Advertisement

Manipur; ಭದ್ರತಾ ಪಡೆ ಮೇಲೆ ದಾಳಿ: ಒಬ್ಬ ಕಮಾಂಡೋಗೆ ಗಾಯ

12:40 AM Dec 31, 2023 | Team Udayavani |

ಇಂಫಾಲ್‌: ಮಣಿಪುರದ ಟೆಂಗೌ°ಪಾಲ್‌ ಜಿಲ್ಲೆಯ ಮೋರೆ ಪ್ರದೇಶದಲ್ಲಿ ಭದ್ರತಾ ಪಡೆಗಳನ್ನು ಗುರಿಯಾಗಿಸಿ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಘಟನೆಯಲ್ಲಿ ಪೊಲೀಸ್‌ ಕಮಾಂಡೋ ಒಬ್ಬರು ಗಾಯಗೊಂಡಿರುವುದು ವರದಿಯಾಗಿದೆ. ಶನಿವಾರ ಅಪರಾಹ್ನ 3.50ರ ವೇಳೆಗೆ ಗಡಿ ಪಟ್ಟಣವಾದ ಮೋರೆಯಿಂದ ಕೀ ಲೊಕೇಶನ್‌ ಪಾಯಿಂಟ್‌ ( ಕೆಎಲ್‌ಪಿ)ಗೆ ತೆರಳುತ್ತಿದ್ದಾಗ ಚೌಹಾ° ಗ್ರಾಮದ ಬಳಿ ಪೊಲೀಸ್‌ ವಾಹನದ ಮೇಲೆ ಇದ್ದಕ್ಕಿದ್ದಂತೆ ಕೆಲವು ಶಸ್ತ್ರಧಾರಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.

Advertisement

ಮೊದಲಿಗೆ 2 ಬಾಂಬ್‌ಗಳನ್ನು ಸ್ಫೋಟಿಸಿದ್ದು, ಅನಂತರ 350ರಿಂದ 400 ರೌಂಡ್‌ ಗುಂಡಿನದಾಳಿ ನಡೆಸಿದ್ದಾರೆ. ಬಳಿಕ ಪೊಲೀಸರು ಕೂಡ ಪ್ರತಿದಾಳಿ ನಡೆಸಿದ್ದು, ಗುಂಡಿನ ಚಕಮಕಿಯಲ್ಲಿ 5ಐಆರ್‌ಬಿ ಕಮಾಂಡೋ ಪೊಂಖಲುಂಗ್‌ ಗಾಯಗೊಂಡಿದ್ದಾರೆ. ಅವರನ್ನು 5 ಅಸ್ಸಾಂ ರೈಫ‌ಲ್ಸ್‌ ಶಿಬಿರದಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next