ಘಟನೆ ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಶನಿವಾರ ನಡೆದಿದೆ.
Advertisement
ಪಟ್ಟಣದ ವಿವೇಕಾನಂದ ವೃತ್ತದ ಬಳಿ ಇರುವ ಎರಡು ಹೋಟೆಲ್ ಮತ್ತು ಮೂರು ಕಿರಾಣಿ ಅಂಗಡಿಗಳ ಮೇಲೆ ದಾಳಿ ಮಾಡಿ ಅಲ್ಲಿರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕುರಿತು ಪರಿಶೀಲನೆ ನಡೆಸಿದರು. ರಾಹುಲ್ ಲಿಂಗಾಯತಖಾನಾವಳಿ ಮೇಲೆ ದಾಳಿ ಮಾಡಿದಾಗ ಹೋಟೆಲ್ ಮಾಲಿಕ ಹೋಟೆಲ್ ನಡೆಸಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ವತಿಯಿಂದ ಆಹಾರ ಪರವಾನಿಗೆ ನೋಂದಣಿ ಪಡೆಯದಿರುವುದು ಬೆಳಕಿಗೆ ಬಂದಿದೆ.
Related Articles
Advertisement
ಚಹಾ ಮಾಡಲಿಕ್ಕೆ ಬಳಸುವ ಚಹಾ ಪುಡಿಯನ್ನು ತಣ್ಣೀರಿನಲ್ಲಿ ಹಾಕಿದಾಗ ಬಣ್ಣ ಬಿಟ್ಟರೆ ಅದು ಅಪಾಯಕಾರಿಯಾಗಿದ್ದು ಅಂತ ಚಹಾಪುಡಿ ಬಳಸಬಾರದು. ಡೇಟ್ ಡಿಬಾರಾದ ತಂಪು ಪಾನೀಯಗಳನ್ನು ಮಾರಾಟ ಮಾಡಬಾರದು, ಆಹಾರ ಪದಾರ್ಥಗಳನ್ನು ತಯಾರು ಮಾಡಲು ಗುಣಮಟ್ಟದ ಆಹಾರ ಪದಾರ್ಥಗಳನ್ನು ಬಳಕೆ ಮಾಡಬೇಕು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರದ ಜಿಲ್ಲಾ ಅಂಕಿತ ಅಧಿಕಾರಿ ಡಾ| ಮಲ್ಲನಗೌಡ ಬಿರಾದಾರ ಹೋಟೆಲ್ಮಾಲೀಕರಿಗೆ ಮಾಹಿತಿ ನೀಡಿದರು. ಹೋಟೆಲ್, ಕಿರಾಣಿ ಅಂಗಡಿ ಮತ್ತು ಬೇಕರಿಗಳನ್ನು ನೂತನವಾಗಿ ಪ್ರಾರಂಭಿಸುವವರು ಮೊದಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ವತಿಯಿಂದ ಆಹಾರ ಪರವಾನಿಗ್ರೆ ಅಥವಾ ನೋಂದಣಿ ಪತ್ರ ಪಡೆಯಬೇಕು. ನೋಂದಣಿ ಪತ್ರ ಪಡೆಯದಿದ್ದವರು ಕೂಡಲೇ ಪ್ರಾಧಿಕಾರದಿಂದ ನೋಂದಣಿ ಪತ್ರ ಪಡೆದುಕೊಳ್ಳಬೇಕು. ದಾಳಿ ಮಾಡಿದ ಸಂದರ್ಭದಲ್ಲಿ ನೋಂದಣಿ ಪತ್ರ ಇಲ್ಲದಿದ್ದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಮತ್ತು ನಿಯಮ 2011ರ ಅಡಿಯಲ್ಲಿ ಆಹಾರ ವ್ಯಾಪಾರಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸಂತೆ-ಸಂತೆಗೆ ಹೋಗಿ ಮತ್ತು ಬೀದಿ ಬೀದಿಗಳಲ್ಲಿ ಆಹಾರ ಧಾನ್ಯಗಳನ್ನು, ಕಾಳು-ಕಡಿ ಮಾರಾಟ ಮಾಡುವವರು,
ಹಣ್ಣಿನ ವ್ಯಾಪಾರ ಮಾಡುವವರು, ಮಾಂಸ ವ್ಯಾಪಾರ ಮಾಡುವವರು ಕೂಡಾ ಆಹಾರ ವ್ಯಾಪಾರಸ್ಥರಾಗಿದ್ದು ಅವರು ಕೂಡಾ ಪ್ರಾಧಿಕಾರದಿಂದ ಪರವಾನಿಗೆ ಪತ್ರ ಪಡೆದುಕೊಳ್ಳ ಬೇಕು ಎಂದು ತಿಳಿಸಿದ್ದಾರೆ. ಸಿಂದಗಿ ತಾಲೂಕು ಆಹಾರ ಸುರಕ್ಷತಾಧಿಕಾರಿ ರಮೇಶ ಗೆಣ್ಣೂರ, ಬಸವನಬಾಗೇವಾಡಿ ತಾಲೂಕಿನ ಆಹಾರ ಸುರಕ್ಷತಾಧಿಕಾರಿ ಈ.ಎಚ್.ಪಾರೂಕಿ ಇದ್ದರು.