Advertisement

ಸ್ನೇಹದ ಅಣೆಕಟ್ಟೆಗೆ ಉಗ್ರರ ದಾಳಿ

03:45 AM Jun 26, 2017 | Team Udayavani |

ಕಾಬೂಲ್‌: ಆಫ್ಘಾನಿಸ್ತಾನ-ಭಾರತದ ಗೆಳೆತನಕ್ಕೆ ಪ್ರತೀಕವಾದ, ಹಾರಿ ನದಿಗೆ ಕಟ್ಟಿರುವ ಪ್ರಮುಖ ಸಲ್ಮಾ ಅಣೆಕಟ್ಟಿಗೆ ದಾಳಿ ನಡೆಸಲು ತಾಲಿಬಾನ್‌ ಉಗ್ರರು ಯತ್ನಿಸಿದ್ದಾರೆ.

Advertisement

ಚಿಸ್ತಿ ಷರೀಫ್ ಜಿಲ್ಲೆಯ ಹೆರಾತ್‌ ಪ್ರಾಂತ್ಯದಲ್ಲಿರುವ ಈ ಅಣೆಕಟ್ಟನ್ನು 1,775 ಕೋಟಿ ರೂ. ವೆಚ್ಚದಲ್ಲಿ ಭಾರತ ಆಫ್ಘಾನಿಸ್ತಾನಕ್ಕೆ ಮರುನಿರ್ಮಾಣ ಮಾಡಿಕೊಟ್ಟಿತ್ತು.

ಸಲ್ಮಾ ಅಣೆಕಟ್ಟಿಗೆ ಸುಮಾರು 13 ಕಿ.ಮೀ. ದೂರದಲ್ಲಿರುವ, ಚೆಸ್ತ್ ಜಿಲ್ಲೆಯಲ್ಲಿನ ಚೆಕ್‌ಪೋಸ್ಟ್‌ಗೆ ತಾಲಿಬಾನ್‌ ಉಗ್ರರು ಶನಿವಾರ ರಾತ್ರಿ ದಾಳಿ ನಡೆಸಿದ್ದು ಈ ವೇಳೆ ನಡೆದ ಗುಂಡಿನ ಕಾಳಗದಲ್ಲಿ 10 ಮಂದಿ ಆಫ‌^ನ್‌ ಪೊಲೀಸರು ಮೃತಪಟ್ಟಿದ್ದಾರೆ. ಜೊತೆಗೆ ಐವರು ಉಗ್ರರೂ ಮೃತಪಟ್ಟಿದ್ದಾರೆ. ಕಾದಾಟದ ವೇಳೆ ಉಗ್ರರು ಅಲ್ಲಿದ್ದ ಶಸ್ತ್ರಾಸ್ತ್ರಗಳನ್ನೂ ಲೂಟಿ ಮಾಡಿದ್ದಾರೆ ಎಂದು ಆಫ‌^ನ್‌ ಸರ್ಕಾರದ ಮೂಲಗಳು ಹೇಳಿವೆ.

2014ರಲ್ಲಿ ಆಫ‌^ನ್‌ನಿಂದ ಅಮೆರಿಕ ಮೈತ್ರಿಕೂಟದ ಪಡೆಗಳು ತಮ್ಮ ಸೈನಿಕ ಬಲವನ್ನು ಹಿಂದೆಗೆದುಕೊಂಡ ಬಳಿಕ ತಾಲಿಬಾನ್‌ ಮತ್ತು ಪಾಕ್‌ ಬೆಂಬಲಿತ ಉಗ್ರರ ಅಟ್ಟಹಾಸ ಜೋರಾಗಿದ್ದು, ಹಿಂಸಾಚಾರ ವ್ಯಾಪಕವಾಗಿದೆ. ಜೊತೆಗೆ ತಾಲಿಬಾನ್‌ ತನ್ನ ಬಾಹುಳ್ಯವನ್ನು ಮತ್ತೆ ಆಫ್ಘಾನ್‌ನಲ್ಲಿ ವಿಸ್ತರಿಸುತ್ತಿದೆ.

ಅಣೆಕಟ್ಟಿಗೆ ಹಾನಿಯಿಲ್ಲ:
ಉಗ್ರ ದಾಳಿ ಕುರಿತಂತೆ ಪ್ರತಿಕ್ರಿಯಿಸಿದ ಆಫ‌^ನ್‌ ಭಾರತೀಯ ರಾಯಭಾರಿ ಮನ್‌ಪ್ರೀತ್‌ ವೋಹ್ರಾ, ಅಣೆಕಟ್ಟಿಗೆ ಸಮಸ್ಯೆ ಆಗಿಲ್ಲ. ಅಣೆಕಟ್ಟಿನಿಂದ ಅನತಿ ದೂರದ ಚೆಕ್‌ಪೋಸ್ಟ್‌ ಮೇಲೆ ದಾಳಿಯಾಗಿದೆ. ಆದಾಗ್ಯೂ ಅಣೆಕಟ್ಟಿಗೆ ಪಾಕ್‌ ಪ್ರಾಯೋಜಿತ ಉಗ್ರರ ಭೀತಿ ನಿರಂತರವಾಗಿದೆ ಎಂದು ಹೇಳಿದ್ದಾರೆ.

Advertisement

ಮೋದಿ ಉದ್ಘಾಟಿಸಿದ್ದ ಸಲ್ಮಾ ಅಣೆಕಟ್ಟು:
ಕಳೆದ ವರ್ಷ ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಅಣೆಕಟ್ಟನ್ನು ಉದ್ಘಾಟಿಸಿದ್ದರು. ದ್ವಿಪಕ್ಷೀಯ ಸಂಬಂಧ ವೃದ್ಧಿ, ರಾಜಕೀಯ ಕಾರ್ಯತಂತ್ರದ ಅನ್ವಯ ಈ ಅಣೆಕಟ್ಟನ್ನು ಭಾರತ ನಿರ್ಮಿಸಿಕೊಟ್ಟಿತ್ತು. ಸುಮಾರು 75 ಸಾವಿರ ಎಕರೆ ಭೂಮಿಗೆ ಈ ಅಣೆಕಟ್ಟು ನೀರುಣಿಸುತ್ತದೆ. ಅಲ್ಲದೇ 42 ಮೆ.ವ್ಯಾ ವಿದ್ಯುತ್‌ ಉತ್ಪಾದನೆ ಮಾಡುತ್ತದೆ. ಹೆರಾತ್‌ ಪ್ರಾಂತ್ಯಕ್ಕೆ ಈ ಅಣೆಕಟ್ಟು ವಿದ್ಯುತ್‌, ನೀರು ಪೂರೈಕೆಯ ಪ್ರಮುಖ ಮೂಲವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next