದು, ಶೀಘ್ರವಾಗಿ ಪತ್ತೆ ಮಾಡಿ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರತ್ಯೇಕ ತಂಡ ರಚನೆ: ಈ ಘಟನೆಗೆ ಸಂಬಂಧ ಪಟ್ಟಂತೆ ನಗರದ ಹೊರ ವಲಯ ರಿಂಗ್ ರೋಡ್ ಮತ್ತು ನಗರ ರಸ್ತೆಗಳಲ್ಲಿ ವೀಲಿಂಗ್ ಮಾಡುತ್ತಿರು ವುದರಿಂದ ಹೆಚ್ಚಿನ ಸಮಸ್ಯೆಗಳು ಉಂಟಾಗುತ್ತಿರು ವುದರಿಂದ ಪ್ರತ್ಯೇಕವಾಗಿ ತಂಡವನ್ನು ರಚನೆ ಮಾಡಲಾಗಿದ್ದು, ಬೈಕ್ ವೀಲಿಂಗ್ ಮಾಡುವವರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸೂಕ್ಷ್ಮ ಪ್ರದೇಶಗಳಲ್ಲಿ ಹಗಲು ರಾತ್ರಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.