Advertisement

ವ್ಯಕ್ತಿಯ ಮೇಲೆ ತಲವಾರು ದಾಳಿ: ಕಲ್ಲಡ್ಕ ಸಂಪೂರ್ಣ ಬಂದ್‌

11:00 AM Dec 27, 2017 | |

ಬಂಟ್ವಾಳ: ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಮುಸ್ಸಂಜೆ ವ್ಯಕ್ತಿ ಯೊಬ್ಬರ ಮೇಲೆ ತಂಡವೊಂದು ತಲವಾರಿನಿಂದ ಕಡಿದು ಪರಾರಿಯಾಗಿದೆ.

Advertisement

ಘಟನೆಯ ಬೆನ್ನಿಗೇ ನಗರದಲ್ಲಿ ಅಂಗಡಿ ಮುಂಗಟ್ಟುಗಳು ಬಾಗಿಲು ಹಾಕಿಕೊಂಡಿದ್ದು ಪರಿಸರ ನಿರ್ಜನವಾಗಿದೆ. ಸ್ಥಳದಲ್ಲಿ ಪೊಲೀಸರು ವ್ಯಾಪಕ ಬಂದೋಬಸ್ತ್ ಕೈಗೊಂಡಿದ್ದಾರೆ. ಹೆದ್ದಾರಿಯಲ್ಲಿ ವಾಹನ ಸಂಚಾರ ಎಂದಿನಂತಿದೆ.

ವೀರಕಂಭ ನಿವಾಸಿ ಕೇಶವ (33) ಗಾಯಾಳು. ತತ್‌ಕ್ಷಣ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೇಶವ ತನ್ನ ಆ್ಯಕ್ಟಿವಾ ಹೋಂಡ ಸ್ಕೂಟರ್‌ನಲ್ಲಿ ಮನೆಯಿಂದ ಬಂದು ಕಲ್ಲಡ್ಕ ಪೇಟೆಯಲ್ಲಿ ನಿಲ್ಲಿಸಿ ಅದರಲ್ಲಿಯೇ ಕುಳಿತಿದ್ದು ಹಿಂಬದಿ ಸವಾರ ಹತ್ತಿರದ ಕೋಳಿ ಮಾಂಸದ ಅಂಗಡಿಗೆ ಹೋಗಿದ್ದ ಸಂದರ್ಭ ಹಲ್ಲೆ ಘಟನೆ ನಡೆದಿದೆ.

ಈ ಸಂದರ್ಭ ಮಂಗಳೂರು-ಉಪ್ಪಿನಂಗಡಿ ನಡುವಣ ಸರಕಾರಿ ಬಸ್‌ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದರು.

Advertisement

ಗಾಯಾಳು ಹತ್ಯೆ ಆರೋಪಿ
ಹಲ್ಲೆಗೆ ಒಳಗಾದ ವ್ಯಕ್ತಿಯು 2017 ಎ. 20 ರಂದು ಕರೋಪಾಡಿ ಗ್ರಾ.ಪಂ. ಉಪಾಧ್ಯಕ್ಷ ಅಬ್ದುಲ್‌ ಜಲೀಲ್‌ ಹತ್ಯೆ ಪ್ರಕರಣದ 11 ಆರೋಪಿಗಳಲ್ಲಿ ಒಬ್ಬನಾಗಿದ್ದು, ಸುಮಾರು ಒಂದು ತಿಂಗಳ ಹಿಂದೆ ಜಾಮೀನಿನಲ್ಲಿ ಬಿಡುಗಡೆ ಹೊಂದಿದ್ದ.

ಹೆಚ್ಚುವರಿ ಪೊಲೀಸ್‌
ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್‌ ಬಲವನ್ನು ನಿಯೋ ಜಿಸಲಾಗಿದೆ. ವಿಟ್ಲ ವ್ಯಾಪ್ತಿಯಲ್ಲಿಯೂ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ.  ಸ್ಥಳದಲ್ಲಿ ಜಿಲ್ಲಾ ಪೊಲೀಸ್‌ ಅಧೀಕ್ಷಕರು, ಬಂಟ್ವಾಳ ವೃತ್ತನಿರೀಕ್ಷಕ ಪ್ರಕಾಶ್‌, ನಗರ ಠಾಣಾಧಿ ಕಾರಿ ಚಂದ್ರಶೇಖರ್‌, ಗ್ರಾಮಾಂತರ ಠಾಣಾಧಿಕಾರಿ ಪ್ರಸನ್ನ ಇದ್ದಾರೆ. ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಸುಳಿವು ಪತ್ತೆ
ತನಿಖೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಓರ್ವ ಆರೋಪಿಯ ಸುಳಿವು ಪತ್ತೆಯಾಗಿದ್ದು ಹಿನ್ನೆಲೆಯಲ್ಲಿರುವ ಎಲ್ಲರನ್ನೂ ಶೀಘ್ರವೇ ಬಂಧಿಸುತ್ತೇವೆ ಎಂದು ಎಸ್‌ಪಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next