Advertisement

Attack: ಗಾಯಕ ಎ.ಪಿ. ಧಿಲ್ಲೋನ್‌ ಮನೆ ಬಳಿ ಗುಂಡಿನ ದಾಳಿ

01:25 AM Sep 03, 2024 | Team Udayavani |

ಹೊಸದಿಲ್ಲಿ: ಕೆನಡಾದ ವ್ಯಾಂಕೋವರ್‌ನಲ್ಲಿರುವ ಪಂಜಾಬಿ ಗಾಯಕ ಎಪಿ ಧಿಲ್ಲೋನ್‌ ಅವರ ಮನೆಯ ಹೊರಗೆ ರವಿವಾರ ರಾತ್ರಿ ಗುಂಡಿನ ದಾಳಿ ನಡೆದಿದೆ.

Advertisement

ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ಸಹಚರ ರೋಹಿತ್‌ ಗೋಡಾರಾ ಈ ದಾಳಿಯ ಹೊಣೆ ಯನ್ನು ಹೊತ್ತಿದ್ದಾನೆ. ವಿಕ್ಟೋರಿಯಾ ದ್ವೀಪದಲ್ಲಿರುವ ಧಿಲ್ಲೋನ್‌ ಮನೆ ಬಳಿ ಹಾಗೂ ಟೊರಾಂಟೋದ ವುಡ್‌ಬ್ರಿಡ್ಜ್ ಬಳಿ ದಾಳಿ ನಡೆದಿರುವ ವೀಡಿಯೋ ವೈರಲ್‌ ಆಗಿದ್ದು, ರೋಹಿತ್‌ ಗೋಡಾರಾ ಹೊಣೆ ಹೊತ್ತ ಪೋಸ್ಟ್‌ ಸಹ ಎಲ್ಲೆಡೆ ಹರಿದಾಡುತ್ತಿದೆ.

ಧಿಲ್ಲೋನ್‌ ಇತ್ತೀಚೆಗೆ ಬಾಲಿವುಡ್‌ ನಟರಾದ ಸಲ್ಮಾನ್‌ ಖಾನ್‌ ಹಾಗೂ ಸಂಜಯ್‌ ದತ್‌ ಅವರೊಂದಿಗೆ ಮಾಡಿದ್ದ ಹೊಸ ಹಾಡು “ಓಲ್ಡ್‌ ಮನಿ’ ಬಿಡುಗಡೆಯಾಗಿದೆ. ಸಲ್ಮಾನ್‌ ಜತೆ ಕಾಣಿಸಿಕೊಂಡಿದ್ದಕ್ಕೆ ಧಿಲ್ಲೋನ್‌ರನ್ನು ಗುರಿಯಾಗಿಸಲಾಗಿದೆ ಎಂದು ಗೋಡಾರಾ ಪೋಸ್ಟ್‌ ತಿಳಿಸಿದೆ. ಸಲ್ಮಾನ್‌ ಖಾನ್‌ ಹತ್ಯೆಗೆ ಹಿಂದಿನಿಂದಲೂ ಬಿಷ್ಣೋಯ್‌ ಗ್ಯಾಂಗ್‌ ಸಂಚು ನಡೆಸುತ್ತಿದೆ. ಇತ್ತೀಚೆಗೆ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಹಲವು ಸುಲಿಗೆ, ಬೆದರಿಕೆ ಮತ್ತು ಹಿಂಸಾತ್ಮಕ ಅಪರಾಧಗಳಲ್ಲಿ ಭಾಗಿಯಾಗಿದ್ದ 11 ಗ್ಯಾಂಗ್‌ಗಳನ್ನು ದಿಲ್ಲಿ ಪೊಲೀಸರು ಪತ್ತೆಹಚ್ಚಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next