Advertisement

ವೈದ್ಯಕೀಯ ರಂಗದ ಮೇಲೆ ದಾಳಿ ಅ. 2: ರಾಜ್ಯಾದ್ಯಂತ ವೈದ್ಯರ ಮುಷ್ಕರ

07:35 AM Sep 11, 2017 | Team Udayavani |

ಮಂಗಳೂರು: ದೇಶದಲ್ಲಿ ವೈದ್ಯಕೀಯ ರಂಗದ ಮೇಲೆ ಎಲ್ಲೆಡೆಯಿಂದ ಪ್ರಹಾರ ನಡೆಯುತ್ತಿದ್ದು, ವೈದ್ಯರು ಕರ್ತವ್ಯ ನಿರ್ವಹಿಸುವುದು ಕಷ್ಟ ಎಂಬ ಸ್ಥಿತಿ ನಿರ್ಮಾಣವಾಗಿದೆ. ಈ ಗಂಭೀರ ಸಮಸ್ಯೆ ಬಗ್ಗೆ ಸರಕಾರದ ಗಮನ ಸೆಳೆಯಲು ಅ. 2ರ ಗಾಂಧಿ ಜಯಂತಿಯಂದು ರಾಜ್ಯಾದ್ಯಂತ ವೈದ್ಯರು ಅರ್ಧ ದಿನದ ಸಾಂಕೇತಿಕ ಮುಷ್ಕರ ನಡೆಸುವರು ಎಂದು ಐಎಂಎ ರಾಜ್ಯ ಘಟಕದ ಅಧ್ಯಕ್ಷ ಡಾ| ರಾಜಶೇಖರ ಬಳ್ಳಾರಿ ಪ್ರಕಟಿಸಿದರು.

Advertisement

ಶನಿವಾರ ರಾತ್ರಿ ಮಂಗಳೂರು ಐಎಂಎಗೆ ಅಧಿಕೃತ ಭೇಟಿ ನೀಡಿ ಸದಸ್ಯ ರನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರ, ರಾಜ್ಯ ಸರಕಾರ ಸೇರಿದಂತೆ ಎಲ್ಲೆಡೆಯಿಂದ ವೈದ್ಯಕೀಯ ರಂಗದ ಮೇಲೆ ದಾಳಿ ನಡೆಯುತ್ತಿದೆ. ವೈದ್ಯಕೀಯ ರಂಗಕ್ಕೆ ಮಾರಕವಾಗುವ ಕಾನೂನುಗಳನ್ನು ಜಾರಿಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರಕಾರ ಹೊರಟಿವೆ. ಆದ್ದರಿಂದ ವೈದ್ಯರು ಸಂಘತ ಹೋರಾಟ ನಡೆಸುವುದು ಅನಿವಾರ್ಯ ಎಂದವರು ಎಚ್ಚರಿಸಿದರು.

ಕಾಯ್ದೆ  ತಿದ್ದುಪಡಿ ಕೈಬಿಡಿ
ಕೆಪಿಎಂಎ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರಕಾರ ಮುಂದಾಗಿದ್ದು, ಇದನ್ನು ವಿರೋಧಿಸಿ ಕಳೆದ ಜೂನ್‌ನಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಉದ್ದೇಶಿತ ತಿದ್ದುಪಡಿಗಳ ಪರಿಶೀಲನೆಗೆ ಜಂಟಿ ಸದನ ಸಮಿತಿ ನೇಮಕ ಮಾಡಿದೆ. ಉದ್ದೇಶಿತ ತಿದ್ದುಪಡಿಯನ್ನು ಕೈಬಿಡಬೇಕು ಎನ್ನುವುದು ನಮ್ಮ ಒತ್ತಡ ಎಂದವರು ವಿವರಿಸಿದರು.

ಗ್ರಾಹಕ ಸಂರಕ್ಷಣೆ ಕಾಯ್ದೆ ವ್ಯಾಪ್ತಿ ಯಲ್ಲಿ ವೈದ್ಯಕೀಯ ರಂಗವನ್ನೂ ಸೇರಿ ಸಿರುವುದರಿಂದ ವೈದ್ಯರು ಮತ್ತು ಗ್ರಾಹಕರ ಸಂಬಂಧದ ಸ್ವರೂಪವೇ ಬದ ಲಾಗಿದೆ. ದುಬಾರಿ ಚಿಕಿತ್ಸಾ ವೆಚ್ಚ ದಿಂದಾಗಿ ರೋಗಿಗಳ ನಿರೀಕ್ಷೆಯೂ ಹೆಚ್ಚಿದೆ. ವೈದ್ಯರ ತಪ್ಪಿಲ್ಲದಿದ್ದರೂ ವೈದ್ಯರ ಮೇಲೆ, ಆಸ್ಪತ್ರೆಗಳ ಮೇಲೆ ದಾಳಿ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ಸರಕಾರ ನವೆಂಬರ್‌ ಒಂದರಿಂದ ಸಾರ್ವತ್ರಿಕ ವೈದ್ಯಕೀಯ ವಿಮೆ ಜಾರಿಗೊಳಿಸಲು ಮುಂದಾಗಿದ್ದು, ಇದು ವೈದ್ಯರ ವೃತ್ತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ಆತಂಕ ವ್ಯಕ್ತವಾಗಿದೆ. ಈ ಬಗ್ಗೆ ಶೀಘ್ರವೇ ಸಮಗ್ರ ಪರಿಶೀಲನೆ ನಡೆಸಿ ಐಎಂಎ ರಾಜ್ಯ ಘಟಕ ನಿರ್ಧಾರ ಕೈಗೊಳ್ಳಲಿದೆ ಎಂದು ವಿವರಿಸಿದರು.

Advertisement

ಐಎಂಎ ಮಂಗಳೂರು ಘಟಕದ ಅಧ್ಯಕ್ಷ ಡಾ| ಕೆ. ರಾಘವೇಂದ್ರ ಭಟ್‌ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ| ಬಿ. ವೀರಣ್ಣ, ಉಪಾ ಧ್ಯಕ್ಷ ಡಾ| ಶಿವಕುಮಾರ್‌ ಎಫ್‌. ಕುಂಬಾರ, ಸದಸ್ಯತ್ವ ವಿಭಾಗದ ಅಧ್ಯಕ್ಷ ಹರೀಶ್‌ ದೇಲಂತಬೆಟ್ಟು, ಐಎಂಎ ಮಂಗಳೂರು ಘಟಕದ ಕಾರ್ಯ ದರ್ಶಿ ಕದ್ರಿ ಯೋಗೀಶ್‌ ಬಂಗೇರ, ಖಜಾಂಚಿ ಡಾ| ಜಿ.ಕೆ. ಭಟ್‌ ಸಂಕ ಬಿತ್ತಿಲು, ನಿಯೋ ಜಿತ ಅಧ್ಯಕ್ಷ ಡಾ| ಕೆ.ಆರ್‌. ಕಾಮತ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next