Advertisement

ಹುಮನಾಬಾದ: ಪಿ.ಎಫ್.ಐ., ಎಸ್.ಡಿ‌‌‌.ಪಿ.ಐ.ಗೆ ಸಂಬಂಧಿಸಿದ ಮನೆ ಹಾಗೂ ಕಚೇರಿ ಮೇಲೆ ದಾಳಿ

02:19 PM Sep 29, 2022 | Team Udayavani |

ಹುಮನಾಬಾದ: ಪಟ್ಟಣದ ಮೂರು ಕಡೆಗಳ ಪಿ.ಎಫ್.ಐ.,ಎಸ್.ಡಿ‌‌‌.ಪಿ.ಐ.ಗೆ ಸಂಬಂಧಿಸಿದ ಮನೆ ಹಾಗೂ ಕಚೇರಿ ಮೇಲೆ ದಾಳಿ ಪೊಲಿಸ್ ಅಧಿಕಾರಿಗಳ ರಕ್ಷಣೆಯಲ್ಲಿ ಕಂದಾಯ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

Advertisement

ನಿಷೇಧಿತ ಸಂಘಟನೆಯಾದ ಪಿ.ಎಫ್.ಐ. ಅಧ್ಯಕ್ಷನ ಮನೆ, ಕಚೇರಿ ಹಾಗೂ ಎಸ್.ಡಿ.ಪಿ.ಐ. ಕಚೇರಿ ಮೇಲೆ ಜಿಲ್ಲಾ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಕಂದಾಯ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.

ಸೆ.29ರ ಗುರುವಾರ ಮಧ್ಯಾಹ್ನ ಪಟ್ಟಣದ ನೂರ ಖಾನ್ ಅಖಾಡಾದಲ್ಲಿನ ಪಿಎಫ್ಐ ಜಿಲ್ಲಾಧ್ಯಕ್ಷ ಅಬ್ದುಲ್ ಕರೀಂನ ಮನೆ ಹಾಗೂ ಅಗಡಿ ಲೇಔಟ್ ನಲ್ಲಿನ ಪರ್ಫೆಕ್ಟ್ ಕಂಪ್ಯೂಟರ್ ಹಾಗೂ ಪಟ್ಟಣದ ಶಿವಪುರ ಬಡಾವಣೆಯಲ್ಲಿನ ಎಸ್.ಡಿ.ಪಿ.ಐ ಸಂಘಟನೆಯ ಕಚೇರಿ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಏಕಕಾಲಕ್ಕೆ ಮೂರು ಕಡೆ ದಾಳಿ:

ಅಬ್ದುಲ್ ಕರೀಂಗೆ ಸಂಬಂಧಿಸಿದ ಕಂಪ್ಯೂಟರ್ ಕೇಂದ್ರದ ಮೇಲೆ ತಹಶೀಲ್ದಾರ ಪ್ರದೀಪ ಕುಮಾರ ಹಿರೇಮಠ ನೇತೃತ್ವದಲ್ಲಿ ದಾಳಿ ನಡೆದಿದೆ. ಬಸವ ಕಲ್ಯಾಣ ಸಿಪಿಐ ಸುಶೀಲ ಕುಮಾರ, ಹುಲಸೂರ್ ಪಿಎಸ್ಐ ಲಿಂಗಪ್ಪ ಮಣ್ಣೂರ್ ಹಾಗೂ ಸಿಬ್ಬಂದಿಗಳು ಬಂದೋಬಸ್ತ್ ವಹಿಸಿದ್ದಾರೆ.

Advertisement

ಜಿಲ್ಲಾಧ್ಯಕ್ಷನ ಮನೆಯ ಮೇಲೆ ಗ್ರೇಡ್-2 ತಹಶೀಲ್ದಾರ ಮಂಜುನಾಥ ಪಂಚಾಳ ದಾಳಿ ನಡೆಸಿ, ಪರಿಶೀಲನೆ ಮಾಡಿದ್ದು, ಎಎಸ್ಪಿ ಶಿವಾಂಶು ರಜಪೂತ್, ಸಿಪಿಐ ಶರಣಬಸಪ್ಪ ಕೋಡ್ಲಾ, ಪಿಎಸ್ಐ ಮಂಜನಗೌಡ್ ಪಾಟೀಲ ಹಾಗೂ ಇತರೆ ಸಿಬ್ಬಂದಿಗಳು ಇದ್ದರು.

ಅದೇ ರೀತಿ ಶಿವಪುರದ ಎಸ್.ಡಿ‌‌‌.ಪಿ.ಐ. ಕಚೇರಿ ಮೇಲೆ ಬಸವ ಕಲ್ಯಾಣ ಸಹಾಯ ಆಯುಕ್ತ ರಮೇಶ ಕೋಳಾರ ನೇತೃತ್ವದಲ್ಲಿ ದಾಳಿ ನಡೆದಿದ್ದು, ಚಿಟಗುಪ್ಪ ಸಿಪಿಐ ಅಮೂಲ ಕಾಳೆ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಂದೋಬಸ್ತ್ ನಲ್ಲಿ ಭಾಗವಹಿಸಿದರು.

ಜಿಲ್ಲಾ ಪೊಲೀಸ್ ಹೆಚ್ಚುವರಿ ಎಸ್.ಪಿ.  ಮಹೇಶ ದಾಳಿ ನಡೆದ ಪ್ರದೇಶದಲ್ಲಿ ಸಂಚರಿಸುತ್ತಿರುವುದು ಕಂಡು ಬಂತು. ಮಧ್ಯಾಹ್ನ ಒಂದು ಗಂಟೆಗೆ ಏಕ ಕಾಲಕ್ಕೆ ದಾಳಿ ನಡೆದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next